For Quick Alerts
  ALLOW NOTIFICATIONS  
  For Daily Alerts

  ಹುಡ್ಗಿಯರೇ ಹುಷಾರಾಗಿ, ನೀತೂ ನೋಡಿ ಬದಲಾಗಿ

  By ಜೀವನರಸಿಕ
  |

  ಒಂದುಸಾರಿ 'ಗಾಳಿಪಟ' ಸಿನಿಮಾದ ನೀತೂ ಅನರನ್ನ ಈಗಿನ ಬಿಗ್ ಬಾಸ್ ನೀತೂ ಜೊತೆ ಹೋಲಿಕೆ ಮಾಡಿ ನೋಡಿ. ಹೊಂದಾಣಿಕೆಯೇ ಆಗದ ಎರಡು ಫಿಗರ್ ಅಲ್ಲಿವೆ. ಆಗಿದ್ದಿದ್ದು 50+ ಆದ್ರೆ ಈಗಿರೋದು 70+.

  ಯಾವ ನಟಿ ತಾನೆ 25-30ರ ವಯಸ್ಸಲ್ಲಿ ಫಿಗರ್ ಕಳ್ಕೊಳ್ಳೋದಕ್ಕೆ ಇಷ್ಟಪಡ್ತಾರೆ. ಆದ್ರೆ ನೀತೂ ಮಾತ್ರ ನಾನು ಹೇಗಿದ್ದೀನೋ ಹಂಗೆ ಇರ್ತೀನಿ. ಇಷ್ಟು ದಪ್ಪ ಇದ್ರೂ ನಂಗೇನೂ ಬೇಸರ ಇಲ್ಲ ಅಂತಾರೆ.

  ನೀತೂಗೆ ಏನಾಗಿದೆ. ದಪ್ಪ ಇದ್ರೇನೇ ಓಕೆ ಅಂತಿದ್ದಾರಾ? ಯಾಕೆ ಹೀಗೆ ಅಂತ ನಿಮಗೂ ಕುತೂಹಲ ಇದೆ, ನಮಗೂ ಇತ್ತು. ಆದ್ರೆ ಈ ತರಹ ನೀತೂ ದಪ್ಪ ಆಗೋದ್ರ ಹಿಂದೊಂದು ಭಯಂಕರ ಸತ್ಯ ಇದೆ. ಇದ್ರಿಂದ ಬ್ಯೂಟಿ ಬಯಸೋ ಇವತ್ತಿನ ಯುವತಿಯರು ಎಚ್ಚರಗೊಳ್ಳಬೇಕಾದ ಅವಶ್ಯಕತೆ ಇದೆ. ಏನಂತಹಾ ಅನಾಹುತ ಆಗಿದೆ ಅಂತ ಹೇಳ್ತೀವಿ ನೋಡ್ತಾ ಹೋಗಿ.

  ರಾಜ್ಯಪ್ರಶಸ್ತಿ ವಿಜೇತ ನಟಿ ಹೀಗ್ಯಾಕಾದ್ರು

  ರಾಜ್ಯಪ್ರಶಸ್ತಿ ವಿಜೇತ ನಟಿ ಹೀಗ್ಯಾಕಾದ್ರು

  ತುಳು ಚಿತ್ರದ ಅತ್ಯುತ್ತಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದಿರೋ ನಟಿ ನೀತೂ. ಅಭಿನಯದ ವಿಷಯದಲ್ಲಿ ಯಾರಿಗೂ ಕಡಿಮೆಯಿಲ್ಲ ಅನ್ನಿಸಿಕೊಂಡ್ರೂ ತೀರಾ ದಪ್ಪ ಆಗಿರೋದ್ರಿಂದ ನೀತೂಗೆ ಅವಕಾಶ ಕೊಡೋಕೆ ನಿರ್ದೇಶಕರು ಹಿಂದೆ ಮುಂದೆ ನೋಡ್ತಿದ್ದಾರೆ.

  ಹೀಗೇ ಖುಷಿಯಾಗಿದ್ದೀನಿ ಅಂತಾರೆ ನೀತೂ

  ಹೀಗೇ ಖುಷಿಯಾಗಿದ್ದೀನಿ ಅಂತಾರೆ ನೀತೂ

  ಸ್ವತಃ ನೀತೂ ಅವ್ರನ್ನೇ ಯಾಕೆ ಹೀಗೆ ಅಂತ ಕೇಳಿದ್ರೆ ನಾನು ಹೀಗೆ ಖುಷಿಯಾಗಿದ್ದೀನಿ ಯಾಕೆ ಸಣ್ಣ ಆಗ್ಬೇಕು ಅಂತಾರೆ. ಆದ್ರೆ ಅದ್ರ ಹಿಂದಿರೋ ಸತ್ಯ ಮಾತ್ರ ಎಂಥವರನ್ನೂ ದಿಗಿಲು ಬೀಳಿಸುತ್ತೆ.

  ನೀತೂ ಅಮ್ಮ ಏನು ಹೇಳಿದ್ರು ಗೊತ್ತಾ

  ನೀತೂ ಅಮ್ಮ ಏನು ಹೇಳಿದ್ರು ಗೊತ್ತಾ

  ನೀತೂ ಡಯಟ್ ಮಾಡೋದಿಲ್ವಾ? ಜಿಮ್ಗೆ ಹೋಗೋದಿಲ್ವಾ? ಯಾಕೆ ಅಂತ ನೀತೂ ಅವರ ತಾಯಿಯನ್ನ ಕೇಳಿದ್ರೆ, "ನೀವು ಅವಳನ್ನೇ ಕೇಳಿ ಅಂತಾರೆ" ಆದ್ರೆ ಇದ್ರ ಹಿಂದೊಂದು ಭಯಾನಕ ಸತ್ಯ ಇದೆ.

  ಬ್ಯೂಟಿ ಟ್ರೀಟ್ ಮೆಂಟ್ ಎಡವಟ್ಟು

  ಬ್ಯೂಟಿ ಟ್ರೀಟ್ ಮೆಂಟ್ ಎಡವಟ್ಟು

  ಹಾಗೆ ನೋಡಿದ್ರೆ ಗಾಳಿಪಟ ಸಿನಿಮಾ ನಂತರ ಬಂದ ಕೆಲವೇ ಸಿನಿಮಾಗಳಲ್ಲಿ ನೀತೂ ಮತ್ತಷ್ಟು ಸ್ಲಿಮ್ ಆಗಿದ್ರು. ಬಳುಕೋ ಬಳ್ಳಿಯಂತೆ ಮಿಂಚಿದ್ರು. ಈ ನಡುವೆ ನೀತೂ ಸ್ಲಿಮ್ ಆಗೋಕೆ ತೊಗೊಂಡ ಟ್ರೀಟ್ ಮೆಂಟ್ ನ ಅಡ್ಡಪರಿಣಾಮದಿಂದ ನೀತೂ ದಪ್ಪ ಆಗೋಕೆ ಶುರುವಾದ್ರಂತೆ.

  ಪರಿಹಾರ ಸಿಗದೆ ಪರದಾಟ

  ಪರಿಹಾರ ಸಿಗದೆ ಪರದಾಟ

  ಪರಿಹಾರ ಸಿಗದೇ ಪರದಾಡಿದ ನೀತೂ. ಬೇರೆ ಟ್ರೀಟ್ ಮೆಂಟ್ ತೆಗೆದುಕೊಂಡ್ರೆ ಮತ್ತೆ ಹೀಗೇ ಆದ್ರೆ ಅನ್ನೋ ಭಯದಿಂದ ಈಗ ಆಗಿರೋದೇ ಸಾಕು ಮತ್ಯಾವ ಟ್ರೀಟ್ ಮೆಂಟ್ ಬೇಡ ಅಂತ ಡಿಸೈಡ್ ಮಾಡಿದ್ರಂತೆ.

  ಹುಡುಗಿಯರೇ ಹುಷಾರ್

  ಹುಡುಗಿಯರೇ ಹುಷಾರ್

  ಸದ್ಯ ನೀತೂ ಹೀರೋಯಿನ್ ಅಂತ ಅನ್ನಿಸಿಕೊಳ್ಳೋದೂ ಕಷ್ಟವಾಗ್ತಿದೆ. ಆದ್ರೆ ಒಳ್ಳೆಯ ನಟಿ. ನೀತು ಕಲಾವಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಸೌಂದರ್ಯ ಅಭಿನಯ ಎಲ್ಲವೂ ಇದ್ರೂ ಹೀಗಾಗಿರೋದು ನೋಡಿದ ಮೇಲಾದ್ರೂ ಹುಡಿಗಿಯರೇ ಹುಷಾರಾಗಿರಿ.

  English summary
  Why Kannada actress Neethu became from hot to heavy? What happend in her life. The thin beauty became got fat why? Here is the inside story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X