For Quick Alerts
  ALLOW NOTIFICATIONS  
  For Daily Alerts

  ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ನಟಿ ರಕ್ಷಿತಾ ಗುಡ್ ಬೈ?

  By ಉದಯರವಿ
  |
  ಬಿಎಸ್ಆರ್ ಕಾಂಗ್ರೆಸ್ ಪಕ್ಷದ ವರ್ಚಸ್ವಿ ನಾಯಕಿ ರಕ್ಷಿತಾ ಪ್ರೇಮ್ ಅವರಿಗೆ ಆಗಲೇ ರಾಜಕೀಯ ಸಾಕಾಯಿತೆ? ಚುನಾವಣಾ ಕಣದಿಂದ ಹಿಂದೆ ಸರಿಯಲು ಆವರು ನಿರ್ಧರಿಸಿದ್ದಾರೆ. ಅವರು ಚಾಮರಾಜನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ ಎಂದು ಹೇಳಲಾಗಿದೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಅವರಿಗೆ ಚಾಮರಾಜನಗರ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.

  ಪಕ್ಷದ ನಾಯಕರ ಅಸಹಕಾರದ ಹಿನ್ನೆಲೆಯಲ್ಲಿ ರಕ್ಷಿತಾ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಶೀಘ್ರದಲ್ಲೇ ಅವರು ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೂ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗಿದೆ.

  ಇನ್ನೊಂದು ಮೂಲದ ಪ್ರಕಾರ, ಇದು ಕೇವಲ ಗಾಸಿಪ್ ಅಷ್ಟೇ. ರಕ್ಷಿತಾ ಅವರು ಯಾವುದೇ ಕಾರಣಕ್ಕೂ ಬಿಎಸ್ಆರ್ ಕಾಂಗ್ರೆಸ್ ತೊರೆಯಲ್ಲ ಎನ್ನುತ್ತವೆ. ರಕ್ಷಿತಾ ಅವರು ಬಿಎಸ್ಆರ್ ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೂ ಹಬ್ಬಿತ್ತು.

  ರಾಯಚೂರಿನಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ರಕ್ಷಿತಾ ಗೈರು ಹಾಜರಾಗಿದ್ದರು. ಆಗ ಸ್ವಾಭಿಮಾನಿ ಶ್ರೀರಾಮುಲು ಪಕ್ಷ ತೊರೆದು ಕೆಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಸುದ್ದಿ ಠುಸ್ ಆಗಿತ್ತು. ಈಗ ಮತ್ತೊಮ್ಮೆ ಅದೇ ರೀತಿಯ ಸುದ್ದಿ ಹರಿದಾಡುತ್ತಿದೆ. ಸತ್ಯಾಸತ್ಯತೆಗಳು ಇನ್ನಷ್ಟೇ ಗೊತ್ತಾಗಬೇಕು.

  ಇನ್ನೂ ರಾಜಕೀಯದಲ್ಲಿ ಅಂಬೆಗಾಲಿಟ್ಟಿರುವ ರಕ್ಷಿತಾ ಅವರಿಗೆ ಇಷ್ಟು ಬೇಗ ರಾಜಕೀಯ ಸನ್ಯಾಸ ಸ್ವೀಕರಿಸಿಬಿಟ್ತಾರೆಯೇ ಎಂಬ ಪ್ರಶ್ನೆ ಆಕೆಯ ಅಭಿಮಾನಿಗಳಲ್ಲಿ ತಲೆಯೆತ್ತಿದೆ. ತಮ್ಮ ಗ್ಲಾಮರ್ ಹಾಗೂ ಭಾಷಣಗಳ ಮೂಲಕ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲೂ ರಕ್ಷಿತಾ ಒಂಚೂರು ಯಶಸ್ವಿಯಾಗಿದ್ದಾರೆ. (ಏಜೆನ್ಸೀಸ್)

  English summary
  If rumours are to be believed, Kannada actresses Rakshita Prem all set to quit BSR Congress. It is also said that, the actress not contesting from Chamrajnagar constituency. Rakshita is active in Sriramulu's BSR Congress party. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X