»   » ಪೂಜಾಗಾಂಧಿ ಹಿಂದಿರುವ ಸ್ಪೆಷಲ್ ಫ್ರೆಂಡ್ ಯಾರು?

ಪೂಜಾಗಾಂಧಿ ಹಿಂದಿರುವ ಸ್ಪೆಷಲ್ ಫ್ರೆಂಡ್ ಯಾರು?

Posted By:
Subscribe to Filmibeat Kannada

ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬೆಡಗಿ ಪೂಜಾಗಾಂಧಿ. ಮಾಡಿರುವ ಸಿನಿಮಾಗಳಿಗಿಂತ ಹೆಚ್ಚಾಗಿ ಬಾಕಿ ವಿಷಯಗಳಿಗೆ ಪೂಜಾ ಮೇಡಂ ಹೆಸರುವಾಸಿ ಬಿಡಿ. ವೃತ್ತಿ ಬದುಕಲ್ಲಿ ಇನ್ನು ಚಾಲ್ತಿಯಲ್ಲಿರುವಾಗಲೇ ಉದ್ಯಮಿ ಆನಂದ್ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ನಂತ್ರ ಬ್ರೇಕಪ್ ಆಗಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದರು.

ಇನ್ಮೇಲೇದಿದ್ರೂ ಸಿನಿಮಾ ಮಾತ್ರ ಅಂತ ''ಅಭಿನೇತ್ರಿ'' ಚಿತ್ರಕ್ಕೆ ಚಾಲನೆ ನೀಡಿದ್ಮೇಲೆ ಗಾಂಧಿನಗರದಲ್ಲಿ ಪೂಜಾ ಸದ್ದು ಮಾಡದ ದಿನವೇ ಇಲ್ಲ. ಅಭಿನೇತ್ರಿಯಲ್ಲಿನ 'ಅವಾಂತರ' ಸೇರಿದಂತೆ ನಿರ್ದೇಶಕ ಸತೀಶ್ ಪ್ರಧಾನ್ ಜೊತೆ ತಳುಕು ಹಾಕಿಕೊಂಡ ಪೂಜಾ ಬಗ್ಗೆ ಗಾಂಧಿನಗರದಲ್ಲಿ ಬೇಜಾನ್ ಅಂತೆಕಂತೆಗಳ ಕಹಾನಿ ಇದೆ.[ಮದುವೆಗೆ ಮತ್ತೆ ರೆಡಿಯಾಗ್ತಿದ್ದಾರಾ ಪೂಜಾಗಾಂಧಿ?]

Actress Pooja Gandhi

ಅದು ಪೂಜಾ ಕಿವಿಗೂ ಬಿದ್ದು, ''ನಾನೇನು ಮಾಡ್ಲಿಲ್ಲ, ನಾನು ಹಾಗಲ್ಲ'' ಅಂತ ಸ್ಪಷ್ಟನೆ ಕೂಡ ನೀಡಿದ್ರು. ಇದೀಗ ಅದೇ ಪೂಜಾಗೆ 'ಹೊಸ ಫ್ರೆಂಡ್' ಸಿಕ್ಕಿದ್ದಾರೆ. 'ಆ' ಫ್ರೆಂಡ್ ಎಷ್ಟು ಸ್ಪೆಷಲ್ ಅಂದ್ರೆ, ಎಲ್ಲೇ ಹೋದರೂ ಪೂಜಾ, 'ಅವರ' ಜೊತೆಗೇ ಹೋಗುತ್ತಾರಂತೆ. ಬೆಳ್ಳಗ್ಗೆ ಬ್ರೇಕ್ ಫಾಸ್ಟ್, ಮಧ್ಯಾಹ್ನ ಲಂಚ್, ರಾತ್ರಿ 'ಡಿನ್ನರ್' ಎಲ್ಲವೂ 'ಅವರ' ಜೊತೆಯಲ್ಲೇ ಅಂತೆ.

ಹೀಗಂತ ನಾವು ಹೇಳ್ತಿಲ್ಲಪ್ಪ...'ಅವರ' ಜೊತೆ ಪೂಜಾರನ್ನ ಕಣ್ಣಾರೆ ಕಂಡಿರುವ ಗಾಂಧಿನಗರದವ್ರು ಗುಸುಗುಸು ಅಂತ ಮಾತನಾಡಿಕೊಳ್ತಿದ್ದಾರೆ. ಆದರೆ 'ಅವರು' ಯಾರು ಅನ್ನೋದು ಯಾರಿಗೂ ಗೊತ್ತಿಲ್ಲ. ಸಿನಿಮಾದವ್ರು ಅಲ್ಲ ಅನ್ನೋದು ಮಾತ್ರ ಪಕ್ಕಾ. [ಪೂಜಾ ಜೊತೆ ಆನಂದ್ ನಿಶ್ಚಿತಾರ್ಥ ಮುರಿದಿದ್ದು ಯಾಕೆ?]

ಹಾಗಾದ್ರೆ, ಪೂಜಾಗೆ ಸಿಕ್ಕಿರೋ ಆ ಫ್ರೆಂಡ್ ಯಾರು. ಅವ್ರದ್ದು ಬರೀ ಫ್ರೆಂಡ್ ಶಿಪ್ಪಾ? ಇಲ್ಲಾ ಎಕ್ಸ್ ಟ್ರಾ ಸ್ಪೆಷಲ್ ಏನಾದ್ರು ಇದ್ಯಾ ಅಂತ ಪೂಜಾ ಪುರಾಣವನ್ನ ಬಿಚ್ಚಿಡುವವರೆಗೂ ಕಾಯಲೇಬೇಕು. (ಏಜೆನ್ಸೀಸ್)

English summary
Actress Pooja Gandhi of Mungaaru Male fame is in news again for her newly alleged affair. Post break-up of her engagement with Anand Gowda, the actress was in news for having linked up with Sathis Pradhan, director of her upcoming flick Abhinetri. Now the actress is seen with the 'Special Friend' hanging out for dinner. Whether the actress is in love again? Nobody knows.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada