ಪೂಜಾ ಹೆಗ್ಡೆ ಸಂಭಾವನೆ ಇಳಿಕೆ, ಪವನ್‌ ಕಲ್ಯಾಣ್ ಸಿನಿಮಾ ಆಫರ್!

ಸದ್ಯ ಸೌತ್ ಸಿನಿಮಾರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನಟಿರ ಸಾಲಿನಲ್ಲಿ ಮೊದಲು ಬರುವ ನಟಿಯರು ಅಂದರೆ ನಟಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಸಾಯಿ ಪಲ್ಲವಿ, ಕೃತಿ ‌ಶೆಟ್ಟಿ. ಈ ನಟಿಯರ ಪೈಕಿ ಹೆಚ್ಚಿನ ಬೇಡಿಕೆ ಇರುವುದು ರಶ್ಮಿಕಾ ಮತ್ತು ಪೂಜಾ ಹೆಗ್ಡೆಗೆ. ಈ ಇಬ್ಬರು ನಾಯಕಿಯರು ಈಗ ಸದ್ಯ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟಿಯರಾಗಿದ್ದಾರೆ.

ಆದರೆ ಇವರ ಪೈಕಿ ಪೂಜಾ ಹೆಗ್ಡೆ ನಂಬರ್ 1 ಸ್ಥಾನದಲ್ಲಿ ಇದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಪೂಜಾ ಹೆಗ್ಡೆ ಮೊದಲ ಸ್ಥಾನದಲ್ಲಿ ಕೂತು ಬಿಟ್ಟಿದ್ದಾರೆ. ಆದರೆ ‌ಇತ್ತೀಚೆಗೆ ಪೂಜಾ ಹೆಗ್ಡೆಗೆ ಇರುವ ಬೇಡಿಕೆ ಕಡಿಮೆ ಆಗುತ್ತಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಪೂಜಾ ಹೆಗ್ಡೆ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ ಹಾಗಾಗಿ ಆಕೆಗೆ ಕ್ರಮೇಣವಾಗಿ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿವೆ ಎನ್ನಲಾಗುತ್ತು.

ಆದರೆ ಈ ರೀತಿ ಗುಸು, ಗುಸು ಕೇಳಿ ಬಂದ ನಂತರವೂ ಕೂಡ ಪೂಜಾ ಅವರಿಗೆ ಸಾಲು, ಸಾಲು ಸಿನಿಮಾಗಳು ಒಲಿದು ಬರುತ್ತಿದೆ. ಅದರಲ್ಲೂ ಪೂಜಾ ಹೆಸರು ಸ್ಟಾರ್ ನಟರ ಜೊತೆಗೆ ಕೇಳಿ ಬರ್ತಿದೆ. ಪೂಜಾಗೆ ದೊಡ್ಡ, ದೊಡ್ಡ ಆಫರ್‌ಗಳು ಬರ್ತಿವೆ. ಹಾಗಾಗಿ ಈಗ ತೆಲುಗು ಚಿತ್ರರಂಗದಲ್ಲಿ ಪೂಜಾ ಹೆಗ್ಡೆ ಬಗ್ಗೆ ಹೊಸದೊಂದು ಸುದ್ದಿ ಹಬ್ಬಿದೆ.

Actress Pooja Hegde To Be Pair With Pawan Kalyan

ಪೂಜಾ ಹೆಗ್ಡೆ ಸಂಭಾವನೆ ಹೆಚ್ಚು ಎಂದು ಮೂಗು ಮೂರಿಯುತ್ತದ್ದ ದೊಡ್ಡ, ದೊಡ್ಡ ನಿರ್ಮಾಪಕರು ಈಗ ಪೂಜಾ ಹಿಂದೆ ಬಿದ್ದಿದ್ದಾರಂತೆ. ಅದಕ್ಕೆ ಕಾರಣ ಪೂಜಾ ಹೆಗ್ಡೆ ಅವರ ಸಂಭಾವನೆ ತಗ್ಗಿರುವುದು ಎನ್ನಲಾಗುತ್ತಿದೆ. ಸದ್ಯ ಪವನ್‌ ಕಲ್ಯಾಣ್ ಸಿನಿಮಾಗೆ ಪೂಜಾ ನಾಯಕಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಪವನ್ ಕಲ್ಯಾಣ್ ಮುಂದಿನ ಸಿನಿಮಾ, 'ಭವದೀಯುಡು ಭಗತ್ ಸಿಂಗ'. ಈ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಪವನ್‌ ಕಲ್ಯಾಣ್‌ಗೆ ನಾಯಕಿ ಆಗಿ ಅಭಿನಯಸಲಿದ್ದಾರಂತೆ.

3 ಕೋಟಿಗೆ ಸಂಭಾವನೆ ಪಡೆಯುತ್ತಿದ್ದ ಪೂಜಾ ಹೆಗ್ಡೆ!

ನಟಿ ಪೂಜಾ ಹೆಗ್ಡೆ ಹೆಚ್ಚಿನ ಸಂಭಾವನೆ ಪಡೆಯುವ ಮೂಲಕ ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇದ್ದರು‌. ಪೂಜಾ ಒಂದು‌ ಚಿತ್ರಕ್ಕೆ ಮೂರು ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. 'ಅಲಾ ವೈಕುಂಠ ಪುರಮುಲೊ' ಚಿತ್ರದಿಂದ ಪೂಜಾ ಹೆಗ್ಡೆ ಸಂಭಾವನೆ ಹೆಚ್ಚಾಗಿದೆ ಎನ್ನಲಾಗಿದೆ. 3 ಕೋಟಿ ಇಲ್ಲದೇ ಸಿನಿಮಾ ಒಪ್ಪುವುದಿಲ್ಲವಂತೆ. ಇದೇ ಕಾರಣಕ್ಕೆ ಪೂಜಾಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ ಎನ್ನಲಾಗಿತ್ತು.

ಆದರೆ ಈಗ ಪೂಜಾ ಸಂಭಾವನೆ 3ಕೋಟಿಯಿಂದ ಕಡಿಮೆ ಆಗಿದೆಯಂತೆ. ಹಾಗಾಗಿ ಪೂಜಾಳನ್ನು ಹುಡುಕಿಕೊಂಡು ಹೊಸ, ಹೊಸ ಸಿನಿಮಾಗಳು ಬರ್ತಿವೆ ಎನ್ನುವ ಸುದ್ದಿ ಹಬ್ಬಿದೆ. ಇದರ ಜೊತೆಗೆ ಪೂಜಾ ಹೆಗ್ಡೆ ಬಾಲಿವುಡ್‌ನ ಸರ್ಕಸ್ ಮತ್ತು ತೆಲುಗಿನಲ್ಲಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಇನ್ನು ಇತ್ತೀಚೆಗ ಮಹೇಶ್ ಬಾಬು ಅವರ 28 ಚಿತ್ರಕ್ಕೂ ನಾಯಕಿ ಆಗಿ ಪೂಜಾ ಆಯ್ಕೆ ಆಗಿದ್ದಾರೆ. ಜೊತೆಗೆ ತಮಿಳಿನ 'ಬೀಸ್ಟ್', ತೆಲುಗಿನ 'ರಾಧೆ ಶ್ಯಾಮ್' ಮತ್ತು 'ಆಚಾರ್ಯ' ಚಿತ್ರಗಳು ರಿಲೀಸ್ ಆಗಬೇಕಿದೆ.

More from Filmibeat

English summary
Actress Pooja Hegde To Be Pair With Pawan Kalyan, No Renumaration Issue,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X