For Quick Alerts
  ALLOW NOTIFICATIONS  
  For Daily Alerts

  ಐಟಂ ಡಾನ್ಸ್‌ಗೆ ಅಡಿಯಿಟ್ಟ ಅಯ್ಯರ್ ಕುಟುಂಬದ ಕುಡಿ

  By Rajendra
  |

  ಐಟಂ ಡಾನ್ಸ್‌ಗಳಿಂದ ಹನ್ನೆರಡು ಮೈಲಿ ದೂರವಿದ್ದ ಅಯ್ಯರ್ ಕುಟುಂಬದ ಕುಡಿ ಈಗ ಮೈ ಬಳುಕಿಸಲು ಮುಂದಾಗಿದ್ದಾರೆ. ಈಕೆ ಕನ್ನಡದ ಚಿತ್ರವೊಂದರಲ್ಲೂ ಅಭಿನಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ತಮಸ್ಸು' ಚಿತ್ರದಲ್ಲಿ ಅಭಿನಯಿಸಿದ್ದ ಪದ್ಮಪ್ರಿಯಾ ಈಗ ಐಟಂ ಡಾನ್ಸ್ ಮಾಡಲು ಹೊರಟಿದ್ದಾರೆ. ತಮಿಳುನಾಡಿನ ಅಯ್ಯರ್ ಕುಟುಂಬಕ್ಕೆ ಸೇರಿದ ಈ ಬೆಡಗಿ ಎಂಬಿಎ ಓದಿದ್ದು ಬೆಂಗಳೂರಿನಲ್ಲೇ ಎಂಬುದು ವಿಶೇಷ.

  ತೆರೆಯ ಮೇಲೆ ಎಂದೂ ಅಸಭ್ಯವಾಗಿ ಕಾಣಿಸದ ಈಕೆ ಈಗ ಐಟಂ ಡಾನ್ಸ್ ಮಾಡಲು ಒಪ್ಪಿರುವುದು ಹಲವರ ಕಣ್ಣು ಕಿವಿ ಅರಳಿಸಿವೆ. ಮಲಯಾಳಂನಲ್ಲಿ ಈಕೆ ಹೆಚ್ಚಾಗಿ ಮಿಂಚಿದ್ದು ಹಳ್ಳಿ ಹುಡುಗಿಯಾಗಿ. ಅಮಲ್ ನೀರದ್ ಎಂಬುವವರು ನಿರ್ದೇಶಿಸುತ್ತಿರುವ 'ಬ್ಯಾಚುಲರ್ ಪಾರ್ಟಿ' ಎಂಬ ಚಿತ್ರದಲ್ಲಿ ಪದ್ಮಪ್ರಿಯಾ ಐಟಂ ಡಾನ್ಸ್ ಮಾಡಲಿದ್ದಾರಂತೆ.

  ಈ ಹಾಡಿಗೆ ಕುಣಿಯಲು ಪದ್ಮಪ್ರಿಯಾ ನಯಾಪೈಸೆ ಸಂಭಾವನೆಯನ್ನೂ ತೆಗೆದುಕೊಂಡಿಲ್ಲ ಎನ್ನುತ್ತವೆ ಮಲಯಾಳಂ ಮೂಲಗಳು. ಕನ್ನಡದಲ್ಲಿ ಪದ್ಮಪ್ರಿಯಾ ಅಭಿನಯಿಸಿದ್ದು ಒಂದೇ ಒಂದು ಚಿತ್ರ 'ತಮಸ್ಸು'. ಅದಾದ ಬಳಿಕ ಆಕೆ ಕನ್ನಡಕ್ಕೆ ಬರಲೇ ಇಲ್ಲ. (ಏಜೆನ್ಸೀಸ್)

  English summary
  Actress Padmapriya to do an item song in his upcoming movie 'Bachelor Party'. The award winning actress shaking her legs to the beats of the song. The actress is reported to have done the song without taking any remuneration

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X