'ಡಿಂಪಲ್ ಕ್ವೀನ್' ರಚಿತಾ ರಾಮ್ ಕಡೆಯಿಂದ ಬಂದ ಸ್ಪೆಷಲ್ ನ್ಯೂಸ್
ರಾಕ್ ಲೈನ್ ನಿರ್ಮಾಣದ, ನಂದ ಕಿಶೋರ್ ನಿರ್ದೇಶನದ ಮತ್ತು ಮನೋರಂಜನ್ ನಟನೆಯ ಇನ್ನೂ ಹೆಸರಿಡದ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಮಿಳು 'ವಿಐಪಿ' ಚಿತ್ರದ ರೀಮೇಕ್ ಆಗಿರುವ ಈ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ.
ತಮಿಳು-ತೆಲುಗಿನಿಂದ ಕನ್ನಡಕ್ಕೆ ಸಿನಿಮಾಗಳನ್ನು ರೀಮೇಕ್ ಮಾಡೋದ್ರಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರದು ಎತ್ತಿದ ಕೈ. ಸದ್ಯಕ್ಕೆ ಮರಾಠಿ 'ಸೈರತ್' ತಮಿಳಿನ 'ವಿಐಪಿ' (Velaiyilla Pattathari) ಮತ್ತು 'ವಿಸಾರಣೈ' ಚಿತ್ರಗಳ ರೀಮೇಕ್ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ.
ಅದರಲ್ಲೂ ಧನುಷ್ ನಟಿಸಿದ್ದ 'ವಿಐಪಿ' ಚಿತ್ರಕ್ಕೆ ನಟ ಮನೋರಂಜನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ ಅಂತ ನಾವೇ ನಿಮಗೆ ತಿಳಿಸಿದ್ವಿ. ಅವರಿಗೆ ನಾಯಕಿಯಾಗಿ ಅಮಲಾ ಪೌಲ್ ಅವರನ್ನು ಕರೆ ತರೋದು ಅಂತ ಈ ಮೊದಲು ಮಾತು-ಕತೆಗಳು ನಡೆದಿದ್ದವು.
ಆದರೆ ಅಮಲಾ ಪೌಲ್ ಅವರು ಸದ್ಯಕ್ಕೆ 'ಹೆಬ್ಬುಲಿ' ಶೂಟಿಂಗ್ ನಲ್ಲಿ ಬಿಜಿ ಇದ್ದಾರೆ. ಮಾತ್ರವಲ್ಲದೇ ದಕ್ಷಿಣ ಭಾರತದ ಕಡೆ ಮುಖ ಮಾಡಿರುವ ಅವರು ಅಲ್ಲಿ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.['ವಿಐಪಿ' ಮನೋರಂಜನ್ ಜೊತೆ 'ಈ' ಚೆಲುವೆ ಡ್ಯುಯೆಟ್ ಹಾಡ್ತಾರಾ.?]
ಆದ್ರಿಂದ ಇದೀಗ ಮರಿ ಕ್ರೇಜಿಸ್ಟಾರ್ ಗೆ ನಾಯಕಿಯಾಗಿ ನಮ್ಮ ಕನ್ನಡದ ಸ್ಟಾರ್ ನಟಿಯನ್ನೇ ಆಯ್ಕೆ ಮಾಡಲಾಗಿದೆ. ಯಾರು 'ಆ' ನಟಿ ಎಂಬುದನ್ನು ನೋಡಲು ಮುಂದೆ ಓದಿ.....

ಬುಲ್ ಬುಲ್ ಬೆಡಗಿ
ಕಿರುತೆರೆ ಕ್ಷೇತ್ರದಿಂದ ಪರಿಚಿತರಾಗಿ, 'ಬುಲ್ ಬುಲ್' ಚಿತ್ರದ ಮೂಲಕ ರಾತ್ರೋ ರಾತ್ರಿ ಸ್ಟಾರ್ ನಟಿಯಾಗಿ ಹೊರಹೊಮ್ಮಿದ ನಟಿ ರಚಿತಾ ರಾಮ್ ಅವರು, ಮನೋರಂಜನ್ ಜೊತೆ ಮೊಟ್ಟ ಮೊದಲ ಬಾರಿಗೆ ಡ್ಯುಯೆಟ್ ಹಾಡಲಿದ್ದಾರೆ.[ರಾಕ್ ಲೈನ್ ಜೊತೆ 'ವಿಐಪಿ'ಗೆ ಕೈ ಜೋಡಿಸುತ್ತಾರಾ ಮನೋರಂಜನ್?]

ಅಮಲಾ ಜಾಗಕ್ಕೆ ರಚಿತಾ ರಾಮ್
ಸದ್ಯಕ್ಕೆ 'ಕಿಕ್' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ರಚಿತಾ ರಾಮ್ ಅವರು ಇದೀಗ 'ವಿಐಪಿ' ರೀಮೇಕ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.[ಮತ್ತೆರಡು ತಮಿಳು ಚಿತ್ರಗಳು ಕನ್ನಡಕ್ಕೆ ರೀಮೆಕ್]

'ಭರ್ಜರಿ' ನಂತರ 'ವಿಐಪಿ'ಗೆ ಸಾಥ್
ಧ್ರುವ ಸರ್ಜಾ ಅವರ ಜೊತೆ 'ಭರ್ಜರಿ' ಚಿತ್ರದಲ್ಲಿ ನಟಿಸಿದ ನಂತರ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಯಾವುದೇ ಸಿನಿಮಾಗಳಿಗೆ ಸಹಿ ಹಾಕಿರಲಿಲ್ಲ. 'ಕಿಕ್' ನಲ್ಲಿ ಕಳೆದುಹೋದ ರಚಿತಾ ಅವರು ಮತ್ತೆ ಕಿರುತೆರೆಯಲ್ಲೇ ಠಿಕಾಣಿ ಹೂಡುತ್ತಾರಾ ಅನ್ನೋ ಮಾತುಗಳಿಗೆ ಎಚ್ಚೆತ್ತುಕೊಂಡ ರಚಿತಾ ಅವರು 'ವಿಐಪಿ'ಗೆ ಸಾಥ್ ಕೊಡಲು ತಯಾರಾಗಿದ್ದಾರೆ.[ಕನ್ನಡಕ್ಕೆ ಬಂದ 'ಸೈರತ್' ಬೆಡಗಿ ರಿಂಕುಗೆ ನಾಯಕ ಸಿಕ್ಕಾಯ್ತು!]

ಮುಂದಿನ ವಾರದಲ್ಲಿ ಅಧೀಕೃತ ಘೋಷಣೆ
ಸದ್ಯಕ್ಕೆ ರಚಿತಾ ರಾಮ್ ಅವರ ಜೊತೆ ಮಾತು-ಕತೆ ನಡೆದಿದೆ. ಇದಾದ ನಂತರ ಉಳಿದ ತಾರಾಗಣ ಮತ್ತು ಚಿತ್ರದ ಬಗ್ಗೆ ಇನ್ನಿತರೇ ಮಾಹಿತಿಗಳನ್ನು ಮುಂದಿನ ವಾರದಲ್ಲಿ, ಅಧೀಕೃತ ಘೋಷಣೆ ಮಾಡುವ ಮೂಲಕ ತಿಳಿಸಲಿದ್ದಾರಂತೆ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು.[ಡಾ.ರಾಜ್ ನಂತರ, ಮುಂದಿನ 'ಚೆಂಗುಮಣಿ' ಆಗ್ತಾರಾ ಮನೋರಂಜನ್.?]

ನಿರ್ದೇಶನ ಯಾರದ್ದು?
'ರನ್ನ', 'ವಿಕ್ಟರಿ' ಚಿತ್ರಗಳನ್ನು ನಿರ್ದೇಶನ ಮಾಡಿರುವ ಯಶಸ್ವಿ ನಿರ್ದೇಶಕ ನಂದ ಕಿಶೋರ್ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಸದ್ಯಕ್ಕೆ ನಂದ ಕಿಶೋರ್ ಅವರು 'ಮುಕುಂದ ಮುರಾರಿ' ಚಿತ್ರದ ಬಿಡುಗಡೆ ಕಾಯುತ್ತಿದ್ದಾರೆ. ಮುಂದಿನ ಶುಕ್ರವಾರ ಮುರಾರಿ ಥಿಯೇಟರ್ ಗೆ ಕಾಲಿಡಲಿದ್ದಾನೆ.

ಮನೋರಂಜನ್ 2ನೇ ಪ್ರಾಜೆಕ್ಟ್
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸುಪುತ್ರ ಮನೋರಂಜನ್ ಅವರಿಗೆ ಇದು ಎರಡನೇ ಸಿನಿಮಾ. ಮೊದಲ ಸಿನಿಮಾ 'ಸಾಹೇಬ' ಶೂಟಿಂಗ್ ಮುಗಿದಿದ್ದು, ತೆರೆಗೆ ಬರಲು ತಯಾರಾಗಿ ನಿಂತಿದೆ. 'ಸಾಹೇಬ' ಚಿತ್ರದಲ್ಲಿ ಮನೋರಂಜನ್ ಜೊತೆ ಶಾನ್ವಿ ಶ್ರೀವಾಸ್ತವ ಡ್ಯುಯೆಟ್ ಹಾಡಿದ್ದಾರೆ.


Click it and Unblock the Notifications











