ಬೋಲ್ಡ್ ಲುಕ್ ಪಾತ್ರಕ್ಕೆ ರಚ್ಚು ಬ್ರೇಕ್!

ನಟಿ ರಚಿತಾ ರಾಮ್‌ ಸ್ಯಾಂಡಲ್‌ವುಡ್‌ ಚಿತ್ರರಂಗದ ಸ್ಟಾರ್‌ ನಟಿ. ಸದ್ಯ ರಚಿತಾ ರಾಮ್‌ಗೆ ಎಲ್ಲಿಲ್ಲದ ಬೇಡಿಕೆ ಇದೆ. ರಚಿತಾ ರಾಮ್‌ ಕನ್ನಡದ ಲಕ್ಕಿ ಹುಡುಗಿ ಅಂತಲೇ ಹೆಸರುವಾಸಿ. ಈಕೆ ಅಭಿನಯದ ಬಹುತೇಕ ಸಿನಿಮಾಗಳು ಸೂಪರ್‌ ಹಿಟ್ ಆಗಿವೆ. ಹಾಗಾಗಿ ರಚಿತಾ ರಾಮ್‌ಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದ್ದೇ ಇದೆ.

ರಚಿತಾ ರಾಮ್‌ ಕೂಡ ಒಂದಲ್ಲಾ, ಒಂದು ವಿಭಿನ್ನ, ವಿಶೇಷ ಪಾತ್ರಗಳನ್ನು ಮಾಡುತ್ತಾ, ತಮ್ಮ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ರಚಿತಾಗೆ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್‌ ಫಾಲೋಯಿಂಗ್ ಇರುವ ಕಾರಣಕ್ಕೆ ಆಕೆ ಏನೇ ಮಾಡಿದ್ರು, ಯಾವುದೇ ಪಾತ್ರದಲ್ಲಿ ಕಾಣಿಸಿಕೊಂಡರೂ ಕೂಡ ವಿಶೇಷವಾಗಿ ಸುದ್ದಿ ಆಗುತ್ತಲೇ ಇರುತ್ತದೆ.

ಇತ್ತೀಚೆಗೆ ನಟಿ ರಚಿತಾ ರಾಮ್‌ ಹೆಚ್ಚಾಗಿ ಸದ್ದು ಮಾಡಿದ್ದು ಅಂದರೆ ಅದು ತಮ್ಮ ಹೊಸ ಸಿನಿಮಾಗಳ ಮೂಲಕ. ಹೌದು ರಚಿತಾ ರಾಮ್ ಒಬ್ಬ ನಟಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಇತ್ತೀಚೆಗೆ ಬಂದ ಕೆಲವು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅದು ನೆಗೆಟಿವ್ ಆಗಿ ಸುದ್ದಿ ಆಯ್ತು.

ಲವ್‌ಗೂ, ರಚಿತಾಗೂ ಆಗಿ ಬರ್ತಿಲ್ಲ!

ಲವ್‌ಗೂ, ರಚಿತಾಗೂ ಆಗಿ ಬರ್ತಿಲ್ಲ!

ನಟಿ ರಚಿತಾ ರಾಮ್ ಇತ್ತೀಚೆಗೆ ಮಾಡಿರುವ ಸಿನಿಮಾಗಳು ಹೆಚ್ಚಾಗಿ ಲವ್‌ ಕಾನ್ಸೆಪ್ಟ್ ಮೇಲೆ ಇದೆ. ಚಿತ್ರದ ಟೈಟಲ್ ಕೂಡ ಅದೇ ಆಗಿದೆ. ಅವರ ಈ ಹಿಂದಿನ ಚಿತ್ರಗಳಲ್ಲೂ ಕೂಡ ಪ್ರೇಮ ಕಹಾನಿ ಕತೆ ಇದ್ದೇ, ಇದೆ. ಆದರೆ ಮುಖ್ಯ ಅಂಶ ಬೆರೆ ಏನೂ ಇರುತ್ತಿತ್ತು. ಇತ್ತೀಚೆಗಿನ ಚಿತ್ರಗಳು ಅಂದರೆ 'ಐ ಲವ್ ಯು', 'ಲವ್ ಯು ರಚ್ಚು', 'ಏಕ್ ಲವ್ ಯಾ' ಚಿತ್ರಗಳು. ಈ ಚಿತ್ರಗಳಲ್ಲಿ ಪ್ರೇಮ ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಾಗಾಗಿ ಪಾತ್ರಕ್ಕೆ ತಕ್ಕಂತೆ ರಚಿತಾ ಅವರು ಕೊಂಚ ಬೋಲ್ಡ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಅದ್ಯಾಕೋ ರಚಿತಾ ರಾಮ್ ಅವರನ್ನು ಹೋಮ್ಲಿ ಹುಡುಗಿ ಪಾತ್ರದಲ್ಲಿ ನೋಡಿದವರಿಗೆ ರಚ್ಚು ಬೋಲ್ಡ್ ಲುಕ್ ಒಪ್ಪಲು ಅಷ್ಟು ಸುಲಭಕ್ಕೆ ಸಾಧ್ಯ ಆಗಿಲ್ಲ. ಹಾಗಾಗಿ ಒಂದಷ್ಟು ವಿವಾದಗಳು ಹುಟ್ಟಿಕೊಂಡಿದ್ದವು.

ಇನ್ಮುಂದೆ ಲವ್‌ ಸಿನಿಮಾ ಮಾಡಲ್ವಾ ರಚಿತಾ ರಾಮ್?

ಇನ್ಮುಂದೆ ಲವ್‌ ಸಿನಿಮಾ ಮಾಡಲ್ವಾ ರಚಿತಾ ರಾಮ್?

ರಚಿತಾ ರಾಮ್‌ ಅವರು ಇತ್ತೀಚೆಗೆ ತಮ್ಮ ಪಾತ್ರಗಳ ಬಗೆಗಿನ ವಿವಾದಗಳ ಬಗ್ಗೆ ಮಾತನಾಡಿದ್ದಾರೆ. ರಚಿತಾ ರಾಮ್‌ ಅವರ ಬೋಲ್ಡ್ ಪಾತ್ರಗಳ ಬಗ್ಗೆ ಒಂದಷ್ಟು ವಿವಾದಗಳು ಹಬ್ಬಿದ್ದವು. 'ಐ ಲವ್ ಯು' ಚಿತ್ರದ ಬಳಿಕ, 'ಲವ್ ಯು ರಚ್ಚು' ಸಿನಿಮಾ ಬಂತು. ನಂತರ ಅದರ ಹಿಂದೆಯೇ 'ಏಕ್‌ ಲವ್ ಯಾ' ಸಿನಿಮಾ ರಿಲೀಸ್ ಆಯ್ತು. ಈ ಮೂರು ಚಿತ್ರಗಳಲ್ಲಿ ರಚಿತಾ ರಾಮ್ ಅವರು ಕೊಂಚ ವಿಭಿನ್ನವಾಗಿ ಅಂದರೆ ಬೋಲ್ಡ್ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಲವ್‌ಗೂ ನನಗೂ ಆಗಿ ಬರ್ತಿಲ್ಲ ಹಾಗಾಗಿ ಈ ರೀತಿ ಸಿನಿಮಾಗಳನ್ನು ನಾನು ಇನ್ನು ಮುಂದೆ ಮಾಡುವುದಿಲ್ಲ ಎಂದು ರಚಿತಾ ರಾಮ್ ಪರೋಕ್ಷವಾಗಿ ಹೇಳಿಕೊಂಡಿದ್ದರು.

ಬೋಲ್ಡ್ ಪಾತ್ರದ ಸುದ್ದಿ ಬಗ್ಗೆ ರಚ್ಚು ಬೇಸರ!

ಬೋಲ್ಡ್ ಪಾತ್ರದ ಸುದ್ದಿ ಬಗ್ಗೆ ರಚ್ಚು ಬೇಸರ!

ಈ ಹಿಂದೆ ನಟಿ ರಚಿತಾ ರಾಮ್ ಅವರು ತಮ್ಮ ಬೋಲ್ಡ್ ಪಾತ್ರಗಳ ಬಗ್ಗೆ ಸುದ್ದಿ ಆಗುತ್ತಿರುವ ಬಗ್ಗೆ ಮಾತನಾಡಿದ್ದರು. ಬೇರೆ, ಬೇರೆ ಸಿನಿಮಾ ಮಾಡಿದರು, ಪಾತ್ರ ಮಾಡಿದರೂ ಕೂಡ ಕೇವಲ ಬೋಲ್ಡ್ ಪಾತ್ರದ ಬಗ್ಗೆನೇ ಸುದ್ದಿ ಆಗುತ್ತದೆ. ಅಲ್ಲದೇ, ಬ್ರೇವ್ ನಟಿ ಎನ್ನುವ ಟ್ಯಾಗ್‌ಗೆ ಸೀಮಿತಾ ಆಗುತ್ತಿರುವ ಹಾಗೆ ಎನಿಸಿದೆಯಂತೆ. ಹಾಗಾಗಿ ರಚಿತಾ ಇನ್ನು ಮುಂದೆ ಈ ರೀತಿ ಸಿನಿಮಾ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ರಚ್ಚು ಇನ್ಮೇಲೆ ಲವ್ ಕಹಾನಿ ಮತ್ತು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಮುಂದಿನ ಆಯ್ಕೆ ಮೇಲೆ ಕುತೂಹಲ!

ಮುಂದಿನ ಆಯ್ಕೆ ಮೇಲೆ ಕುತೂಹಲ!

ಸದ್ಯ ರಚಿತಾ ರಾಮ್ ಅವರ 'ಲವ್ ಮಿ ಔರ್ ಹೇಟ್ ಮಿ' ಚಿತ್ರ ಮಾತ್ರ ಲವ್‌ ಹೆಸರಿನಲ್ಲಿ ಇದೆ. ಇದು ಬಿಟ್ಟರೆ, ಮ್ಯಾಟ್ನಿ, ಲಿಲ್ಲಿ, 'ಮಾನ್ಸೂನ್ ರಾಗ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ. ಇನ್ನು ರಚಿತಾಗಾಗಿ ಕೈಯಲ್ಲಿ ಲವ್‌ ಕಹಾನಿ ಸಿನಿಮಾ ಹಿಡಿದು ನಿಂತಿರುವವರು ಕೊಂಚ ಯೋಚನೆ ಮಾಡಲೇ ಬೇಕು. ರಚ್ಚು ಮುಂದಿನ ಆಯ್ಕೆ ಹೇಗೆ ಇರಲಿದೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಸೃಷ್ಟಿ ಆಗಿವೆ.

More from Filmibeat

English summary
Actress Rachita Ram Wants To Stop Acting In Bold Roles In Films,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X