»   » ಖಳನಟಿಯಾಗಿ 'ಜಾಗ್ವಾರ್' ಏರಿದ ನಟಿ ರಮ್ಯಕೃಷ್ಣ.?

ಖಳನಟಿಯಾಗಿ 'ಜಾಗ್ವಾರ್' ಏರಿದ ನಟಿ ರಮ್ಯಕೃಷ್ಣ.?

Posted By:
Subscribe to Filmibeat Kannada

ಭಾರಿ ನಿರೀಕ್ಷೆ ಹುಟ್ಟಿಸಿರುವ ನಿಖಿಲ್ ಕುಮಾರ್ ಅವರ ಚೊಚ್ಚಲ ಚಿತ್ರ 'ಜಾಗ್ವಾರ್' ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಕೊನೆಯ ಹಂತದ ಶೂಟಿಂಗ್ ನಲ್ಲಿ ಬಿಜಿಯಾಗಿರುವ 'ಜಾಗ್ವಾರ್' ಚಿತ್ರತಂಡ ಸೆಪ್ಟೆಂಬರ್ ತಿಂಗಳಿನಲ್ಲಿ ಆಡಿಯೋ ಬಿಡುಗಡೆ ಮಾಡಲಿದ್ದಾರೆ.

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿರುವ 'ಜಾಗ್ವಾರ್' ಚಿತ್ರದಲ್ಲಿ ತೆಲುಗು ಕಾಮಿಡಿ ಕಿಂಗ್ ಬ್ರಹ್ಮಾನಂದ್, ನಟ ಜಗಪತಿ ಬಾಬು, ಸಂಪತ್ ಮತ್ತು ಸೌರವ್ ಲೋಕೇಶ್ ಮಿಂಚುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ.[ಸೆಪ್ಟೆಂಬರ್ ನಲ್ಲಿ ಶುರುವಾಗಲಿದೆ 'ಜಾಗ್ವಾರ್' ಹಾಡುಗಳ ಹಬ್ಬ]


Actress Ramya Krishna in Nikhil Kumar's 'Jaguar'

ಇದೀಗ ಈ ಚಿತ್ರದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಖ್ಯಾತ ಬಹುಭಾಷಾ ನಟಿ ರಮ್ಯಕೃಷ್ಣ ಅವರು 'ಜಾಗ್ವಾರ್' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.


'ಬಾಹುಬಲಿ' ಚಿತ್ರದಲ್ಲಿ ಶಿವಗಾಮಿಯಾಗಿ ಕಾಣಿಸಿಕೊಂಡು ಭಾರಿ ಖ್ಯಾತಿ ಗಳಿಸಿದ್ದ ನಟಿ ರಮ್ಯಕೃಷ್ಣ ಅವರು ಇದೀಗ ನಿಖಿಲ್ ಕುಮಾರ್ ಅವರ 'ಜಾಗ್ವಾರ್' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ.[ಎತ್ತಣದಿಂದೆತ್ತಣಕ್ಕೆ 'ಭಜರಂಗಿ' ಲೋಕಿಯ ಪಯಣ]


Actress Ramya Krishna in Nikhil Kumar's 'Jaguar'

ಎಸ್.ಎಸ್ ರಾಜಮೌಳಿ ಅವರ ಶಿಷ್ಯ ಎ.ಮಹದೇವ ಅವರು ಆಕ್ಷನ್-ಕಟ್ ಹೇಳಿರುವ 'ಜಾಗ್ವಾರ್' ಚಿತ್ರದಲ್ಲಿ ನಿಖಿಲ್ ಕುಮಾರ್ ಅವರಿಗೆ ನಾಯಕಿಯಾಗಿ ಮಲಯಾಳಿ ನಟಿ ದೀಪ್ತಿ ಸತಿ ಅವರು ಮಿಂಚಿದ್ದಾರೆ.[ಎಚ್.ಡಿ.ಕುಮಾರಸ್ವಾಮಿ ಸುಪುತ್ರ ನಿಖಿಲ್ ರೋಷ-ಆವೇಶ ಹೀಗಿದೆ....]


Actress Ramya Krishna in Nikhil Kumar's 'Jaguar'

ನಟಿ ರಮ್ಯಕೃಷ್ಣ ಅವರು 'ಜಾಗ್ವಾರ್' ಚಿತ್ರದಲ್ಲಿ ಖಳನಟಿಯ ಪಾತ್ರ ವಹಿಸುತ್ತಿದ್ದು, ಇವರ ಪಾತ್ರ ಚಿತ್ರದ ಕಥೆಗೆ ಒಂದು ಹೊಸ ತಿರುವು ಕೊಡಲಿದೆಯಂತೆ.[ಕನ್ನಡದ ಬಿಸಿ ಬೇಳೆಬಾತ್ ಬದ್ಲು ಹೈದರಾಬಾದ್ ಬಿರಿಯಾನಿ ಉಂಡ ಕುಮಾರಣ್ಣ.!]

English summary
Veteran actress Ramya Krishna joined the cast of the Kannada Telugu bilingual, Movie 'Jaguar'. The film, which marks the debut of Kannada Actor Nikhil Kumar. The movie is directed by A.Mahadev.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada