Pooja Hegde-Rashmika: ಪೂಜಾ ಹೆಗ್ಡೆಗೆ ದೊಡ್ಡ ತಲೆನೋವಾದ ರಶ್ಮಿಕಾ ಮಂದಣ್ಣ !
ಕರ್ನಾಟಕ ಮೂಲದ ಇಬ್ಬರು ನಟಿಯರು ತಮಿಳು, ತೆಲುಗು ಸೇರಿದಂತೆ ಬಾಲಿವುಡ್‌ನಲ್ಲೂ ಸಿಕ್ಕಾ ಪಟ್ಟೆ ಮಿಂಚುತ್ತಿದ್ದಾರೆ. ವಿಶೇಷ ಅಂದರೆ ಈ ನಟಿಯರ ನಡುವೆಯೇ ದೊಡ್ಡ ಮಟ್ಟಿನ ಸ್ಪರ್ಧೆ ಶುರುವಾಗಿದೆ. ಇವರಿಬ್ಬರ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎನ್ನುವ ಗುಸುಗುಸು ಕೇಳಿ ಬರ್ತಿದೆ. ಆ ನಟಿಯರು ಮತ್ಯಾರೂ ಅಲ್ಲ ರಶ್ಮಿಕಾ ಮಂದಣ್ಣ ಮತ್ತು ಪೂಜಾ ಹೆಗ್ಡೆ. ಈ ಎರಡು ಹೆಸರನ್ನು ಕೇಳಿದಾಕ್ಷಣ ನಿಮಗೆ ಅವರ ನಡುವಿನ ವೈಮನಸ್ಸಿನ ಬಗ್ಗೆ ಹರಿದಾಡಿದ ಗಾಸಿಪ್‌ಗಳು ನೆನಪಾಗಬಹುದು.
Recommended Video

ಈಗ ಮತ್ತೆ ಇವರಿಬ್ಬರ ಬಗ್ಗೆ ಮಾತನಾಡಲು ಕಾರಣವಿದೆ. ಈ ಜೋಡಿ ಬಗ್ಗೆ ಮತ್ತೊಂದು ದೊಡ್ಡ ಸುದ್ದಿ ಹರಿದಾಡುತ್ತಿದೆ. ಇಲ್ಲಿ ಕೂಡ ಯಾರು ಹೆಚ್ಚು ಯಾರು ಕಡಿಮೆ ಎನ್ನುವ ಚರ್ಚೆ ಶುರುವಾಗಿದೆ. ನಟಿ ರಶ್ಮಿಕಾ ಮಂದಣ್ಣ ನೋಡ ನೋಡುತ್ತಿದ್ದಂತೆಯೇ ಸಾಕಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಕನ್ನಡದಿಂದ ಶುರುವಾದ ಅವರ ಸಿನಿಮಾ ಪಯಣ ಸದ್ಯ ಬಾಲಿವುಡ್ ತನಕ ತಲುಪಿದೆ. ಈಗ ಬಹುತೇಕ ಎಲ್ಲಾ ಚಿತ್ರರಂಗದಲ್ಲೂ ರಶ್ಮಿಕಾ ಮಂದಣ್ಣ ಮತ್ತೆ ಬ್ಯುಸಿಯಾಗಿದ್ದಾರೆ.
ರಶ್ಮಿಕಾ ಸಿನಿ ಪಯಣ ಆರಂಭಕ್ಕೂ ಮುನ್ನ ಪೂಜಾ ಹೆಗ್ಡೆ ಟಾಲಿವುಡ್‌ನಲ್ಲಿ ಸಖತ್ ಬೇಡಿಕೆಯನ್ನು ಸೃಷ್ಠಿಸಿಕೊಂಡಿದ್ದರು. ಯಾವ ಸ್ಟಾರ್ ಸಿನಿಮಾಗಳು ಸೆಟ್ಟೇರಿದರೂ ಅಲ್ಲಿ ಪೂಜಾ ಹೆಗ್ಡೆ ಹೆಸರು ಕೇಳಿ ಬರುತ್ತಿತ್ತು. ಬಹುತೇಕ ಸ್ಟಾರ್‌ಗಳ ಸಿನಿಮಾಗೆ ಪೂಜಾ ಹೆಗ್ಡೆ ಆಯ್ಕೆ ಆಗುತ್ತಿದ್ದರು. ಆದರೆ ರಶ್ಮಿಕಾ ಕಡೆ ಸಿನಿಮಾ ಮೇಕರ್ಸ್ ಗಮನ ಯಾವತ್ತೂ ಬೀಳಲು ಶುರು ಆಯ್ತು ಅಂದಿನಿಂದ ಕೊಂಚ ಮಟ್ಟಿಗೆ ಪೂಜಾ ಹೆಗ್ಡೆ ಬೇಡಿಕೆಯೂ ಕಮ್ಮಿ ಆಗುತ್ತಾ ಹೋಗಿದೆ.

ಇದೀಗ ಪೂಜಾ ಹೆಗ್ಡೆ ಸ್ಥಾನವನ್ನು ರಶ್ಮಿಕಾ ಆವರಿಸಿಕೊಳ್ಳುತ್ತಿದ್ದಾರೆ. ತಮಿಳು ತೆಲುಗು, ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನಲ್ಲಿ ರಣ್‌ಬೀರ್ ಕಪೂರ್ ಜೊತೆ 'ಆನಿಮಲ್' ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ರಶ್ಮಿಕಾ. ತಮಿಳಿನಲ್ಲಿ ದಳಪತಿ ವಿಜಯ್ ಸಿನಿಮಾಗೂ ರಶ್ಮಿಕಾ ಸಹಿ ಹಾಕಿದ್ದಾರೆ. ಅಲ್ಲು ಅರ್ಜುನ್ ಜೊತೆ 'ಪುಷ್ಪ 2' ಸಿನಿಮಾದಲ್ಲೂ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಿಗೆ ರಶ್ಮಿಕಾ ಫೈನಲ್ ಆಗಿದ್ದು, ಪೂಜಾ ಹೆಗ್ಡೆ ಇದೀಗ ಮಂಕಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಯಾಕಂದ್ರೆ ಪೂಜಾ ಹೆಗ್ಡೆಗೆ ಹೇಳಿಕೊಳ್ಳುವಂತಹ ಸಿನಿಮಾಗಳು ಈಗ ಯಾವುದೂ ಕೈನಲ್ಲಿ ಇಲ್ಲ. ಕಳೆದ ವರ್ಷ ಒಪ್ಪಿಕೊಂಡಿದ್ದ ಒಂದಷ್ಟು ಸಿನಿಮಾಗಳು ರಿಲೀಸ್ ಆಗಿದ್ದು, ಮತ್ತೊಂದಷ್ಟು ರಿಲೀಸ್‌ಗೆ ಭಾಕಿ ಇವೆ. ಹೀಗಾಗಿ ಈಗ ಪೂಜಾ ಹೆಗ್ಡೆಗೆ ಮೊದಲಿದ್ದಂತೆ ಬೇಡಿಕೆಯು ಕಮ್ಮಿ ಆಗಿದೆ. ಹೀಗಾಗಿ ತಲೆ ಕೆಡಿಸಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿದೆ. ಸ್ಟಾರ್ ನಟರ ಜೊತೆಗೆ ಚಿತ್ರಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಈ ಇಬ್ಬರ ನಡುವೆ ಕೋಲ್ಡ್ ವಾರ್ ಮೊದಲಿನಿಂದಲೂ ನಡೆಯುತ್ತಲೇ ಇದೆ. ಕೆಲವು ಚಿತ್ರಗಳಿಗೆ ರಶ್ಮಿಕಾ ಮತ್ತು ಪೂಜಾ ಹೆಗ್ಡೆ ಹೆಸರುಗಳ ನಡುವೆ ಪೈಪೋಟಿ ಇರುವುದು ಇಬ್ಬರ ನಡುವಿನ ಕೋಲ್ಡ್‌ವಾರ್ ಕೊಂಚ ಹೆಚ್ಚಾಗಲು ಕಾರಣವಾಗಿದೆಯೆಂದು ಕೂಡ ಹೇಳಲಾಗುತ್ತಿದೆ. ಸದ್ಯ ಪೂಜಾ ಹೆಗ್ಡೆಗಿಂತಲೂ ರಶ್ಮಿಕಾ ತೆಲುಗು, ತಮಿಳು ಮತ್ತು ಬಾಲಿವುಡ್‌ನಲ್ಲಿ ಹೆಚ್ಚಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಇಷ್ಟು ದಿನ ನಟಿ ಪೂಜಾ ಹೆಗ್ಡೆ ಬೇಕು ಅಂತ ಆಕೆಯ ಹಿಂದೆ ಬಿದ್ದಿದ್ದ ಹಲವಾರು ಬ್ರ್ಯಾಂಡ್‌ಗಳು ಈಗ ನಟಿ ರಶ್ಮಿಕಾ ಮಂದಣ್ಣ ಅವರ ಕಡೆಗೆ ಮುಖ ಮಾಡಿವೆಯಂತೆ. ಇದಕ್ಕೆ ಕಾರಣ ನಟಿ ಪೂಜಾ ಹೆಗ್ಡೆ ಜಾಹೀರಾತಿಗಾಗಿ, ಬ್ರ್ಯಾಂಡ್ ಪ್ರಚಾರಕ್ಕಾಗಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ರಶ್ಮಿಕಾ, ಪೂಜಾಗಿಂತ ಕಡಿಮೆ ಸಂಭಾವನೆ ಪಡೆಯುತ್ತಾರೆ ಎನ್ನುವ ಕಾರಣಕ್ಕೆ ಹಲವು ಬ್ರ್ಯಾಂಡ್‌ಗಳು ಪೂಜಾ ಹೆಗ್ಡೆಯನ್ನು ಬಿಟ್ಟು ರಶ್ಮಿಕಾ ಮಂದಣ್ಣ ಕಡೆಗೆ ಮುಖ ಮಾಡಿವೆ ಎನ್ನಲಾಗಿದೆ. ಇದು ಸದ್ಯ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಬಿಸಿಬಿಸಿ ಸುದ್ದಿ. ಹೀಗೆ ಎಲ್ಲವೂ ರಶ್ಮಿಕಾ ಪಾಲಾಗುತ್ತಿರೋದಕ್ಕೆ ಪೂಜಾ ಹೆಗ್ಡೆ ಫ್ಯಾನ್ಸ್ ಕೂಡ ತಲೆಕೆಡಿಸಿಕೊಂಡಿದ್ದಾರೆ.


Click it and Unblock the Notifications











