ಮಹೇಶ್ ಬಾಬುಗಾಗಿ ಪವನ್ ಕಲ್ಯಾಣ್ ಸಿನಿಮಾ ಬಿಟ್ಟ ಪೂಜಾ ಹೆಗ್ಡೆ!
ನಟಿ ಪೂಜಾ ಹೆಗ್ಡೆ ಸೌತ್ ಸಿನಿಮಾರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನಟಿ. ಪೂಜಾ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಇನ್ನು ಪೂಜಾ ಅಭಿನಯದ ಸಾಲು ಸಾಲು ಸಿನಿಮಾಗಳು ಕೂಡ ರಿಲೀಸ್ ಆಗುತ್ತಿದೆ. ಒಟ್ಟಾರೆ ಸೌತ್ ಸಿನಿಮಾರಂಗದ ನಾಯಕಿಯರ ಪೈಕಿ ಪೂಜಾ ಹೆಗ್ಡೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಪೂಜಾ ಹೆಗ್ಡೆ ಆಗಾಗ ಒಂದಷ್ಟು ಗಾಸಿಪ್‌ಗಳ ಮೂಲಕವೂ ಸುದ್ದಿಯಾಗುತ್ತಾ ಇರುತ್ತಾರೆ. ಸಂಭಾವನೆ ವಿಚಾರದಲ್ಲಿ ಕೂಡ ಪೂಜಾ ಹೆಗ್ಡೆ ಸುದ್ದಿ ಆಗಿದ್ದರು. ಇದೀಗ ಪೂಜಾ ಹೆಗ್ಡೆ ಸ್ಟಾರ್ ನಟನ ಸಿನಿಮಾದಿಂದ ಹೊರಬಂದಿದ್ದಾರೆ. ಈ ವಿಚಾರ ಸದ್ಯ ಟಾಲಿವುಡ್‌ನಲ್ಲಿ ಬಿಸಿ, ಬಿಸಿಯಾಗಿ ಚರ್ಚೆ ಆಗುತ್ತಾ ಇದೆ.
ಹೌದು ನಟಿ ಪೂಜಾ ಹೆಗ್ಡೆ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಜೋರಾಗಿ ಹಬ್ಬಿದೆ. ಆದರೆ ಪೂಜಾ ಸಿನಿಮಾದಿಂದ ಹೊರಬರಲು ಕಾರಣ ನಟ ಮಹೇಶ್ ಬಾಬು ಅಂತೆ ಅದು ಹೇಗೆ ಎನ್ನುವುದನ್ನು ಮುಂದೆ ಓದಿ...

ಪವನ್ ಕಲ್ಯಾಣ್ ಸಿನಿಮಾ ಕೈ ಬಿಟ್ಟ ನಟಿ ಪೂಜಾ ಹೆಗ್ಡೆ!
ಇತ್ತೀಚಿಗೆ ನಟಿ ಪೂಜಾ ಹೆಗ್ಡೆ ಅದೃಷ್ಟ ಸರಿ ಇಲ್ಲ, ಆಕೆಯ ಅಭಿನಯದ ಸಿನಿಮಾಗಳು ಫ್ಲಾಪ್ ಲಿಸ್ಟ್ ಸೇರಿದೆ ಎನ್ನುವ ಬಗ್ಗೆ ಗಾಸಿಪ್ ಹಬ್ಬಿತ್ತು. ಆದರೆ ತನಗೆ ಸಿನಿಮಾ ಆಫರ್‌ಗಳು ಬರುತ್ತಿಲ್ಲ ಎನ್ನುವ ಸುದ್ದಿಗಳನ್ನು ಸುಳ್ಳು ಮಾಡಿ ಪೂಜಾ ಹೊಸ ಸಿನಿಮಾಗಳು ಪ್ರಕಟ ಆಗಿವೆ. ಹಾಗೆ ಪೂಜಾ ಹೆಗ್ಡೆ, ಪವನ್ ಕಲ್ಯಾಣ ಮುಂದಿನ ಸಿನಿಮಾ 'ಭವದೀಯುಡು ಭಗತ್ ಸಿಂಗ್' ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಈ ಸಿನಿಮಾದಿಂದ ಹೊರ ಬಂದಿದ್ದಾರಂತೆ ಪೂಜಾ ಹೆಗಡೆ ಇದಕ್ಕೆ ಕಾರಣ ಪೂಜಾ ಹೆಗ್ಡೆ ದಿನಾಂಕ ಹೊಂದಾಣಿಕೆಯಾಗುತ್ತಿಲ್ಲವಂತೆ.

ಮಹೇಶ್ ಬಾಬು ಚಿತ್ರದಲ್ಲಿ ಪೂಜಾ ಹೆಗ್ಡೆ!
ನಟಿ ಪೂಜಾ ಹೆಗ್ಡೆ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಪೂಜಾ ಹೆಗ್ಡೆಗೆ ದಿನಾಂಕವನ್ನು ಹೊಂದಾಣಿಕೆ ಮಾಡುವುದು ಕಷ್ಟ ಆಗಿದೆಯಂತೆ. ಇತ್ತೀಚೆಗೆ ನಟಿ ಮಹೇಶ್ ಬಾಬು ಜೊತೆಗೆ ಅಭಿನಯಿಸುತ್ತಾ ಇರುವ ಪೂಜಾ ಸಿನಿಮಾ ಲಾಂಚ್ ಆಗಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಬ್ಯುಸಿ ಇರುವುದರಿಂದ ಪವನ್ ಕಲ್ಯಾಣ್ 'ಭವದೀಯುಡು ಭಗತ್ ಸಿಂಗ್' ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವಾಗುತ್ತಿಲ್ಲವಂತೆ.

ವಿಜಯ್ ದೇವರಕೊಂಡ ಜೊತೆಗೆ ಪೂಜಾ ಹೆಗ್ಡೆ!
ಇನ್ನು ನಟ ವಿಜಯ್ ದೇವರಕೊಂಡ ಜೊತೆಗೂ ಸಿನಿಮಾ ಮಾಡುತ್ತಾ ಇದ್ದಾರೆ ಪೂಜಾ ಹೆಗ್ಡೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಅಭಿನಯದ 'ಜನ ಗಣ ಮನ' ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ಅಭಿನಯಿಸುತ್ತಾ ಇದ್ದಾರೆ. ಈ ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ಪೂಜಾ ಮತ್ತು ವಿಜಯ್ ದೇವರಕೊಂಡ ಅವರ ಜೋಡಿಯನ್ನು ತೆರೆಯ ಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸೋಲು ಕಂಡ ಪೂಜಾ ಹೆಗ್ಡೆ!
ಇನ್ನು ನಟಿ ಪೂಜಾ ಹೆಗ್ಡೆ ಈ ವರ್ಷ ಸಾಲು, ಸಾಲು ಸೋಲುಗಳನ್ನು ಅನುಭವಿಸಿದ್ದಾರೆ. ಪ್ರಭಾಸ್ ಜೊತೆಗಿನ 'ರಾಧೆ ಶ್ಯಾಮ್', 'ಆಚಾರ್ಯ' ಮತ್ತು 'ಬಿಸ್ಟ್ ಸಿನಿಮಾಗಳು ಅಂದುಕೊಮಡ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಗಳಿಕೆ ಕಾಣದೆ, ನೆಲಕಚ್ಚಿದವು. ಹಾಗಾಗಿ ಪೂಜಾಗೆ ಬೇಡಿಕೆ ಕುಂದಿದೆ ಎನ್ನಲಾಗಿತ್ತು. ಆದರೆ ಪೂಜಾಗೆ ಹೆಚ್ಚಿನ ಸಿನಿಮಾ ಆಫರ್ ಬಂದಿದ್ದು, ದಿನಾಂಕ ಹೊಂದಾಣಿಕೆಯೂ ಕಷ್ಟ ಆಗುತ್ತಿದೆಯಂತೆ.


Click it and Unblock the Notifications











