For Quick Alerts
  ALLOW NOTIFICATIONS  
  For Daily Alerts

  ಹೊಸ ಬಿಸಿನೆಸ್‌ಗೆ ಕೈಯಿಟ್ಟ ನಯನತಾರಾ: 100 ಕೋಟಿ ಹೂಡಿಕೆ!

  |

  ನಯನತಾರಾಗೆ ವಯಸ್ಸು 40 ಸಮೀಪಿಸಿದ್ದರೂ ಸೌಂದರ್ಯವಾಗಲಿ, ಚಿತ್ರರಂಗದಲ್ಲಿ ಬೇಡಿಕೆಯಾಗಲಿ ಕಡಿಮೆ ಆಗಿಲ್ಲ. ಈಗಲೂ ದಕ್ಷಿಣದ ಬೇಡಿಕೆಯ ನಟಿಯರಲ್ಲೊಬ್ಬರು ನಯನತಾರಾ.

  ಕೇವಲ ಬೇಡಿಕೆ ನಟಿ ಮಾತ್ರವಲ್ಲ ನಯನತಾರಾ, ದುಬಾರಿ ನಟಿ ಸಹ. ಎರಡು ದಶಕಗಳಿಂದಲೂ ಸಿನಿಮಾರಂಗದಲ್ಲಿರುವ ನಟಿ ನಯನತಾರಾ ಕೋಟ್ಯಂತರ ಹಣ, ಆಸ್ತಿ ಜೊತೆಗೆ ಹೆಸರು ಸಂಪಾದನೆ ಮಾಡಿದ್ದಾರೆ.

  ಆದರೆ ನಟ-ನಟಿಯರಿಗೆ ವಿಶೇಷವಾಗಿ ನಟಿಯರಿಗೆ ಕೆಲವು ವರ್ಷಗಳ ಬಳಿ ಸಿನಿಮಾ ರಂಗದಲ್ಲಿ ಅವಕಾಶಗಳು ಕಡಿಮೆ ಆಗುತ್ತವೆ. ಸಂಭಾವನೆ ಕುಗ್ಗುತ್ತವೆ, ಪ್ರಾಧಾನ್ಯತೆ ಕಡಿಮೆ ಆಗುತ್ತದೆ. ಆದರೆ ಸಿನಿಮಾದ ಅವಕಾಶ ಕಡಿಮೆಯಾದರೂ ತಮ್ಮ ಭವಿಷ್ಯ ಭದ್ರ ಮಾಡಿಕೊಳ್ಳಲು ನಟ-ನಟಿಯರು ಬೇರೆ ಉದ್ಯಮಗಳಲ್ಲಿ ಹೂಡಿಕೆ ಮಾಡುವುದು ಸಾಮಾನ್ಯ. ಅಂತೆಯೇ ನಟಿ ನಯನತಾರಾ ಸಹ ಇದೀಗ ಕೆಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದೀಗ ಬಹಳ ದೊಡ್ಡ ಹೂಡಿಕೆಯೊಂದನ್ನು ಮಾಡಲು ತಯಾರಾಗಿದ್ದಾರೆ.

  ಕೆಲವು ಉದ್ಯಮ ಹೊಂದಿರುವ ನಯನತಾರಾ

  ಕೆಲವು ಉದ್ಯಮ ಹೊಂದಿರುವ ನಯನತಾರಾ

  ನಯನತಾರಾ ಈಗಾಗಲೆ ಎರಡು ಉದ್ಯಮಗಳನ್ನು ಪ್ರಾರಂಭಿಸಿದ್ದಾರೆ. 'ವಾಯ್ ವಾಲೆ' ಹೆಸರಿನಲ್ಲಿ ಕಾರ್ಪೊರೇಟ್ ಮಾದರಿ ಟೀ ಶಾಪ್‌ಗಳನ್ನು ನಯನತಾರಾ ತೆರೆದಿದ್ದಾರೆ. ಅದರ ಜೊತೆಗೆ 'ದಿ ಲಿಪ್ ಬಾಮ್' ಹೆಸರಿನ ಸೌಂದರ್ಯ ವರ್ಧಕ ಸಂಸ್ಥೆಯನ್ನು ಸಹ ಹೊಂದಿದ್ದಾರೆ. ಇದೀಗ ಇನ್ನೂ ದೊಡ್ಡ ಉದ್ಯಮಕ್ಕೆ ಕೈಹಾಕಿದ್ದಾರೆ ನಟಿ ನಯನತಾರಾ, ಭಾರಿ ದೊಡ್ಡ ಮೊತ್ತವನ್ನು ಈ ಉದ್ಯಮದಲ್ಲಿ ಹೂಡಿಕೆ ಮಾಡಲಿದ್ದಾರೆ.

  ದೊಡ್ಡ ಮೊತ್ತ ಹೂಡಿಕೆ ಮಾಡಲಿದ್ದಾರೆ ನಯನತಾರಾ

  ದೊಡ್ಡ ಮೊತ್ತ ಹೂಡಿಕೆ ಮಾಡಲಿದ್ದಾರೆ ನಯನತಾರಾ

  ನಟಿ ನಯನತಾರಾ ಆಯಿಲ್ ಬಿಸಿನೆಸ್‌ಗೆ ಕೈ ಹಾಕಲಿದ್ದಾರೆ. ಅದೂ ಭಾರತದಲ್ಲಿ ಅಲ್ಲ ಬದಲಿಗೆ ಅರಬ್ ದೇಶಗಳಲ್ಲಿ. ಕೇರಳ ಮೂಲದವರಾಗಿರುವ ನಯನತಾರಾಗೆ ಸಹಜವಾಗಿಯೇ ದುಬೈ ಹಾಗೂ ಅರಬ್ ದೇಶಗಳ ಪರಿಚಯ ಹೆಚ್ಚು, ಹಾಗಾಗಿ ಅಲ್ಲಿನ ಸ್ನೇಹಿತರ ಸಹಾಯದೊಂದಿಗೆ ಕಚ್ಚಾ ತೈಲ ಉದ್ಯಮದಲ್ಲಿ ಬರೋಬ್ಬರಿ 100 ಕೋಟಿ ರುಪಾಯಿಗಳನ್ನು ನಯನತಾರಾ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ.

  ದುಬೈಗೆ ಭೇಟಿ ನೀಡಿದ್ದ ನಯನತಾರಾ

  ದುಬೈಗೆ ಭೇಟಿ ನೀಡಿದ್ದ ನಯನತಾರಾ

  ಕಳೆದ ತಿಂಗಳು ತಮ್ಮ ಬಾಯ್‌ಫ್ರೆಂಡ್ ವಿಘ್ನೇಶ್ ಜೊತೆಗೆ ದುಬೈಗೆ ಭೇಟಿ ನೀಡಿದ್ದ ನಯನತಾರಾ ಹೊಸ ಉದ್ಯಮದ ವಿಷಯವಾಗಿ ಸಾಕಷ್ಟು ಚರ್ಚೆಗಳನ್ನು, ಸಭೆಗಳನ್ನು ನಡೆಸಿದ್ದಾರೆ. ಕಚ್ಚಾ ತೈಲ ಉದ್ಯಮ ಬಹಳ ಲಾಭದಾಯಕ ಉದ್ಯಮ ಎನ್ನಲಾಗುತ್ತಿದ್ದು, ನಯನತಾರಾ ಅವರು ಈ ಉದ್ಯಮಕ್ಕೆ ಕೈ ಹಾಕುತ್ತಿದ್ದಾರೆ. ವಿಘ್ನೇಶ್ ಸಹ ಉದ್ಯಮದಲ್ಲಿ ಪಾಲುದಾರಿಕೆ ಹೊಂದಿರಲಿದ್ದಾರೆ. ಉದ್ಯಮ ಆರಂಭಿಸಲು ಅಗತ್ಯವಾದ ದಾಖಲೀಕರಣ ಇನ್ನಿತರೆ ಕಾರ್ಯಗಳು ಇದೀಗ ಪ್ರಗತಿಯಲ್ಲಿವೆ. ದುಬೈನಲ್ಲಿ ಹೊಸ ಮನೆಯನ್ನೂ ಸಹ ನಯನತಾರಾ ಖರೀದಿಸಲಿದ್ದಾರಂತೆ.

  ಹಲವು ಸಿನಿಮಾಗಳಲ್ಲಿ ನಯನತಾರಾ ಬ್ಯುಸಿ

  ಹಲವು ಸಿನಿಮಾಗಳಲ್ಲಿ ನಯನತಾರಾ ಬ್ಯುಸಿ

  'ಚಾಯ್ ವಾಲೆ' ಫುಡ್ ಬ್ಯುಸಿನೆಸ್, 'ದಿ ಲಿಪ್ ಬಾಮ್' ಸೌಂದರ್ಯವರ್ಧಕ ಸಂಸ್ಥೆ ಜೊತೆಗೆ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಸಹ ನಯನತಾರಾ ಹೊಂದಿದ್ದಾರೆ ಹೆಸರು, 'ರೌಡಿ ಪಿಕ್ಚರ್ಸ್' . ಈ ನಿರ್ಮಾಣ ಸಂಸ್ಥೆಯಲ್ಲಿ ವಿಘ್ನೇಷ್ ಶಿವನ್ ಅವರ ಪಾಲುದಾರಿಕೆ ಇದೆ. ಸಿನಿಮಾ ಒಂದಕ್ಕೆ 3 ರಿಂದ 4 ಕೋಟಿ ಸಂಭಾವನೆ ಪಡೆವ ನಯನತಾರಾ ಚೆನ್ನೈನ ದುಬಾರಿ ಏರಿಯಾ ಆದ ಪೋಯಸ್ ಗಾರ್ಡನ್‌ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಜೊತೆಗೆ ಕೇರಳದ ಕೊಚ್ಚಿಯಲ್ಲಿ ಸಹ ಐಷಾರಾಮಿ ಮನೆ ಹೊಂದಿದ್ದಾರೆ. ಇದೀಗ ಹಿಂದಿಯಲ್ಲಿ ಶಾರುಖ್ ಖಾನ್‌ರ ಹೊಸ ಸಿನಿಮಾದಲ್ಲಿ ನಯನತಾರಾ ನಟಿಸಲಿದ್ದಾರೆ. ತಮಿಳಿನ 'ಕಾತು ವಾಕ್ಕು ರೆಂಡು ಕಾದಲ್', 'ಪಾಟು', 'ಊರ್ ಕುರುವಿ', 'ತ್ರಿಶಾ', ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ 'ಗಾಡ್ ಫಾದರ್' ಸಿನಿಮಾಗಳಲ್ಲಿ ನಟಿಸಲಿದ್ದಾರೆ.

  English summary
  Actress Nayanthara investing in Oil business in UAE along with her boyfriend Vignesh Shivan. She already own some business.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X