For Quick Alerts
  ALLOW NOTIFICATIONS  
  For Daily Alerts

  ಹೊಸ ವ್ಯಾಪಾರ ಶುರು ಮಾಡಿದ 'ಜಿಲೇಬಿ' ಹುಡುಗಿ ಪೂಜಾ ಗಾಂಧಿ

  |

  'ಮುಂಗಾರು ಮಳೆ'ಯಲ್ಲಿ ಹಾಡಿ ಕುಣಿದ ಪೂಜಾ ಗಾಂಧಿ ಈಗ ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ನಟನೆ ಜೊತೆಗೆ ನಿರ್ಮಾಣ ಶುರು ಮಾಡಿದ್ದ ಪೂಜಾ ನಿರ್ಗಮನದ ಹಾದಿ ಹಿಡಿದಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಇತ್ತು.

  ''ಇನ್ನೂ ನಾನು ಚಿತ್ರರಂಗದಲ್ಲಿ ಇದ್ದೇನೆ'' ಎಂದು ಪೂಜಾ ಗಾಂಧಿ ತಿಳಿಸಿದ್ದು, ಅವರ 'ಸಿಂಹಾರಿಣಿ' ಎಂಬ ಸಿನಿಮಾದ ಮೂಲಕ. ಕೆಲವು ತಿಂಗಳುಗಳ ಹಿಂದೆ, ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ, ಈ ಸಿನಿಮಾದ ಬಗ್ಗೆ ಮಾತನಾಡಲು ಮಾತ್ರ ಪೂಜಾ ಗಾಂಧಿ ಮಾಧ್ಯಮಗಳ ಕ್ಯಾಮರಾ ಮುಂದೆ ಬಂದಿದ್ದರು.

  ಹೋಟೆಲ್ ಬಿಲ್ ಕಟ್ಟದೇ ಎಸ್ಕೇಪ್ ಆದ ಪೂಜಾಗಾಂಧಿಹೋಟೆಲ್ ಬಿಲ್ ಕಟ್ಟದೇ ಎಸ್ಕೇಪ್ ಆದ ಪೂಜಾಗಾಂಧಿ

  ಅತ್ತ ಸಿನಿಮಾ ಅವಕಾಶಗಳು ಕಡಿಮೆ ಆದಾಗ ಅನೇಕ ಸ್ಟಾರ್ ಗಳಿಗೆ ನೆನಪಿಗೆ ಬರುವುದು ರಾಜಕೀಯ. ಪೂಜಾ ಗಾಂಧಿ ಕೂಡ ಅದೇ ಹಾದಿ ಹಿಡಿದರು. ಆದರೆ, ಪಕ್ಷಗಳಿಂದ ಪಕ್ಷಕ್ಕೆ ಹಾರಿದ ಪೂಜಾ ಅಲ್ಲಿಯೂ ಸಲ್ಲಲಿಲ್ಲ.

  ಈ ನಡುವೆ ಪೂಜಾ ತಮ್ಮ ನಿರ್ಮಾಣದಲ್ಲಿ ಬರೋಬ್ಬರಿ ಹತ್ತು ಸಿನಿಮಾ ಘೋಷಣೆ ಮಾಡಿದರು. ಆದರೆ, ಅದರ ಜೊತೆಗೆ ಹತ್ತಾರು ಅನುಮಾನಗಳನ್ನು ಬಿಟ್ಟು ಹೋಗಿದ್ದಾರೆ. ಪೂಜಾ ಗಾಂಧಿ ಬಗ್ಗೆ ಅನೇಕ ಪ್ರಶ್ನೆಗಳು ಹಾಗೆಯೇ ಉಳಿದಿವೆ. ಈ ಕುತೂಹಲದಲ್ಲಿಯೇ 'ಫಿಲ್ಮಿಬೀಟ್ ಕನ್ನಡ' ಅವರನ್ನು ಸಂಪರ್ಕ ಮಾಡಿದ್ದು, ಪೂಜಾ ಗಾಂಧಿ ನಮ್ಮ ಸಂಪರ್ಕಕ್ಕೆ ಸಿಕ್ಕರು.

  ಸಿನಿಮಾ ಮುಗಿದ ಮೇಲೆ ಮಾತನಾಡುತ್ತೇನೆ

  ಸಿನಿಮಾ ಮುಗಿದ ಮೇಲೆ ಮಾತನಾಡುತ್ತೇನೆ

  ಪೂಜಾ ಗಾಂಧಿ ಸದ್ಯ ಯಾರ ಜೊತೆಗೂ ಮಾತನಾಡಲು ಇಷ್ಟ ಪಡುತ್ತಿಲ್ಲ. ಸಂದರ್ಶನಗಳಿಂದಲೂ ದೂರ ಇದ್ದಾರೆ. ಸದ್ಯ, 'ಸಿಂಹಾರಿಣಿ' ಸಿನಿಮಾದಲ್ಲಿ ಪೂಜಾ ಗಾಂಧಿ ನಟಿಸುತ್ತಿದ್ದು, ಆ ಸಿನಿಮಾ ಮುಗಿದ ಮೇಲೆ ಮಾಧ್ಯಮಗಳ ಮುಂದೆ ಬರುತ್ತೇನೆ ಎಂದು ಪೂಜಾ ಗಾಂಧಿ ತಿಳಿಸಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ಈ ಸಿನಿಮಾ ಮುಗಿಯುವ ಸಾಧ್ಯತೆ ಇದೆ.

  ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ

  ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ

  2015ರ ನಂತರ ಪೂಜಾ ಗಾಂಧಿ ಗ್ರಾಫ್ ಕಡಿಮೆ ಆಗಿದೆ. ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡುತ್ತಿದ್ದ, ಅವರು ಆ ಬಳಿಕ ಒಂದು ಅವಕಾಶ ಸಿಕ್ಕರೆ ಸಾಕು ಎನ್ನುವ ಹಂತಕ್ಕೆ ಬಂದರು. 'ದಂಡುಪಾಳ್ಯ 2', 'ದಂಡುಪಾಳ್ಯ 3' ಅಂತಹ ಸಿನಿಮಾಗಳು ಮಾತ್ರ ಅವರ ಪಾಲಿಗೆ ಬಂದವು. ಈ ಸಿನಿಮಾಗಳು ಪೂಜಾ ಗಾಂಧಿ ಅದೃಷ್ಟ ಬದಲಿಸಲು ಹೇಗೆ ಸಾಧ್ಯವಾವಿತು.

  ಮದುವೆ ಆಗ್ತೀರಂತೆ ಹೌದಾ ಅಂತ ಕೇಳಿದ್ರೆ ಹೀಗಂದ್ರು ಪೂಜಾ ಗಾಂಧಿ.!ಮದುವೆ ಆಗ್ತೀರಂತೆ ಹೌದಾ ಅಂತ ಕೇಳಿದ್ರೆ ಹೀಗಂದ್ರು ಪೂಜಾ ಗಾಂಧಿ.!

  ನಿರ್ಮಾಣದ ಸಿನಿಮಾಗಳು ಏನಾಯ್ತು?

  ನಿರ್ಮಾಣದ ಸಿನಿಮಾಗಳು ಏನಾಯ್ತು?

  ನಟ ಜೆಡಿ ಚಕ್ರವರ್ತಿ ಜೊತೆಗೆ ತಮ್ಮ ಬ್ಯಾನರ್ ನಲ್ಲಿ ಬರೋಬ್ಬರಿ ಹತ್ತು ಸಿನಿಮಾಗಳನ್ನು ಪೂಜಾ ಗಾಂಧಿ ಅನೌನ್ಸ್ ಮಾಡಿದ್ದರು. ಆದರೆ, ಆ ಸಿನಿಮಾಗಳ ಕಥೆ ಏನಾಯ್ತು? ಎನ್ನುವುದು ಗೊತ್ತಾಗಲಿಲ್ಲ. ಹಣಕಾಸಿನ ವಿಚಾರದಲ್ಲಿ ಜೆಡಿ ಮತ್ತು ಪೂಜಾ ನಡುವೆ ಮನಸ್ತಾಪ ಆಗಿದೆ ಎನ್ನುವ ಮಾತು ಇದೆ. ಆದರೆ, ಪೂಜಾ ಗಾಂಧಿ ತಾಯಿಯ ಅನಾರೋಗ್ಯದ ಕಾರಣ ಚಿತ್ರರಂಗದಲ್ಲಿ ಸರಿಯಾಗಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.

  ಉತ್ತರ ನೀಡಲು ಬರ್ತಾರೆ ಪೂಜಾ ಗಾಂಧಿ

  ಉತ್ತರ ನೀಡಲು ಬರ್ತಾರೆ ಪೂಜಾ ಗಾಂಧಿ

  ಇವುಗಳ ಜೊತೆಗೆ ಕಳೆದ ಮಾರ್ಚ್ ತಿಂಗಳಿನಲ್ಲಿ ಪೂಜಾ ಗಾಂಧಿ ಮತ್ತೊಂದು ವಿವಾದ ಮಾಡಿಕೊಂಡಿದ್ದರು. ಅಶೋಕ ಹೋಟೆಲ್ ನಲ್ಲಿ ಬಿಲ್ ಪಾವತಿ ಮಾಡಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ರೀತಿ ಪೂಜಾ ಗಾಂಧಿ ಬಗ್ಗೆ ಅನೇಕ ಸುದ್ದಿಗಳು, ಊಹಾಪೋಹಗಳು, ಅನುಮಾನಗಳು, ಪ್ರಶ್ನೆಗಳು ಎಲ್ಲವೂ ಇದೆ. ಅದಷ್ಟು ಬೇಗ ಇದಕ್ಕಿಲ್ಲ ಉತ್ತರ ನೀಡಲು ಬರುತ್ತೇನೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಅವರು ಹೊಸ ವ್ಯಾಪಾರ ಶುರು ಮಾಡಿದ್ದಾರೆ ಎನ್ನುವ ಮಾಹಿತಿ ಕೂಡ ಸಿಕ್ಕಿದೆ.

  ಕನ್ನಡ ನಟಿ ಪೂಜಾ ಗಾಂಧಿ ಆ ಬಾಲಿವುಡ್ ನಟನ ಪತ್ನಿಯಂತೆ.!ಕನ್ನಡ ನಟಿ ಪೂಜಾ ಗಾಂಧಿ ಆ ಬಾಲಿವುಡ್ ನಟನ ಪತ್ನಿಯಂತೆ.!

  English summary
  Actress Pooja Gandhi started her own business.
  Tuesday, November 19, 2019, 15:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X