ರ‍್ಯಾಪರ್ ಜೊತೆಗೆ ಡೇಟಿಂಗ್ ಮಾಡ್ತಿದ್ದಾರಾ ಸೀತಾ ರಾಮಂ ಬೆಡಗಿ ಮೃಣಾಲ್ ಠಾಕೂರ್?
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ದಕ್ಷಿಣ ಭಾರತೀಯರಿಗೆ ಸೀತಾ ಮಹಾಲಕ್ಷ್ಮಿ ಎಂದೇ ಚಿರಪರಿಚಿತರು. ನಟ ದುಲ್ಕರ್ ಸಲ್ಮಾನ್ ಜೊತೆಗಿನ 'ಸೀತಾ ರಾಮಂ' ಸಿನಿಮಾ ಅವರಿಗೆ ಸಕತ್ ಫೇಮ್ ತಂದುಕೊಟ್ಟಿತು. ಇದಾದ ನಂತರ ಸೌತ್ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರ ಮದುವೆ ವಿಷಯ ಸಕತ್ ಕುತೂಹಲ ಹುಟ್ಟಿಹಾಕಿದೆ.
ನಟ ಅಲ್ಲು ಅರ್ಜುನ್ ಅವರ ತಂದೆ, ನಿರ್ಮಾಪ ಅಲ್ಲು ಅರವಿಂದ್ ಕೂಡ ನಟಿ ಮೃಣಾಲ್ ಠಾಕೂರ್ ತೆಲುಗು ಹುಡುಗನನ್ನೇ ಮದುವೆಯಾಘುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ದೀಪಾವಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾಘಿಯಾಗಿದ್ದ ಮೃಣಾಲ್ ತನ್ನ ಗೆಳೆಯನ ಬಗ್ಗೆ ಹೊಸ ಸೂಚನೆ ಕೊಟ್ಟ ಹಾಗಿದೆ. ಅವರು ಖ್ಯಾತ ಗಾಯಕ, ರ‍್ಯಾಪರ್ ಬಾದ್‌ಷಾ ಜೊತೆಗೆ ಕೈ ಕೈ ಹಿಡಿದು ಕಾಣಿಸಿಕೊಂಡಿದ್ದಾರೆ.

ರ‍್ಯಾಪರ್ ಬಾದ್‌ಷಾ ಜೊತೆಗೆ ಮೃಣಾಲ್ ಡೇಟಿಂಗ್!?
ನವೆಂಬರ್ 10 ರಂದು ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ದೀಪಾವಳಿ ಕಾರ್ಯಕ್ರಮ ಆಯೋಜಿಸಿದ್ದರು. ಇದಕ್ಕೆ ಬಾಲಿವುಡ್ ಸೆಲಬ್ರಿಟಿಗಳು ಸಾಕ್ಷಿಯಾಗಿದ್ದರು. ಪಾರ್ಟಿಗೆ ಮೆರುಗು ತಂದವರಲ್ಲಿ ಮೃಣಾಲ್ ಠಾಕೂರ್ ಮತ್ತು ಬಾದ್ ಷಾ ಸೇರಿದ್ದರು. ಆದರೆ, ಪಾರ್ಟಿಯ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದು ಮಾಡುತ್ತಿದೆ.
ಪಾರ್ಟಿ ಮುಗಿಸಿ ಹೊರಡುವಾಗ ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ಸಿಕ್ಕ ಬಳಿಕ ಇಂಟರ್‌ನೆಟ್‌ನಲ್ಲಿ ಸಕತ್ ವೈರಲ್ ಆಗಿದ್ದು, ಇಬ್ಬರೂ ಡೇಟಿಂಗ್ ಮಾಡುತ್ತಿರಬಹುದು ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದಲ್ಲದೆ ನಟಿ ಪಾರ್ಟಿಯ ಕ್ಯೂಟ್ ಪೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.
ಶಿಲ್ಪಾ ಶೆಟ್ಟಿ, ಬಾದ್‌ಷಾ ಜೊತೆಗಿನ ಫೋಟೋ ಹಂಚಿಕೊಂಡ ಮೃಣಾಲ್
ಕಿರುತೆರೆಯಿಂದ ತಮ್ಮ ವೃತ್ತಿಜೀವನ ಆರಂಭಿಸಿ ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಸಕತ್ ಮೋಡಿ ಮಾಡುತ್ತಿರುವ ನಟಿ ಮೃಣಾಲ್ ಠಾಕೂರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ನವೆಂಬರ್ 12 ರ ಭಾನುವಾರದಂದು ರ‍್ಯಾಪರ್, ಗಾಯಕ ಬಾದ್‌ಶಾ ಮತ್ತು ಶಿಲ್ಪಾ ಶೆಟ್ಟಿ ಅವರೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು. ಇದರಲ್ಲಿ ನನ್ನ ನೆಚ್ಚಿನ ಇಬ್ಬರು ಎಂದು ಶೀರ್ಷಿಕೆ ನೀಡಿದ್ದರು. ಇದೇ ಫೋಸ್ಟ್ ಅನ್ನು ಬಾದ್‌ಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ರೀಪೋಸ್ಟ್ ಮಾಡಿದ್ದಾರೆ.

ಸದ್ಯ ದೀಪಾವಳಿ ಪಾರ್ಟಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಮೃಣಾಲ್ ಠಾಕೂರ್ ಮತ್ತು ಬಾದ್‌ಶಾ ಕೆಲವು ಸೆಕೆಂಡುಗಳ ಕಾಲ ಕೈ ಹಿಡಿದುಕೊಂಡಿದ್ದು, ಬಳಿಕ ಒಂದೇ ಕಾರಿನಲ್ಲಿ ಅಲ್ಲಿಂದ ತೆರಳಿದ್ದಾರೆ. ಮೃಣಾಲ್ ಆಲಿವ್ ಗ್ರೀನ್ ಕಲರ್ ಲೆಹೆಂಗಾದಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡರೇ, ರಾಪರ್ ಬಾದ್‌ಶಾ ಫುಲ್ ಬ್ಲಾಕ್ ಶೇರ್ವಾನಿ ಧರಿಸಿದ್ದರು.
ಮೃಣಾಲ್- ಬಾದ್‌ಶಾ ಜೋಡಿ! ಅಭಿಮಾನಿಗಳ ರಿಯಾಕ್ಷನ್!
ವಿಡಿಯೋ ನೋಡಿದ ನೂರಾರು ಮಂದಿ ಸಕತ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹಲವು ಮಂದಿ ಇದು ನಿಜ ಆಗಿರಲಿಕ್ಕಿಲ್ಲ ಎಂದರೆ, ಮತ್ತೆ ಕೆಲವರು ಇವರು ಡೇಟಿಂಗ್ ಮಾಡುತ್ತಿರಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಬಹಳಷ್ಟು ಅಭಿಮಾನಿಗಳು ಇವರು ಜೋಡಿಯಾಗುವುದು ಬೇಡ ಎಂದೇ ಪ್ರತಿಕ್ರಿಯೆ ನೀಡಿದ್ದಾರೆ.
ಮೃಣಾಲ್ ಠಾಕೂರ್
ಕೆಲವು ದಿನಗಳ ಹಿಂದೆ, ಮೃಣಾಲ್ ಠಾಕೂರ್ ತೆಲುಗು ಹುಡುಗನನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ವದಂತಿ ಹರಡಿತ್ತು. ಇದರಕ್ಕೆ ನಿರ್ಮಾಪಕ ಅಲ್ಲು ಅರವಿಂದ್ ಹೇಳಿಕೆ ಕೂಡ ಪುಷ್ಠಿ ನೀಡಿತ್ತು. ಬಳಿಕ ವದಂತಿಗಳಿಗೆ ಮೃಣಾಲ್ ಠಾಕೂರ್ ಸ್ಪಷ್ಟನೆ ನೀಡಿದ್ದರು. ಸದ್ಯ ನಟಿ ಇಶಾನ್ ಖಟ್ಟರ್ ಅವರೊಂದಿಗೆ 'ಪಿಪ್ಪಾ'ದಲ್ಲಿ ನಟಿಸಿದ್ದು, ಚಿತ್ರ ಬಿಡುಗಡೆಯಾಗಿದೆ. ಇದರ ಜೊತೆಗೆ ತೆಲುಗಿನಲ್ಲಿ 'ಹಾಯ್ ನಾನ್ನ'ದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಜೊತೆಗೆ ನಾಯಕಿಯಾಗಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ಫ್ಯಾಮಿಲಿ ಸ್ಟಾರ್‌ನಲ್ಲಿಯೂ ನಟಿಸಲಿದ್ದಾರೆ.


Click it and Unblock the Notifications











