For Quick Alerts
  ALLOW NOTIFICATIONS  
  For Daily Alerts

  ಮಾಲಿವುಡ್ ಹೀರೋ ಜೊತೆ ನಿತ್ಯಾ ಮೆನನ್ ಮದುವೆ ? ಆ ಹೀರೋ ನಮಗೂ ಚಿರಪರಿಚಿತ!

  |

  ಬಹುಭಾಷಾ ನಟಿ ನಿತ್ಯಾ ಮೆನನ್ ಹೊಸ ಬಾಳಿಗೆ ಕಾಲಿಡಲು ಸಿದ್ಧರಾಗಿದ್ದಾರೆ ಅನ್ನೋ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಸದ್ಯ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದ ಚೆಲುವೆ ಕೈಯಲ್ಲಿರೋ ಸಿನಿಮಾಗಳನ್ನು ಮಾಡಿ ಮುಗಿಸಲು ತೀರ್ಮಾನಿಸಿದ್ದಾರಂತೆ. ಅಂದಹಾಗೆ ಮಲಯಾಳಂ ಹೀರೊ ಜೊತೆ ನಿತ್ಯಾ ಹಸೆಮಣೆ ಏರುತ್ತಾರೆ ಎನ್ನಲಾಗ್ತಿದೆ. 'ಮೈನಾ' ಸಿನಿಮಾ ಮೂಲಕ ಕನ್ನಡ ಸಿನಿರಸಿಕರಿಗೆ ಹತ್ತಿರವಾದ ನಟಿ ನಿತ್ಯಾ ಮೆನನ್ ಮುಂದೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿ ಸಕ್ಸಸ್ ಕಂಡರು. ಬೆಂಗಳೂರಿನಲ್ಲಿ ಕೇರಳ ಮೂಲದ ಕುಟುಂಬದಲ್ಲಿ ಹುಟ್ಟಿ ಬೆಳೆದ ನಿತ್ಯಾ ಮೆನನ್ ಇಲ್ಲೇ ಶಿಕ್ಷಣ ಮುಗಿಸಿದ್ದರು. ಪತ್ರಕರ್ತೆಯಾಗುವ ಕನಸು ಕಂಡಿದ್ದ ಕ್ಯೂಟಿ ಅಚಾನಕ್ ಆಗಿ ಬಣ್ಣದಲೋಕಕ್ಕೆ ಕಾಲಿಟ್ಟರು. '7 O ಕ್ಲಾಕ್' ನಿತ್ಯಾ ಮೆನನ್ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ. ಇತ್ತೀಚೆಗೆ 'ಭೀಮ್ಲಾ ನಾಯಕ್' ಸಿನಿಮಾದಲ್ಲಿ ಪವನ್ ಕಲ್ಯಾಣ್‌ಗೆ ಜೋಡಿಯಾಗಿ ನಟಿಸಿ, ಗಮನ ಸೆಳೆದಿದ್ದರು.

  ನಿತ್ಯಾ ಮೆನನ್ ಲವ್ವಿ ಡವ್ವಿ, ಡೇಟಿಂಗ್ ಗಾಸಿಪ್‌ಗಳಿಂದ ದೂರವೇ ಉಳಿದಿದ್ದರು. ಆದರೆ ಈಗ ಮಲಯಾಳಂ ಹೀರೊ ಜೊತೆ ಮದುವೆ ಆಗ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಈ ಬಗ್ಗೆ ಆಂಗ್ಲ ಪತ್ರಿಯೊಂದರಲ್ಲಿ ಸುದ್ದಿ ಪ್ರಕಟವಾಗಿದೆ. ಬಹಳ ವರ್ಷಗಳಿಂದ ಇಬ್ಬರು ಸ್ನೇಹಿತರಾಗಿದ್ದು, ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರಂತೆ. ಇಬ್ಬರ ಮದುವೆಗೆ ಪೋಷಕರಿಂದಲೂ ಒಪ್ಪಿಗೆ ಸಿಕ್ಕಿದೆಯಂತೆ. ಆ ನಟ ಯಾರು ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದ್ದು, ಆತ ಕನ್ನಡಿಗರಿಗೂ ಚಿರಪರಿಚಿತ ಅನ್ನೋ ವಿಚಾರ ಈಗ ಭಾರೀ ಕುತೂಹಲ ಕೆರಳಿಸಿದೆ.

  ''ನಿತ್ಯಾ ಮೆನನ್ ಅನ್ನು ಮದುವೆಯಾಗುವುದಿಲ್ಲ, ನನ್ನನ್ನು ಕಳೆದುಕೊಂಡು ಪಶ್ಚಾತಾಪ ಪಡಲಿದ್ದಾಳೆ''''ನಿತ್ಯಾ ಮೆನನ್ ಅನ್ನು ಮದುವೆಯಾಗುವುದಿಲ್ಲ, ನನ್ನನ್ನು ಕಳೆದುಕೊಂಡು ಪಶ್ಚಾತಾಪ ಪಡಲಿದ್ದಾಳೆ''

   ನಿತ್ಯಾ ಮೆನನ್ ಕನ್ನಡತಿ

  ನಿತ್ಯಾ ಮೆನನ್ ಕನ್ನಡತಿ

  ದುಂಡು ಮಲ್ಲಿಗೆಯಂತಹ ಚೆಲುವೆ ನಿತ್ಯಾಮೆನನ್ ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಓದಿದ ಅದೆಷ್ಟೂ ಯುವತಿಯರು ಸಿನಿಮಾ ತಾರೆಯರಾಗಿದ್ದಾರೆ, ಮಾಡೆಲ್‌ಗಳಾಗೆ ಮಿಂಚು ಹರಿಸಿದ್ದಾರೆ. ಅದೇ ಕಾಲೇಜಿನ ಸ್ಟೂಡೆಂಟ್ ನಿತ್ಯಾಗೆ ಕನ್ನಡ ಅಂದ್ರೆ, ಕನ್ನಡಿಗರು ಅಂದ್ರೆ, ಅಪಾರ ಪ್ರೀತಿ. ನಿತ್ಯಾ ಮೆನನ್‌ಗೆ ಮಲಯಾಳಂ ಓದಲು, ಬರೆಯಲು ಬರೋದಿಲ್ಲ. ನಾನು ಕನ್ನಡತಿ ಅಂತ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

  ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ಅಭಿಮಾನಿಗಳಿಗೆ ಸರ್ಪ್ರೈಸ್!ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ಅಭಿಮಾನಿಗಳಿಗೆ ಸರ್ಪ್ರೈಸ್!

   50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

  50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

  ಪಂಚಭಾಷಾ ತಾರೆ ನಿತ್ಯಾ ಮೆನನ್ ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಸೇರಿ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೈನಾ, ಅಲಾ ಮೊದಲೈಂದಿ, ಮೆರ್‌ಸಲ್, ಉಸ್ತಾದ್ ಹೋಟೆಲ್, ಕೋಟಿಗೊಬ್ಬ-2 ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಿತ್ಯಾ ನಟಿಸಿ ಗೆದ್ದಿದ್ದಾರೆ.

   ತಮ್ಮದೇ ಯೂಟ್ಯೂಬ್ ಚಾನಲ್ ಓಪನ್

  ತಮ್ಮದೇ ಯೂಟ್ಯೂಬ್ ಚಾನಲ್ ಓಪನ್

  ನಿತ್ಯಾ ಅನ್‌ಫಿಲ್ಟರ್ಡ್ ಹೆಸರಿನ ಯೂಟ್ಯೂಬ್ ಚಾನಲ್ ಓಪನ್ ಮಾಡಿರೋ ನಟಿ ತಮ್ಮ ಸಿನಿಕರಿಯರ್‌ಗೆ ಸಂಬಂಧಿಸಿದ ವೀಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ತಮ್ಮ 12 ವರ್ಷಗಳ ಸಿನಿಜೀವನವನ್ನು ವೀಡಿಯೋಗಳ ರೂಪದಲ್ಲಿ ಅಭಿಮಾನಿಗಳಿಗೆ ತಿಳಿಸುವ ಪ್ರಯತ್ನ ಮಾಡ್ತಿದ್ದಾರೆ.

   ಗಾಯಕಿಯಾಗಿಯೂ ಸಕ್ಸಸ್ ಕಂಡಿರೋ ಚೆಲುವೆ

  ಗಾಯಕಿಯಾಗಿಯೂ ಸಕ್ಸಸ್ ಕಂಡಿರೋ ಚೆಲುವೆ

  ನಿತ್ಯಾ ಮೆನನ್​ ಒಳ್ಳೆ ಗಾಯಕಿ ಅನ್ನೋದನ್ನು ಅವರು ಹಾಡಿರುವ ವಿಡಿಯೋಗಳನ್ನು ನೋಡಿದರೆ ಹೇಳಬಹುದು. ನಿತ್ಯಾ ಹಾಡಿರುವ ವಿಡಿಯೋಗಳು ಸಖತ್​ ವೈರಲ್​ ಆಗಿದ್ದು, ನಿತ್ಯಾ ಅವರ ಸುಮಧುರ ಕಂಠಸಿರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 5 ಭಾಷೆಗಳಲ್ಲಿ ಬಂದ 'ಗಮನಂ' ಚಿತ್ರದಲ್ಲಿ ನಿತ್ಯಾ ಗಾಯಕಿಯಾಗಿ ನಟಿಸಿದ್ದರು.

   ನಾನು ದಪ್ಪಗಿದ್ದೇನೆ ಏನಿಗಾ ಎಂದಿದ್ದ ನಿತ್ಯಾ

  ನಾನು ದಪ್ಪಗಿದ್ದೇನೆ ಏನಿಗಾ ಎಂದಿದ್ದ ನಿತ್ಯಾ

  ಕೆಲ ದಿನಗಳ ನಿತ್ಯಾ ಮೆನನ್ ದೇಹಾಕಾರದ ಕಾರಣಕ್ಕೆ ಸಾಕಷ್ಟು ಟ್ರೋಲ್‌ಗಳನ್ನು ಎದುರಿಸಬೇಕಾಯಿತು. ತೆರೆಮೇಲೆ ನೀವು ಡುಮ್ಮಿ ಆಗಿ ಕಾಣುತ್ತಿದ್ದೀರಾ. ಸೋಮಾರಿ, ತಿಂಡಿಪೋತಿ ಅಂತೆಲ್ಲಾ ಮೂದಲಿಸಿದ್ದರು. ಇದಕ್ಕೆ ನಿತ್ಯಾ ಗಂಭೀರವಾಗಿಯೇ ಉತ್ತರ ಕೊಟ್ಟಿದ್ದರು. ಸಿನಿಮಾ ಕಲಾವಿದರು ಸೋಮಾರಿಗಳಲ್ಲ. ನಾನು ಕೂಡ ಕಷ್ಟಪಡುತ್ತಿದ್ದೇನೆ. ಹಾರ್ಮೋನ್ ಸಮಸ್ಯೆಯಿಂದ ಈ ಸಮಸ್ಯೆ ಎದುರಾಗಿದೆ. ನಿಮ್ಮ ಮಾತುಗಳು ನೋವು ಉಂಟು ಮಾಡುತ್ತದೆ ಎಂದಿದ್ದರು.

  English summary
  Actress Nithya menon going to marry malayalam star hero. Know More.
  Wednesday, July 20, 2022, 12:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X