ತಿಂಗಳಿಗೆ 25 ಲಕ್ಷ ರೂ, ಕೈ ಕೊಟ್ಟರೆ 50 ಕೋಟಿ ರೂ.: ಪವಿತ್ರಾ ಲೋಕೇಶ್- ನರೇಶ್ ಡೇಟಿಂಗ್ ಒಪ್ಪಂದ ನಿಜಾನಾ?
ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅಫೇರ್ ಸಂಗತಿ ಭಾರೀ ವಿವಾದವನ್ನೇ ಸೃಷ್ಟಿಸಿಬಿಟ್ಟಿತ್ತು. ಇದಕ್ಕೆ ಸಾಕ್ಷಿ ಅನ್ನುವಂತೆ ಇಬ್ಬರೂ ಮೈಸೂರಿನ ಹೋಟೆಲ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ನರೇಶ್ ಜೊತೆ ಡೇಟಿಂಗ್ ನಡೆಸಲು ಪವಿತ್ರಾ ಲೋಕೇಶ್ ಹಣಕಾಸಿನ ಒಪ್ಪಂದ ಮಾಡಿಕೊಂಡಿದ್ದಾರೆ ಅನ್ನುವ ಗುಸಗುಸು ಶುರುವಾಗಿದೆ.
ಕೆಲ ದಿನಗಳ ಹಿಂದೆ ತೆಲುಗು ನಟ ನರೇಶ್ ಹಾಗೂ ರಮ್ಯಾ ರಘುಪತಿ ನಡುವಣ ಕುಟುಂಬ ಕಲಹ ಬೀದಿಗೆ ಬಂದಿತ್ತು. ಇದಕ್ಕೆಲ್ಲಾ ನಟಿ ಪವಿತ್ರಾ ಲೋಕೇಶ್ ಕಾರಣ ಎಂದು ರಮ್ಯಾ ರಘುಪತಿ ಆರೋಪಿಸಿದ್ದರು. ನರೇಶ್ ಹಾಗೂ ಪವಿತ್ರಾ ರಹಸ್ಯವಾಗಿ ಮದುವೆಯಾಗಿದ್ದಾರೆ ಅನ್ನುವ ಸುದ್ದಿ ಕೂಡ ಕೇಳಿಬಂದಿತ್ತು. ಮೈಸೂರಿನ ಖಾಸಗಿ ಹೊಟೇಲ್ ಕೊಠಡಿಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ತಂಗಿದ್ದು, ರಮ್ಯಾ ರಘುಪತಿ ಎದುರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಿತ್ತು. ಪೊಲೀಸರ ರಕ್ಷಣೆಯಲ್ಲಿ ಜೋಡಿ ಹೋಟೆಲ್‌ನಿಂದ ಹೊರ ಬಂದಿದ್ದರು.
ಇನ್ನು ರಮ್ಯಾ ರಘುಪತಿ ಆರೋಪಗಳೆಲ್ಲಾ ಸುಳ್ಳು ಎಂದು ನಟಿ ಪವಿತ್ರಾ ಲೋಕೇಶ್ ಮಾಧ್ಯಮಗಳಿಗೆ ಹೇಳಿದ್ದರು. "ನಾನು ಹಾಗೂ ತೆಲುಗು ನಟ ನರೇಶ್ ಬಾಬು ನಾಲ್ಕು ವರ್ಷಗಳಿಂದ ಪರಿಚಯಸ್ಥರು, ಉತ್ತಮ ಸ್ನೇಹಿತರು. ಒಂದು ಹೆಣ್ಣು-ಗಂಡು ಒಟ್ಟಿಗೆ ಓಡಾಡಿದ ಮಾತ್ರಕ್ಕೆ ಮದುವೆ ಎನ್ನಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದರು. ನನ್ನ ವಿರುದ್ಧ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ನಾನು ನರೇಶ್ ಬಾಬು ಅವರನ್ನು ಮದುವೆ ಆಗಿಲ್ಲ. ನಮ್ಮಿಬ್ಬರ ನಡುವೆ ಇರುವುದು ಬರೀ ಸ್ನೇಹ ಸಂಬಂಧ. ನಾನು ನರೇಶ್ ಅವರ ಜತೆಯೂ ಕೆಲಸ ಮಾಡಿದ್ದೇನೆ. ತೆಲುಗಿನ ಬೇರೆ ಬೇರೆ ನಟರೊಂದಿಗೂ ಕೆಲಸ ಮಾಡಿದ್ದೇನೆ. ಹಾಗಂತ ಎಲ್ಲರೊಂದಿಗೆ ಸಂಬಂಧ ಕಟ್ಟಿಕೊಳ್ಳಲಾಗುತ್ತಾ ?" ಎಂದಿದ್ದರು.

ಡೇಟಿಂಗ್ ಮಾಡಲು ಇಬ್ಬರ ನಡುವೆ ಒಪ್ಪಂದ?
ವಿಚಿತ್ರ ಅನ್ನಿಸಿದ್ದರೂ ಇಂತಾದೊಂದು ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ನಟ ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಪವಿತ್ರಾ ಲೋಕೇಶ್ ಜೊತೆ ನಾಲ್ಕನೇ ಮದುವೆಗೆ ಸಿದ್ಧರಾಗಿದ್ದಾರೆ ಎನ್ನಲಾಗ್ತಿತ್ತು. ಆದರೆ ಈಗ ಡೇಟಿಂಗ್ ನಡೆಸಲು ಇಬ್ಬರ ನಡುವೆ ಹಣಕಾಸಿನ ಒಪ್ಪಂದ ನಡೆದಿದೆ ಅನ್ನಲಾಗುತ್ತಿದೆ.

ಡೇಟಿಂಗ್ ಮಾಡಲು ತಿಂಗಳಿಗೆ 25 ಲಕ್ಷ ರೂ.?
ತೆಲುಗು ಫಿಲ್ಮ್ ನಗರ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನರೇಶ್ ತಿಂಗಳಿಗೆ 25 ಲಕ್ಷ ರೂ. ಹಣವನ್ನು ಪವಿತ್ರಾ ಲೋಕೇಶ್‌ಗೆ ನೀಡುತ್ತಿದ್ದಾರಂತೆ. ಒಂದು ವೇಳೆ ಪವಿತ್ರಾ ಲೋಕೇಶ್‌ಗೆ ಕೈ ಕೊಟ್ಟರೆ 50 ಕೋಟಿ ರೂ. ನೀಡಬೇಕು ಎಂದು ಇಬ್ಬರ ನಡುವೆ ಒಪ್ಪಂದ ಆಗಿದೆಯಂತೆ. ಈ ಸುದ್ದಿ ಕೇಳಿ ಟಾಲಿವುಡ್ ಮಂದಿ ದಂಗಾಗಿದ್ದಾರೆ.

ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿ
ಇನ್ನು ವಿವಾದ ತಣ್ಣಗಾಗುತ್ತಿದ್ದಂತೆ ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ರಾಮಾರಾವ್ ಆನ್ ಡ್ಯೂಟಿ' ಸಿನಿಮಾದಲ್ಲಿ ಇಬ್ಬರು ಅಣ್ಣ- ತಂಗಿ ಪಾತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರ ಎಂಟ್ರಿಗೆ ಥಿಯೇಟರ್‌ಗಳಲ್ಲಿ ಹುಚ್ಚೆದ್ದು ಪ್ರೇಕ್ಷಕರು ಶಿಳ್ಳೆ ಚಪ್ಪಾಳೆ ಹೊಡೆದು ಗದ್ದಲ ಮಾಡಿದ್ದಾರೆ.

ಸಂಭಾವನೆ ಹೆಚ್ಚಿಸಿಕೊಂಡ ಜೋಡಿ?
ಇಷ್ಟೆಲ್ಲಾ ವಿವಾದಗಳ ನಂತರ ಪವಿತ್ರಾ ಲೋಕೇಶ್‌ಗೆ ಅವಕಾಶಗಳು ಕಮ್ಮಿ ಆಗುತ್ತದೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ವಿವಾದದ ಬಳಿಕ ಪವಿತ್ರಾ ಲೋಕೇಶ್ ಸಿನಿಮಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅನ್ನುವ ಗುಸುಗುಸು ಶುರುವಾಗಿದೆ. ಸದ್ಯ ತೆಲುಗು ಸಿನಿಮಾಗಳ ಚಿತ್ರೀಕರಣ ಸ್ಥಗಿತವಾಗಿದೆ. ಶೀಘ್ರದಲ್ಲೇ ಮತ್ತೆ ಸಿನಿಮಾಗಳ ಚಿತ್ರೀಕರಣ ಶುರುವಾಗಲಿದ್ದು, ಪವಿತ್ರಾ ಲೋಕೇಶ್ ಯಾವ ಸಿನಿಮಾಗಳಲ್ಲಿ ನಟಿಸುತ್ತಾರೆ ಅನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











