ಚಿತ್ರವೊಂದಕ್ಕೆ ಪ್ರತಿ ದಿನ ಪವಿತ್ರಾ ಲೋಕೇಶ್ ಸಂಭಾವನೆ ಎಷ್ಟು? 'ಮಳ್ಳಿ ಪೆಳ್ಳಿ' ಚಿತ್ರಕ್ಕೆ ಸಿಕ್ಕಿದ್ದೆಷ್ಟು ಕೋಟಿ ?

ಕನ್ನಡ ನಟಿ ಪವಿತ್ರಾ ಲೋಕೇಶ್ ಟಾಲಿವುಡ್‌ನಲ್ಲಿ ಹೆಚ್ಚು ಗುರ್ತಿಸಿಕೊಂಡಿರೋದು ಗೊತ್ತೇಯಿದೆ. ತೆಲುಗು ನಟ ನರೇಶ್ ಜೊತೆಗಿನ ಲಿವ್‌ಇನ್‌ ರಿಲೇಷನ್‌ಶಿಪ್ ಕಾರಣಕ್ಕೆ ಆಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ತಮ್ಮದೇ ಲವ್‌ಸ್ಟೋರಿ ಆಧರಿಸಿ ಮಾಡಿರುವ 'ಮಳ್ಳಿ ಪೆಳ್ಳಿ' ಚಿತ್ರದಲ್ಲಿ ನರೇಶ್ ಜೊತೆ ನಟಿಸಿದ್ದಾರೆ. ಸದ್ಯ ಪವಿತ್ರಾ ಚಿತ್ರವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ಚರ್ಚೆ ಆಗ್ತಿದೆ.

90ರ ದಶಕದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ನಟಿ ಪವಿತ್ರಾ ಲೋಕೇಶ್ ನಂತರ ಪೋಷಕ ನಟಿಯಾಗಿ ಗುರ್ತಿಸಿಕೊಂಡರು. ಆರಂಭದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡು ನಾಯಕಿಯಾಗಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕೊನೆಗೆ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಾಯಕ, ನಾಯಕಿಯ ತಾಯಿ, ಅಕ್ಕ, ತಂಗಿ ಇಂತಹ ಪಾತ್ರಗಳಿಗೆ ಸೀಮಿತವಾದರು. ಪೋಷಕ ನಟಿಯಾಗಿ ತೆಲುಗು ಚಿತ್ರರಂಗದಲ್ಲಿ ಆಕೆಗೆ ಭಾರೀ ಬೇಡಿಕೆ ಇದೆ. ನರೇಶ್ ಜೊತೆಗಿನ ಅಫೇರ್ ಕಾರಣಕ್ಕೆ ಸುದ್ದಿ ಆದಮೇಲೆ ಮತ್ತಷ್ಟು ಕ್ರೇಜ್ ಶುರುವಾಗಿದೆ.

Actress Pavitra Lokesh Remuneration Per Day, How much She charged For Malli Pelli

ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ಪವಿತ್ರಾ ಲೋಕೇಶ್ ನಟಿಸಿದ್ದಾರೆ. ಇತ್ತೀಚೆಗೆ ಕನ್ನಡಕ್ಕಿಂತ ತೆಲುಗು ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಆಕೆಯ ಸಂಭಾವನೆ ಎಷ್ಟು ಎನ್ನುವ ಚರ್ಚೆ ಆರಂಭವಾಗಿದೆ. ಇನ್ನು 'ಮಳ್ಳಿ ಪೆಳ್ಳಿ' ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದು ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗ್ತಿದೆ.

ದಿನಕ್ಕೆ 1 ಲಕ್ಷ ರೂ. ಸಂಭಾವನೆ!

ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ದಿನವೊಂದಕ್ಕೆ 50 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ. ದೊಡ್ಡ ದೊಡ್ಡ ಸಿನಿಮಾಗಳನ್ನು 10 ದಿನ 15 ದಿನ ಕಾಲ್‌ಶೀಟ್ ಕೊಡುತ್ತಿದ್ದಾರೆ. ನರೇಶ್ ಜೊತೆಗಿನ ಲವ್ ಕಾರಣಕ್ಕೆ ಇತ್ತೀಚೆಗೆ ಪವಿತ್ರಾ ಎಲ್ಲರ ಗಮನ ಸೆಳೆದಿದ್ದರು. ಇದು ಆಕೆಗೆ ಪ್ಲಸ್ ಆಗಿದೆ ಎನ್ನಲಾಗ್ತಿದೆ. ಅವಕಾಶಗಳು ಹೆಚ್ಚಾಗಿದೆಯಂತೆ. ಬೇಡಿಕೆಗೆ ತಕ್ಕಂತೆ ಸಂಭಾವನೆ ಹೆಚ್ಚಿಸಿದ್ದು ಈಗ ಪ್ರತಿ ದಿನ 1 ಲಕ್ಷ ರೂ. ಚಾರ್ಜ್ ಮಾಡ್ತಾರೆ ಅನ್ನುವ ಮಾತುಗಳು ಟಾಲಿವುಡ್‌ನಲ್ಲಿ ಕೇಳಿಬರ್ತಿದೆ.

Actress Pavitra Lokesh Remuneration Per Day, How much She charged For Malli Pelli

'ಮಳ್ಳಿ ಪೆಳ್ಳಿ'ಗೆ 10 ಕೋಟಿ ರೂ. ಸಂಭಾವನೆ

ಸ್ವತಃ ನರೇಶ್ ನಿರ್ಮಿಸಿರುವ 'ಮಳ್ಳಿ ಪೆಳ್ಳಿ' ಸಿನಿಮಾ ಈ ವಾರ ರಿಲೀಸ್ ಆಗಿದೆ. ಈ ಚಿತ್ರ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ನರೇಶ್ ಬ್ಯಾನರ್‌ ಆಗಿರುವುದರಿಂದ ಪವಿತ್ರಾಗೆ ಸಂಭಾವನೆ ಸಿಕ್ತಾ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಆದರೆ ಅಂದಾಜು 3 ರಿಂದ 4 ಕೋಟಿ ರೂ. ಸಂಭಾವನೆಯನ್ನು ಚಿತ್ರಕ್ಕಾಗಿ ಆಕೆ ಪಡೆದಿದ್ದಾರೆ ಎನ್ನಲಾಗ್ತಿದೆ. 15 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮಾಡಿರುವುದಾಗಿ ನರೇಶ್ ಈ ಹಿಂದೆ ಹೇಳಿದ್ದರು. ಇವರಿಬ್ಬರ ಪಾತ್ರಗಳೇ ಇಡೀ ಸಿನಿಮಾ ಇರಲಿದೆ.

ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ನರೇಶ್ ನಿರ್ಮಿಸಿ ನಟಿಸಿರುವ 'ಮಳ್ಳಿ ಪೆಳ್ಳಿ' ಚಿತ್ರಕ್ಕೆ ಎಂ. ಎಸ್ ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ನರೇಶ್, ಪವಿತ್ರಾ, ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ನಡುವೆ ನಡೆದ ಹೈಡ್ರಾಮಾವನ್ನೇ ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಇಷ್ಟವಾಗಿದ್ದರೆ ಮತ್ತೆ ಕೆಲವರು ಕೆಟ್ಟ ಸಿನಿಮಾ, ನೋಡದೇ ಇರುವುದೇ ಒಳ್ಳೆಯದು ಎನ್ನುತ್ತಿದ್ದಾರೆ.

ಕೋರ್ಟ್ ಮೆಟ್ಟಿಲೇರಿದ್ದ ರಮ್ಯಾ ರಘುಪತಿ

ಗುರುವಾರ 'ಮಳ್ಳಿ ಪೆಳ್ಳಿ' ಸಿನಿಮಾ ರಿಲೀಸ್‌ಗೆ ಅನುಮತಿ ನೀಡದಂತೆ ನರೇಶ್ 3ನೇ ಪತ್ನಿ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮನ್ನು ಟಾರ್ಗೆಟ್ ಮಾಡಿ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ತೋರಿಸಿರುವ ಕೆಲ ಸನ್ನಿವೇಶಗಳು ತಮ್ಮ ಗೌರವಕ್ಕೆ ಧಕ್ಕೆ ಬರುವಂತಿದೆ. ಹಾಗಾಗಿ ಸಿನಿಮಾ ಬಿಡುಗಡೆಗೆ ಬಿಡಬೇಡಿ ಎಂದು ರಮ್ಯಾ ಕೂಕಟ್‌ಪಲ್ಲಿ ಫ್ಯಾಮಿಲಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸಿನಿಮಾ ರಿಲೀಸ್ ಆಗಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ ಜೂನ್ 2ಕ್ಕೆ ಸಿನಿಮಾ ಬರಲಿದೆ.

More from Filmibeat

English summary
Actress Pavitra Lokesh Remuneration Per Day, How much She charged For Malli Pelli. M. S Raju Directed Romantic Lovestory Released in Telugu States. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X