Pooja Hegde: ಐಟಂ ಹಾಡಿಗೆ 1 ಕೋಟಿಗೂ ಅಧಿಕ ಸಂಭಾವನೆ!

ನಟಿ ಪೂಜಾ ಹೆಗ್ಡೆ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ಇರುವ ನಟಿ. ಪೂಜಾ ಹೆಗ್ಡೆ ಸಾಲು, ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಾ ಇದ್ದಾರೆ. ಸದ್ಯ ಪೂಜಾ ಸಂಭಾವನೆ ಕೂಡ ಹೆಚ್ಚಾಗಿದೆ. ಪೂಜಾ ಹೆಗ್ಡೆ ಸಂಭಾವನೆ ಹೆಚ್ಚಾಗಿದೆ ನಿಜ. ಆದರೆ ಸಿನಿಮಾ ಬಿಟ್ಟು, ಒಂದು ಹಾಡಿಗೆ ಹೆಜ್ಜೆ ಹಾಕಲು ಪಡೆಯುವ ಸಂಭಾವನೆಯನ್ನು ಕೂಡ ನಟಿ ಪೂಜಾ ಹೆಗ್ಡೆ ಹೆಚ್ಚಿಸಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಈಗ ಸುದ್ದಿ ಆಗಿರುವುದು ಒಂದು ಹಾಡಿಗೆ ಪಡೆಯುತ್ತಿರುವ ಸಂಭಾವನೆ ಇಂದ. ಒಂದು ಐಟಂ ಹಾಡಿಗೆ ನಟಿ ಪೂಜಾ ಹೆಗ್ಡೆ ಪಡೆಯುವ ಸಂಭಾವನೆ ಕೋಟಿಗೆ ಏರಿಕೆ ಆಗಿದೆ. ಈಗ ಒಂದು ಹಾಡಿನಲ್ಲಿ ಡ್ಯಾನ್ಸ್ ಮಾಡಲು ಪೂಜಾ ಹೆಗ್ಡೆ 1.25 ಕೋಟಿ ಸಂಭಾವನೆ ಪಡೆಯುತ್ತಾರಂತೆ.

ಸದ್ಯ ನಟ ಚಿರಂಜೀವಿ, ರಾಮ್‌ಚರಣ್ ತೇಜ ಅಭಿನಯದ 'ಆಚಾರ್ಯ' ಚಿತ್ರದಲ್ಲಿ ಪೂಜಾ ಹೆಗ್ಡೆ ಬ್ಯುಸಿಯಾಗಿದ್ದಾರೆ. ಈ ನಡುವೆ ತೆಲುಗಿನ 'ಎಫ್3' ಚಿತ್ರದ ಒಂದು ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರಂತೆ. ಇದೇ ಹಾಡಿಗಾಗಿ ನಟಿ ಒಂದು ಕೋಟಿಗೂ ಅಧಿಕ ಸಂಭಾವನೆಯ ಬೇಡಿಕೆ ಇಟ್ಟಿದ್ದಾರಂತೆ. ಇನ್ನು ಚಿತ್ರತಂಡ ಕೂಡ ಈ ಹಾಡಿನಲ್ಲಿ ಪೂಜಾನೆ ಡ್ಯಾನ್ಸ್ ಮಾಡಬೇಕು ಎಂದು ಅವರು ಕೇಳಿದಷ್ಟು ಸಂಭಾವನೆ ಕೊಡಲು ಸಿದ್ಧವಾಗಿದೆಯಂತೆ.

Actress Pooja Hegde Charge Crore Together For One Song

ಈ ಹಿಂದೆ ರಂಗಸ್ಥಳಂ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈಗ ' ಎಫ್3' ಚಿತ್ರದ ಹಾಡಿನಲ್ಲಿ ಹೆಜ್ಜೆ ಹಾಕಲು ಪೂಜಾ ರೆಡಿಯಾಗಿದ್ದಾರೆ. ಇನ್ನು ನಟಿ ಪೂಜಾ ಹೆಗ್ಡೆ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ 3 ಕೋಟಿ ಅಂತೆ. ಆದರೆ ಒಂದು ಹಾಡಿಗೆ ಈಕೆ ಪಡೆದ ಸಂಭಾವನೆ ತಮ್ಮ ಪೂರ್ಣ ಸಂಭಾವನೆಯಲ್ಲಿ ಸುಮಾರು ಅರ್ಧದಷ್ಟು ಇದೆ.

Actress Pooja Hegde Charge Crore Together For One Song

ಪೂಜಾ ಹೆಗ್ಡೆ ಅಭಿನಯದ ಆಚಾರ್ಯ ಚಿತ್ರ ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ಇತ್ತೀಚೆಗೆ ರಿಲೀಸ್ ಆದ 'ರಾಧೆ ಶ್ಯಾಮ್' ಅಷ್ಟೇನು ಸದ್ದು ಮಾಡಲಿಲ್ಲ. ಆದರೆ 'ಆಚಾರ್ಯ' ಚಿತ್ರದಲ್ಲಿ ರಾಮ್‌ ಚರಣ್‌ಗೆ ಪೂಜಾ ಜೊತೆಯಾಗಿದ್ದಾರೆ. ಈ ಚಿತ್ರದ ಬಳಿಕಾ ಪೂಜಾ ಹೆಗ್ಡೆ ಮಹೇಶ್ ಬಾಬು ಮುಂದಿನ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಹಿಂದೆ 'ಪುಷ್ಪ' ಚಿತ್ರದ ಹಾಡಿನಲ್ಲಿ ಡ್ಯಾನ್ಸ್ ಮಾಡಿದ ನಟಿ ಸಮಂತಾ ಕೋಟಿ ಸಂಭಾವನೆ ಪಡೆದು ಅಚ್ಚರಿ ಮೂಡಿಸಿದ್ದರು. ಈಗ ಈ ಸಾಲಿನಲ್ಲಿ ಪೂಜಾ ಹೆಗ್ಡೆ ಇದ್ದಾರೆ. ಆದರೆ ಈ ಹಾಡು ಯಾವ ರೇಂಜಿಗೆ ಇರಲಿದೆ ಎನ್ನುವುದನ್ನು ನೋಡಬೇಕು. ಸದ್ಯದಲ್ಲೇ ಈ ಹಾಡನ್ನು ಚಿತ್ರೀಕರಿಸಲು ಎಫ್3 ಚಿತ್ರತಂಡ ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ.

More from Filmibeat

English summary
Actress Pooja Hegde Charge Crore Together For One Song, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X