»   » ಹಾಟ್ ನಟಿ ರಾಧಿಕಾ ಆಪ್ಟೆ 'ರತಿ' ವಿಡಿಯೋ ರಹಸ್ಯ

ಹಾಟ್ ನಟಿ ರಾಧಿಕಾ ಆಪ್ಟೆ 'ರತಿ' ವಿಡಿಯೋ ರಹಸ್ಯ

Posted By: ಉದಯರವಿ
Subscribe to Filmibeat Kannada

ಎಂಥವರನ್ನೂ ಮೂಕವಿಸ್ಮಿತಗೊಳಿಸುವ ನೋಟ ನಟಿ ರಾಧಿಕಾ ಆಪ್ಟೆ ಅವರದು. ಇತ್ತೀಚೆಗೆ ವಾಟ್ಸಪ್ ನಲ್ಲಿ ಅವರ ಅಶ್ಲೀಲ ವಿಡಿಯೋವೊಂದು ಹರಿದಾಡಿ ಭಾರಿ ರಾದ್ಧಾಂತಕ್ಕೆ ಕಾರಣವಾಗಿತ್ತು. ಇದೀಗ ಆ 'ರತಿ' ವಿಡಿಯೋದ ಅಸಲಿ ರಹಸ್ಯ ಬಯಲಾಗಿದೆ.

ಆ ನಗ್ನ ವಿಡಿಯೋ ಲೀಕ್ ಹಿಂದಿನ ಉದ್ದೇಶ ಗೊತ್ತಾಗಿದೆ. ತನ್ನ ನಿರ್ದೇಶನದ ಚಿತ್ರದಲ್ಲಿ ರಾಧಿಕಾ ಆಪ್ಟೆ ನಗ್ನವಾಗಿ ನಟಿಸಿದ ವಿಡಿಯೋವನ್ನು ಲೀಕ್ ಮಾಡಿದ್ದಾರೆಂದು ಪೊಲೀಸರ ಮೊರೆ ಹೋಗಿದ್ದಾರೆ ನಿರ್ದೇಶಕ ಅನುರಾಗ್ ಕಶ್ಯಪ್. [ನನ್ನ ದೃಷ್ಟಿಯಲ್ಲಿ ಹಸಿವಿನಂತೆ ರತಿಕ್ರೀಡೆಯೂ ಅಷ್ಟೇ]

ರಾಧಿಕಾ ಆಪ್ಟೆ ಅವರ ನಗ್ನ ವಿಡಿಯೋ ಭಾನುವಾರದಿಂದ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಇದರಿಂದ ಬೇಸತ್ತ ನಿರ್ದೇಶಕ ಕಶ್ಯಪ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವಿಡಿಯೋ ಕ್ಲಿಪ್ಪಿಂಗ್ ಅನುರಾಗ್ ನಿರ್ದೇಶನದ 20 ನಿಮಿಷಗಳ ಕಾಲಾವಧಿಯ ಕಿರುಚಿತ್ರದ ತುಣುಕುಗಳು ಎನ್ನಲಾಗಿದೆ.

ಆಂಗ್ಲ ಚಿತ್ರದಲ್ಲಿ ನಗ್ನವಾಗಿ ಅಭಿನಯಿಸಿದ್ದಾರಂತೆ

ತಾನೊಂದು ಆಂಗ್ಲ ಚಿತ್ರದಲ್ಲಿ ನಗ್ನವಾಗಿ ಅಭಿನಯಿಸಿದ್ದೇನೆ ಎಂದು ಸ್ವತಃ ರಾಧಿಕಾ ಆಪ್ಟೆ ಬಾಂಬ್ ಸಿಡಿದಿದ್ದರು. ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿರುವ ಈ ಚೆಂದುಳ್ಳಿ ಚೆಲುವೆ ಮಲಯಾಳಂ, ಹಿಂದಿ, ಮರಾಠಿ, ಬೆಂಗಾಳಿ ಭಾಷಾ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಹೆಚ್ಚಾಗಿ ಸುದ್ದಿಯಾಗಿದ್ದು ಬಾತ್ ರೂಮ್ ನಲ್ಲಿ

ತಾನು ಅಭಿನಯಿಸಿದ ಚಿತ್ರಗಳಿಗಿಂತಲೂ ಹೆಚ್ಚಾಗಿ ಸುದ್ದಿಯಾಗಿದ್ದು ಮಾತ್ರ ಬಾತ್ ರೂಮ್ ಸನ್ನಿವೇಶದ ವಿಡಿಯೋ ಮೂಲಕ. ಆದರೆ ಅಸಲಿಯಾಗಿ ರಾಧಿಕಾ ಆ ವಿಡಿಯೋಗಳಲ್ಲಿ ಇರಲಿಲ್ಲವಂತೆ. ಯಾರೋ ತಮ್ಮ ಚಿತ್ರವನ್ನು ಮಾರ್ಫ್ ಮಾಡಿ ಆ ವಿಡಿಯೋ ತಯಾರಿಸಿದ್ದಾರೆ ಎಂದಿದ್ದರು ರಾಧಿಕಾ.

ಬದ್ಲಾಪುರ್ ನಲ್ಲಿ ಅಂದಚೆಂದ ತೆರೆದಿಟ್ಟ ಬೆಡಗಿ

ವರುಣ್ ಧವನ್ ಅವರ ಹಿಂದಿ ಲೇಟೆಸ್ಟ್ ಹಿಟ್ ಚಿತ್ರ 'ಬದ್ಲಾಪುರ್'ನಲ್ಲಿ ತಮ್ಮ ಅಂದಚೆಂದಗಳ ಮೂಲಕ ತೆರೆ ಬೆಳಗಿದ್ದರು ಈ ಬ್ಯೂಟಿ. ಇತ್ತೀಚೆಗೆ ಬಿಡುಗಡೆಯಾದ 'ಹಂಟರ್' ಚಿತ್ರದಲ್ಲಿ ಸೆಕ್ಸ್ ಅಡಿಕ್ಟ್ ಆಗಿ ಕಾಣಿಸಿಕೊಂಡಿದ್ದರು.

ರತಿ ಇಮೇಜ್ ಪಾತ್ರಗಳಿಗೆ ಅವಕಾಶ

ಹೆಚ್ಚಾಗಿ ಆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡ ಕಾರಣಕ್ಕೋ ಏನೋ ಬಾಲಿವುಡ್ ನಲ್ಲಿ 'ರತಿ' ಇಮೇಜ್ ನ ಪಾತ್ರಗಳು ದಂಡಿಯಾಗಿ ಬರುತ್ತಿವೆಯಂತೆ. ಹಂಟರ್ ಚಿತ್ರದ ಪ್ರೊಮೋ ಬಂದ ಮೇಲಂತೂ ಅವರನ್ನು ಇದೇ ಪಾತ್ರಕ್ಕೆ ಸೀಮಿತ ಎಂದುಕೊಂಡರು.

ಸಾಫ್ಟ್ ಚಿತ್ರಗಳ ರಾಣಿ ಎನ್ನಿಸಿಕೊಳ್ಳುತ್ತಾರಾ?

ಇನ್ನು ಹಂಟರ್ ಚಿತ್ರದ ಪ್ರೊಮೋ ಬಿಡುಗಡೆಯಾದ ಮೇಲಂತೂ ತಮ್ಮ ಪರಿಸ್ಥಿತಿ ಶೋಚನೀಯವಾಗಿದೆ ಎನ್ನುವ ಅವರು, ಅವರನ್ನು ಸಂಪರ್ಕಿಸುತ್ತಿರುವ ನಿರ್ಮಾಪಕ, ನಿರ್ದೇಶಕರು ಸಾಫ್ಟ್ ಪೋರ್ನ್ ಪಾತ್ರಗಳನ್ನು ಮಾಡುವಂತೆ ಕೇಳುತ್ತಿದ್ದಾರಂತೆ. ಈ ವಿಷಯವನ್ನು ಸ್ವತಃ ರಾಧಿಕಾ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು.

English summary
On Sundary much to the shock of all Radhika Apte's bold video showing her nude went viral on net. Filmmaker Anurag Kashyap turned furious on people who uploaded some parts of 20 minute video on social media and WhatsApp to tarnish Radhika Apte's image. Speaking to scribes he revealed the mystery behind Radhika Apte's nude video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada