»   » ಗುಪ್ತವಾಗಿ ನಡೆದೇ ಹೋಯಿತಂತೆ ನಯನತಾರ ಮದುವೆ

ಗುಪ್ತವಾಗಿ ನಡೆದೇ ಹೋಯಿತಂತೆ ನಯನತಾರ ಮದುವೆ

Posted By:
Subscribe to Filmibeat Kannada

ಬಹುಭಾಷಾ ನಟಿ ನಯನತಾರ ಮದುವೆಯ ಬಗ್ಗೆ ಮತ್ತೆ ಭಯಂಕರ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ ಹರಿದಾಡಲಾರಂಭಿಸಿದೆ.

ನಯನತಾರ ಮದುವೆ ಅಥವಾ ಆಕೆಯ ಪ್ರೀತಿಯ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹರಿದಾಡುತ್ತಿದ್ದ ಸುದ್ದಿಗಳಲ್ಲಿ ಕೆಲವೊಂದು ನಿಜ ಸುದ್ದಿಗಳಾಗಿದ್ದರೆ, ಕೆಲವೊಂದು ಗಾಳಿ ಸುದ್ದಿಗಳೂ ಇದ್ದವು.

ತಮಿಳು ನಟ ಸಿಂಬು ಜೊತೆಗಿನ ನಯನತಾರ ಪ್ರೇಮ ಪ್ರಸಂಗಗಳು ಮುರಿದುಬಿದ್ದ ನಂತರ, ನಟ ಕಮ್ ನಿರ್ದೇಶಕ ಪ್ರಭುದೇವ ಜೊತೆ ಒಡನಾಟ ಮುಂದುವರಿದಿತ್ತು. ಪ್ರಭುದೇವನಿಗಾಗಿ ಕ್ರಿಶ್ಚಿಯನ್ ನಿಂದ ಹಿಂದೂ ಧರ್ಮಕ್ಕೆ ನಯನತಾರ ಮತಾಂತರಗೊಂಡಿದ್ದರು. (ಆರ್ಯನ್ ಜೊತೆ ನಯನತಾರ ಮದುವೆ)

ಮೂರು ಮಕ್ಕಳ ತಂದೆ ಪ್ರಭುದೇವಾ ಜೊತೆ ಸಂಬಂಧ ಹಳಸಿದ ನಂತರ, ಗಣೇಶ್ ವೆಂಕಟರಾಮನ್ ಎನ್ನುವ ನಟನ ಜೊತೆ ನಯನತಾರ ಹೆಸರು ತುಳುಕಾಡುತ್ತಿತ್ತು.

ಈಗ ನಯನತಾರ, ತಮಿಳು ಯುವ ನಿರ್ದೇಶಕನನ್ನು ಗುಪ್ತವಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಯುವ ನಿರ್ದೇಶಕ

ಯುವ ತಲೆಮಾರಿನ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ನಯನತಾರ ಸದ್ದಿಲ್ಲದೇ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ವಿಘ್ನೇಶ್ ಶಿವನ್ ಬಗ್ಗೆ

2007ರಲ್ಲಿ ಚಿತ್ರರಂಗಕ್ಕೆ ಸಹಕಲಾವಿದನಾಗಿ ಪಾದಾರ್ಪಣೆ ಮಾಡಿದ ವಿಘ್ನೇಶ್, ಪೊಡಪೊಡಿ ಚಿತ್ರದಲ್ಲಿ ನಿರ್ದೇಶಕ ಕಮ್ ನಾಯಕನಟನಾದರು. ಆ ಚಿತ್ರ ಭರ್ಜರಿ ಯಶಸ್ಸು ಸಾಧಿಸಿತ್ತು. ಇದಾದ ನಂತರ ನಾನು ರೌಡಿದಾನ್ ಎನ್ನುವ ಚಿತ್ರವನ್ನು ವಿಘ್ನೇಶ್ ನಿರ್ದೇಶಿಸಿದ್ದು ಚಿತ್ರ ಇನ್ನೂ ಬಿಡುಗಡೆಯಾಗ ಬೇಕಿದೆ.

ಕೊಚ್ಚಿನ್ ಚರ್ಚ್ ನಲ್ಲಿ ಮದುವೆ

ನಯನತಾರ ಮತ್ತು ವಿಘ್ನೇಶ್ ಇಬ್ಬರೂ ಗುಪ್ತವಾಗಿ ಹಾರ ಬದಲಾಯಿಸಿಕೊಂಡಿದ್ದಾರೆ. ಕೊಚ್ಚಿನ್ ನಗರದ ಚರ್ಚ್ ನಲ್ಲಿ ಇಬ್ಬರೂ ಸತಿಪತಿಗಳಾಗಿದ್ದಾರೆ ಎನ್ನುವ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಮದುವೆಗೆ ಆಪ್ತರು ಮಾತ್ರ

ಅತ್ಯಂತ ಗೌಪ್ಯವಾಗಿ ನಡೆದ ಮದುವೆಯಲ್ಲಿ ಕೆಲವೇ ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದರು. ವಿಘ್ನೇಶ್ ಮತ್ತು ನಯನತಾರ ಕುಟುಂಬ ಸದಸ್ಯರು, ಎರಡೂ ಕುಟುಂಬದ ಪರಮಾಪ್ತರು ಬಿಟ್ಟರೆ ಮದುವೆಗೆ ಯಾರನ್ನೂ ಆಮಂತ್ರಿಸಲಿಲ್ಲ ಎನ್ನಲಾಗುತ್ತಿದೆ.

ವಿಘ್ನೇಶ್ ನಿರ್ದೇಶನದಲ್ಲಿ ನಯನತಾರ

ವಿಘ್ನೇಶ್ ಶಿವನ್ ನಿರ್ದೇಶನದ ನಾನು ರೌಡಿದಾನ್ ಚಿತ್ರದ ನಾಯಕಿ ನಯನತಾರ, ವಿಜಯ್ ಸೇತುಪತಿ ಈ ಚಿತ್ರದ ನಾಯಕ. ಈ ಚಿತ್ರದ ಶೂಟಿಂಗ್ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿ, ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಸುದ್ದಿಯಿದೆ. ನಯನತಾರ ಪ್ರೀತಿಯ ಸಂಕೇತವಾಗಿ ಯುವ ನಿರ್ದೇಶಕ ವಿಘ್ನೇಶ್ ಗೆ ದುಬಾರಿ ಕಾರು ಗಿಫ್ಟ್ ನೀಡಿದ್ದರು ಎನ್ನುವ ಸುದ್ದಿಯಿದೆ. ಬೈ ದಿ ಬೈ ನಯನತಾರ, ವಿಘ್ನೇಶ್ ಗಿಂತ ದೊಡ್ದವಳು. ಪ್ರೀತಿಗೆ ಕಣ್ಣಿಲ್ಲ ಬಿಡಿ, ಯಾಕೆ ಬೇಕು ಅಲ್ವೇ?

English summary
Actress Nayanthara reportedly exchanged wedding vows to Tamil filmmaker Vignesh Shivan recently in a hush-hush ceremony.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada