ತೆಲುಗು ಚಿತ್ರದಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ: ನಾಯಕ ಅತಿ ಬುದ್ಧಿವಂತ!
ಇತ್ತೀಚೆಗೆ ಸಿನಿಮಾರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಅದರಲ್ಲೂ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗ ಎನ್ನುವ ಬ್ಯಾರಿಯರ್ ಒಡೆದಿದೆ. ಸೌತ್‌ನ ಸಿನಿಮಾಗಳು ಬಾಲಿವುಡ್‌ನಲ್ಲಿ ರಾರಾಜಿಸತೊಡಗಿವೆ. ಅಂತೆಯೇ ಕಲಾವಿದರು ಕೂಡ ಬೇರೆ, ಬೇರೆ ಚಿತ್ರರಂಗದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ.
ಈಗಾಗಲೇ ಬಾಲಿವುಡ್‌ನ ನಟಿಯರು ಸೌತ್ ಸಿನಿಮಾರಂಗದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್ ಸೌತ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಾಲಿಗೆ ಈಗ ಮತ್ತೊಬ್ಬ ನಟಿ ಸೇರಿಕೊಂಡಿದ್ದಾರೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸದ್ಯ ಸೌತ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
'ಇಸ್ಮಾರ್ಟ್ ಶಂಕರ್' ಖ್ಯಾತಿಯ ನಟ ರಾಮ್ ಪೋತಿನೇನಿ ಅವರು ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ತೆಲುಗು ನಿರ್ದೇಶಕ ಬೋಯಪತಿ ಶ್ರೀನು ನಿರ್ದೇಶನ ಮಾಡುತ್ತಿದ್ದಾರೆ. ಮತ್ತು ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಸದ್ಯದಲ್ಲಿಯೇ ಸಿನಿಮಾ ಸೆಟ್ಟೇರಲಿದೆಯಂತೆ.

ಬೋಯಪತಿ ಶ್ರೀನು ಸ್ಕ್ರಿಪ್ಟ್ ಮುಗಿದ ನಂತರ ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ರಾಮ್ ಪೋತಿನೇನಿ ಮತ್ತು ಬೋಯಪತಿ ಶ್ರೀನು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರನ್ನು ಈ ಚಿತ್ರಕ್ಕಾಗಿ ಕರೆತರಲು ಸಿದ್ಧತೆ ಮಾಡಿಕೊಂಡಿದ್ದಾರಂತೆ. ಚಿತ್ರತಂಡ ಅಂದುಕೊಂಡಂತೆ ಆದರೆ ಈ ಚಿತ್ರದ ಮೂಲಕ ನಟಿ ಪರಿಣಿತಿ ಸೌತ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಂತೆ ಆಗುತ್ತದೆ.
ನಟಿ ಪರಿಣಿತಿ ಹಲವು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಆಕೆಗೆ ಅಂತಹ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಈಗ ನಟಿ ಸೌತ್‌ಗೆ ಎಂಟ್ರಿ ಕೊಟ್ಟರೆ, ಇಲ್ಲಿನ ಚಿತ್ರಗಳ ಮೂಲಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವ ನಿರೀಕ್ಷೆಗಳು ಇವೆ. ಹಾಗಾಗಿ ಪರಿಣಿತಿ ಮಿಸ್ ಮಾಡದೇ ಸೌತ್‌ಗೆ ಎಂಟ್ರಿ ಕೊಡುವ ಸಾಧ್ಯತೆ ದಡ್ಡವಾಗಿದೆ.
ಈ ಚಿತ್ರದಲ್ಲಿ ನಟಿಸಲು ಪರಿಣಿತಿ ಒಪ್ಪಿಗೆ ನೀಡಿದರೆ, ರಾಮ್ ಮತ್ತು ಪರಿಣಿತಿಯ ಡೆಡ್ಲಿ ಕಾಂಬೊ ರೆಡಿ ಆಗುತ್ತದೆ. ರಾಮ್ ಪೋತಿನೇನಿ ಅವರ ಇನ್ನೂ ಶೀರ್ಷಿಕೆ ಇಡದ ಈ ಚಲನಚಿತ್ರವನ್ನು ಅದ್ದೂರಿ ಬಜೆಟ್‌ನಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮಾಸ್ ಮಸಾಲಾ ಚಲನಚಿತ್ರಗಳನ್ನು ಕೊಡುವುದರಲ್ಲಿ ಹೆಸರುವಾಸಿಯಾಗಿರುವ ಬೋಯಪತಿ ಶ್ರೀನು, ನಂದಮೂರಿ ಬಾಲಕೃಷ್ಣ ಮತ್ತು ಪ್ರಜ್ಞಾ ಜೈಸ್ವಾಲ್ ಅಭಿನಯದ ಆಕ್ಷನ್ ಡ್ರಾಮಾ 'ಅಖಂಡ'ದ ಯಶಸ್ಸಿನ ಬಳಿಕ ನಟ ರಾಮ್ ಪೋತಿನೇನಿ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.


Click it and Unblock the Notifications











