For Quick Alerts
  ALLOW NOTIFICATIONS  
  For Daily Alerts

  ನಟಿ ರಂಭಾ ರು.4 ಕೋಟಿ ಚಿನ್ನಾಭರಣ ಕಳೆದುಕೊಂಡ್ರಾ?

  By ಅನಂತರಾಮು, ಹೈದರಾಬಾದ್
  |

  'ಸರ್ವರ್ ಸೋಮಣ್ಣ' (1993) ಚಿತ್ರದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ರಂಭಾ ಒಂದು ಕಾಲದಲ್ಲಿ ಇಡೀ ದಕ್ಷಿಣ ಚಿತ್ರರಂಗವನ್ನು ಆಳಿದವರು. ಇಂದಿರನ್ ಪದ್ಮನಾಭನ್ ಅವರನ್ನು ಮದುವೆಯಾದ ಬಳಿಕ ಬಣ್ಣದ ಜಗತ್ತಿನಿಂದ ದೂರ ಸರಿದಿದ್ದರು. ಇದೀಗ ಮತ್ತೆ ಸುದ್ದಿಗೆ ಆಹಾರವಾಗಿದ್ದಾರೆ.

  ರು.4 ಕೋಟಿ ಚಿನ್ನಾಭರಣ ಕಳೆದುಕೊಂಡ ಕೇಸ್ ಒಂದರಲ್ಲಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಈ ಸಂಬಂಧ ನಟಿ ರಂಭಾ ಅವರ ಸೋದರ ಶ್ರೀನಿವಾಸ್ ಅವರು ಹೈದರಾಬಾದಿನ ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. [ಕವಲುದಾರಿಯಲ್ಲಿ ನಟಿ ರಂಭಾ ದಾಂಪತ್ಯ ಜೀವನ?]


  ತನ್ನ ಸಹೋದರಿ ರಂಭಾ ಅವರಿಗೆ ಸೇರಿದ ರು.4.5 ಕೋಟಿ ಬೆಲೆಬಾಳುವ ಆಭರಣಗಳನ್ನು ತನ್ನ ಪತ್ನಿ ಪಲ್ಲವಿ ಮತ್ತವರ ಕುಟುಂಬಿಕರು ಕದ್ದಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ. ರಂಭಾ ಅವರು ಮೂರು ವರ್ಷಗಳ ಹಿಂದೆ ಕೆನಡಾಗೆ ಹೋಗಿದ್ದಾಗ ಈ ಘಟನೆ ನಡೆದಿರುವುದಾಗಿ ಹೇಳಿದ್ದಾರೆ.

  ಆಗ ಆಭರಣಗಳನ್ನು ರಂಭಾ ಅವರು ನಮ್ಮ ಮನೆಯಲ್ಲಿ ಇಟ್ಟು ಹೋಗಿದ್ದರು. ತನ್ನ ಪತ್ನಿ ಪಲ್ಲವಿ ಹಾಗೂ ಆಕೆಯ ಸೋದರಿ ಶಾಂತಿ ಸಿಂಗ್ ಚೌಹಾಣ್ ಇನ್ನಿತರರು ಕದ್ದಿದ್ದಾರೆ ಎಂದು ಶ್ರೀನಿವಾಸ್ ಅವರು ದೂರು ನೀಡಿದ್ದಾರೆ. ನನ್ನ ಮಗನನ್ನೂ ಅವರು ನನ್ನಿಂದ ದೂರ ಮಾಡಿದರು. ಇದುವರೆಗೂ ನನ್ನ ಪುತ್ರನನ್ನು ನನಗೆ ತೋರಿಸುತ್ತಿಲ್ಲ ಎಂದು ಅವರು ತಮ್ಮ ದುಗುಡ ತೋಡಿಕೊಂಡಿದ್ದಾರೆ.

  Actress Rambha's Rs.4 crore jewellery missing?

  ಪಲ್ಲವಿ ಅವರ ಅಕ್ಕ ಮುಂಬೈನಲ್ಲಿ ಗೋಲ್ಡ್ ಬಿಜಿನೆಸ್ ಮಾಡುತ್ತಿದ್ದಾರೆ. ಆ ಮಳಿಗೆಯಲ್ಲಿ ಚಿನ್ನಾಭರಣಗಳನ್ನು ಪ್ರದರ್ಶಿಸಲು ರಂಭಾ ಅವರ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಬಹಳ ಕಾಲದವರೆಗೂ ವಾಪಸ್ ತಂದುಕೊಟ್ಟಿರಲಿಲ್ಲ. ಬಹಳ ಕಾಲದ ಬಳಿಕ ಆಭರಣಗಳನ್ನು ಮನೆಗೆ ಕಳುಹಿಸಿದರು. ಅವನ್ನು ಪರೀಕ್ಷಿಸಲಾಗಿ ನಕಲಿ ಎಂದು ಗೊತ್ತಾಯಿತು ಎಂದಿದ್ದಾರೆ ಶ್ರೀನಿವಾಸ್.

  ಈ ಹಿಂದೊಮ್ಮೆ ಶ್ರೀನಿವಾಸ್ ಅವರ ಪತ್ನಿ ಪಲ್ಲವಿ ಅವರು ರಂಭಾ ಮತ್ತವರ ತಂದೆತಾಯಿ ಹಾಗೂ ತನ್ನ ಪತಿ ಶ್ರೀನಿವಾಸ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು. ಈ ಸಂಬಂಧ ಹೈದರಾಬಾದಿನ ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ವಿರೋಧಿ ಕಾಯಿದೆಗಳಡಿ ದೂರು ದಾಖಲಾಗಿದೆ. ಸದ್ಯಕ್ಕೆ ಪಲ್ಲವಿ ಅವರು ಶ್ರೀನಿವಾಸ್ ಜೊತೆ ಇಲ್ಲ.

  English summary
  Rambha's Brother Srinivas lodged a complaint with Banjara Hills police accusing his wife Pallavi and her family members of robbing Rs 4.5 crore worth jewellery belonging to the Actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X