ಜೆಡಿ ಚಕ್ರವರ್ತಿ ಮತ್ತು ಪೂಜಾ ಗಾಂಧಿ ಒಂದಾಗೋದು ಯಾವಾಗ.?
'ಮುಂಗಾರು ಮಳೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜಾಗ ಪಡೆದುಕೊಂಡ ನಟಿ ಪೂಜಾ ಗಾಂಧಿ, ನಂತರ ಕೆಲವು ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡರು. ಆದರೆ ಯಾವ ಸಿನಿಮಾಗಳು ಕೂಡ ಅಷ್ಟಾಗಿ ಅವರಿಗೆ ಬ್ರೇಕ್ ಕೊಡಲಿಲ್ಲ.
ತದನಂತರ 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಟ್ಟು ಒಂದಷ್ಟು ಫೇಮಸ್ ಆದರು. ಇದೀಗ ತಮ್ಮದೇ ನಿರ್ಮಾಣದ 'ರಾವಣಿ' ಚಿತ್ರದ ಕೆಲಸಗಳಲ್ಲಿ ಪೂಜಾ ಅವರು ಬಿಜಿಯಾಗಿದ್ದಾರೆ. ಇನ್ನೇನು ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದ್ದು, ದಕ್ಷಿಣ ಭಾರತದ ಖ್ಯಾತ ನಟ-ನಿರ್ದೇಶಕ ಜೆ ಡಿ ಚಕ್ರವರ್ತಿ ಅವರು ಆಕ್ಷನ್-ಕಟ್ ಹೇಳಲಿದ್ದಾರೆ.[ಗುಟ್ಟು-ಗುಟ್ಟಾಗಿ ಮದುವೆಯಾದ ದಕ್ಷಿಣ ಭಾರತದ ನಟ ಜೆಡಿ ಚಕ್ರವರ್ತಿ]
ಇದೀಗ ಈ ಸಿನಿಮಾ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಹಲವಾರು ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಸ್ಲೈಡ್ಸ್ ಗಳನ್ನು ಕ್ಲಿಕ್ಕಿಸಿ....

ಯಾವಾಗ ಚಾಲನೆ
ನಟಿ ಪೂಜಾ ಗಾಂಧಿ ಮತ್ತು ಜೆಡಿ ಚಕ್ರವರ್ತಿ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ 'ರಾವಣಿ' (ಸದ್ಯಕ್ಕೆ 'ರಾವಣಿ' ಎಂಬ ಟೈಟಲ್ ಇಡಲಾಗಿದೆ. ಮುಂದಿನ ದಿನಗಳಲ್ಲಿ ಬದಲಾದರೂ ಆಗಬಹುದು.) ಆಗಸ್ಟ್ 26ರಂದು ಚಾಲನೆಗೊಳ್ಳಬಹುದು.

ಬಹುಭಾಷಾ ಸಿನಿಮಾ
ಇದು ಬಹುಭಾಷಾ ಸಿನಿಮಾವಾಗಿದ್ದು, ಕನ್ನಡ ಮತ್ತು ತಮಿಳು-ತೆಲುಗು ಭಾಷೆಯಲ್ಲಿ ಮೂಡಿಬರಲಿದೆ. ವಿಶೇಷವಾಗಿ ಈ ಚಿತ್ರದಲ್ಲಿ ಸುಮಾರು 65ಕ್ಕೂ ಹೆಚ್ಚು ಕಲಾವಿದರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಅವರು ನಟಿಸೋ ಜೊತೆಗೆ, ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರಂತೆ.

ಚಿತ್ರೀಕರಣಕ್ಕೆ ಸಿದ್ಧತೆ
"ತಾವು ಮಾತನಾಡೋದಕ್ಕಿಂತ, ತಮ್ಮ ಕೆಲಸ ಹೆಚ್ಚು ಮಾತನಾಡಬೇಕು ಎಂಬ ಪಾಲಿಸಿಯನ್ನು ಫಾಲೋ ಮಾಡುವ ನಟ-ನಿರ್ದೇಶಕ ಜೆಡಿ ಚಕ್ರವರ್ತಿ ಅವರು, ಚಿತ್ರದ ಬಗ್ಗೆ ಈಗಲೇ ಹೆಚ್ಚಿನ ವಿವರಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈ ಲವ್-ಥ್ರಿಲ್ಲರ್ ಚಿತ್ರದ ಭಾಗವಾಗಲು ನಟಿ ಪೂಜಾ ಗಾಂಧಿ ಅವರು ಕೂಡ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಇತ್ತಕಡೆ ಗಮನ ಹರಿಸಿದ್ದಾರೆ.

ರಾಧಿಕಾ ಗಾಂಧಿ ಪಾತ್ರ ಏನು.?
ಈ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಅವರ ಸಹೋದರಿ ರಾಧಿಕಾ ಗಾಂಧಿ ಅವರು ಕೂಡ ಒಂದು ಪ್ರಮುಖ ಭಾಗವಾಗಿದ್ದಾರೆ. ಚಿತ್ರದಲ್ಲಿ ನಟಿಸದಿದ್ದರೂ, ಸಿನಿಮಾದ ಚಿತ್ರೀಕರಣ ಮತ್ತು ಇನ್ನಿತರೇ ಕೆಲಸಗಳ ಜವಾಬ್ದಾರಿಯನ್ನು ರಾಧಿಕಾ ಅವರು ಹೊತ್ತಿದ್ದಾರೆ.

ಜೆಡಿ ಕನ್ನಡಕ್ಕೆ ಪದಾರ್ಪಣೆ
ರಾಮ್ ಗೋಪಾಲ್ ವರ್ಮಾ ಅವರ ಗರಡಿಯಲ್ಲಿ ಪಳಗಿದ ನಟ ಜೆಡಿ ಚಕ್ರವರ್ತಿ ಅವರು ತಮಿಳು-ತೆಲುಗು-ಮಲಯಾಳಂ ಮತ್ತು ಹಿಂದಿ ಸಿನಿಮಾ ರಂಗದಲ್ಲೂ ತಮ್ಮ ಖದರ್ ತೋರಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಕಾಲಿಟ್ಟಿದ್ದಾರೆ.

ನೂತನ ಜೀವನಕ್ಕೆ ಕಾಲಿಟ್ಟ ಜೆಡಿ
46 ವರ್ಷದ ಬಹುಮುಖ ಪ್ರತಿಭೆ ಜೆಡಿ ಚಕ್ರವರ್ತಿ ಅವರು ಇತ್ತೀಚೆಗಷ್ಟೇ, ತಮ್ಮ ಪ್ರಿಯತಮೆ ಅನುಕೃತಿ ಶರ್ಮಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


Click it and Unblock the Notifications











