ಮಿಲ್ಕಿ ಬ್ಯೂಟಿ ತಮನ್ನಾ ಮದುವೆ ಡೇಟ್ ಫಿಕ್ಸ್?

ಸಿನಿಮಾ ರಂಗದಲ್ಲಿ ಸಾಕಷ್ಟು ನಟಿ ಮಣಿಯರು ಮದುವೆಯಿಂದ ದೂರ ಉಳಿದು ಬಿಡುತ್ತಾರೆ. ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಳಿಕ ಬೇಗ ಮದುವೆ ಎಂಬ ಬಂಧನಕ್ಕೆ ಒಳಗಾಗುವುದಿಲ್ಲ. ಈ ಸಾಲಿನಲ್ಲಿ ಹಲವು ನಟಿಮಣಿಯರು ಇದ್ದಾರೆ. ಅದರಲ್ಲಿ ತಮನ್ನಾ ಕೂಡ ಒಬ್ಬರು.

ನಟಿ ತಮನ್ನಾ ಸೌತ್‌ ಸಿನಿಮಾರಂಗದ ಹೆಸರಾಂತ ನಟಿ. ಮಿಲ್ಕಿ ಬ್ಯೂಟಿ ಅಂತಲೇ ಹೆಸರುವಾಸಿ. ತಮನ್ನಾ ಕಾಲ್‌ ಶೀಟ್‌ಗಾಗಿ ನಿರ್ಮಾಪಕರು, ನಿರ್ದೇಶಕರು ಸದಾ ಕಾಯುತ್ತಿರುತ್ತಾರೆ. ಬಾಹುಬಲಿ ಸಿನಿಮಾದ ಬಳಿಕ ತಮನ್ನಾ ಹೆಚ್ಚೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ತಮನ್ನಾ ಮಾಡುವ ಕೆಲವೇ ಸಿನಿಮಾಗಳು ಹಿಟ್ ಲಿಸ್ಟ್‌ ಸೇರಿವೆ.

ಈಗ ತಮನ್ನಾ ಸಿನಿಮಾ ಬದಲಿಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ಅವರ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಬಗ್ಗೆ ಸ್ವತಃ ತಮನ್ನಾ ಮಾತನಾಡಿದ್ದಾರೆ.

ಮದುವೆ ಬಗ್ಗೆ ಮಿಲ್ಕಿ ಬ್ಯೂಟಿ ಹೇಳಿದ್ದು ಹೀಗೆ!

ಮದುವೆ ಬಗ್ಗೆ ಮಿಲ್ಕಿ ಬ್ಯೂಟಿ ಹೇಳಿದ್ದು ಹೀಗೆ!

ನಟಿ ತಮನ್ನಾ ತಮ್ಮ ಮದುವೆ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದು, ಮದುವೆ ಆಗುವ ಆಗುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಯಾವಾಗ ಎನ್ನುವ ಬಗ್ಗೆಯೂ ತಮನ್ನಾ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ನಟಿ, ಎರಡು ವರ್ಷ ಬಳಿಕ ಮದುವೆ ಆಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ತಮನ್ನಾ ಮದುವೆಗೆ ಸಿನಿಮಾಗಳೇ ಅಡ್ಡಿ!

ತಮನ್ನಾ ಮದುವೆಗೆ ಸಿನಿಮಾಗಳೇ ಅಡ್ಡಿ!

ಅಷ್ಟಕ್ಕೂ ನಟಿ ತಮನ್ನಾ ಎರಡು ವರ್ಷಗಳನ್ನು ಬಿಟ್ಟು ಮದುವೆ ಆಗುತ್ತೇನೆ ಎಂದು ಹೇಳಲು ಕಾರಣ ಅವರ ಸಿನಿಮಾಗಳಂತೆ. ಸದ್ಯ ಅವರು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮಾಡಿ ಮುಗಿಸುತ್ತಾರಂತೆ. ಬಳಿಕ ಮದುವೆ ಆಗಲಿದ್ದಾರಂತೆ. ಸಿನಿಮಾಗಳನ್ನು ಮುಗಿಸಲು ತಮನ್ನಾಗೆ 2 ವರ್ಷಗಳು ಬೇಕಂತೆ. ಸದ್ಯ 'F3' ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಅತ್ತ ಚಿರಂಜೀವಿ ಜೊತೆಗೂ 'ಭೋಲಶಂಕರ್'‌ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಕನ್ನಡದ ಕಬ್ಜದಲ್ಲಿ ತಮನ್ನಾ!

ಕನ್ನಡದ ಕಬ್ಜದಲ್ಲಿ ತಮನ್ನಾ!

ಈಗ ನಟಿ ತಮನ್ನಾ ಕನ್ನಡಕ್ಕೂ ಎಂಟ್ರಿ ಕೊಡ್ತಿದ್ದಾರೆ. ಕನ್ನಡದ ಬಹುನಿರೀಕ್ಷಿತ ಸಿನಿಮಾ ಕಬ್ಜದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಈ ಸುದ್ದಿ ಇತ್ತೀಚೆಗೆ ಹೊರ ಬಂದಿದೆ. ತಮನ್ನಾ ಎರಡು ತೆಲುಗು ಸಿನಿಮಾಗಳನ್ನು ಮುಗಿಸಿ ನಂತರ, ಕನ್ನಡಕ್ಕೆ ಬರಲಿದ್ದರೆ, ಈಗಾಗಲೇ ಕಬ್ಜ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಬಹುಶಃ ತಮನ್ನಾ ಅವರ ಭಾಗದ ಚಿತ್ರೀಕರಣ ಮುಗಿದರೆ ಇಡೀ ಸಿನಿಮಾ ಪೂರ್ಣಗೊಳ್ಳುತ್ತದೆ. ಸದ್ಯ ತಮನ್ನಾಳ ಕಬ್ಜ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

ತಮನ್ನಾ ಮದುವೆ ಆಗುವ ವರನ್ಯಾರು?

ತಮನ್ನಾ ಮದುವೆ ಆಗುವ ವರನ್ಯಾರು?

ಮದುವೆ ಸುದ್ದಿ ಹಬ್ಬುತ್ತಲೇ ತಮನ್ನಾ ಕೈ ಹಿಡಿಯುವ ವರನ ಬಗ್ಗೆ ಚರ್ಚೆ ಶುರುವಾಗಿದೆ. ಯಾರನ್ನು ಮದುವೆ ಆಗ್ತಾರೆ ಎಂದು ಅಭಿಮಾನಿ ಬಳಗ ಪ್ರಶ್ನೆ ಮಾಡುತ್ತಿದೆ. ಸಿನಿಮಾರಂಗದವನ್ನು ವರಿಸುತ್ತಾರಾ ಅಥವಾ ಯಾರಾದರು ಉದ್ಯಮಿಯ ಕೈ ಹಿಡಿಯುತ್ತಾರಾ ಎನ್ನುವ ಬಗ್ಗೆ ಕುತೂಹಲಗಳು ಮೂಡಿವೆ. ಇದಕ್ಕೆಲ್ಲಾ ನಟಿ ತಮ್ನನಾ ಅವರೇ ಉತ್ತರ ನೀಡಬೇಕು. ಆದರೆ ಅದು ಯಾರೆಂದು ಗೊತ್ತಾವುದು ಇನ್ನು ಎರಡು ವರ್ಷಗಳ ಬಳಿಕ.

More from Filmibeat

English summary
Here Is The Details About Actress Tamanna Wedding Date,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X