For Quick Alerts
  ALLOW NOTIFICATIONS  
  For Daily Alerts

  ಪತ್ರಕರ್ತರನ್ನು 'ನಾಯಿಗಳು' ಎಂದ ಚಿತ್ರ ನಿರ್ದೇಶಕ

  By ಶಂಕರ್, ಚೆನ್ನೈ
  |
  ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಇವು ಭಾರತ ಸಂವಿಧಾನದ ಮೂರು ಆಧಾರಸ್ತಂಭಗಳು. ಈ ಮೂರನ್ನೂ ಕಾವಲು ನಾಯಿಯಂತೆ ಸದಾ ಕಾಯುತ್ತಿರುವ ನಮ್ಮ ಮಾಧ್ಯಮಗಳನ್ನು ನಾಲ್ಕನೇ ಸ್ತಂಭಕ್ಕೆ ಹೋಲಿಸಲಾಗಿದೆ. ಇಂತಹ ಪವಿತ್ರವಾದ ವೃತ್ತಿಯನ್ನೇ ಚಿತ್ರ ನಿರ್ದೇಶಕರೊಬ್ಬರು ಕೆಣಕಿದ್ದಾರೆ.

  ಪತ್ರಕರ್ತರನ್ನು ನಾಯಿಗೆ ಹೋಲಿಸಿರುವ ನಿರ್ದೇಶಕ ಬೇರಾರು ಅಲ್ಲ ತಮಿಳು ಜನಪ್ರಿಯ ಡೈರೆಕ್ಟರ್ ಆರ್ ಕೆ ಸೆಲ್ವಮಣಿ. ಇವರು ದಕ್ಷಿಣದ ಖ್ಯಾತ ತಾರೆ ರೋಜಾ ಅವರ 'ಗಡಿಬಿಡಿ ಗಂಡ' ಕೂಡ. ಸೆಲ್ವಮಣಿ ಅವರ ಈ ಮಾತುಗಳು ಈಗ ಚರ್ಚೆಗೆ ಗ್ರಾಸವಾಗಿದೆ.

  ತಮಿಳು ಮಾಧ್ಯಮಗಳಲ್ಲಿ ಈ ಬಗ್ಗೆ ಈಗಾಗಲೆ ಚರ್ಚೆ ಶುರುವಾಗಿದೆ. ಇನ್ನು ಸೆಲ್ವಮಣಿ ಏನು ಹೇಳಿದರು ಎಂಬುದರ ಬಗ್ಗೆ ಒಂದು ನೋಟ ಬೀರೋಣ ಬನ್ನಿ. ಇತ್ತೀಚೆಗೆ ದಕ್ಷಿಣ ಭಾರತದ ನಿರ್ದೇಶಕರು, ನಿರ್ಮಾಪಕರು, ನಟನಟಿಯರು, ತಂತ್ರಜ್ಞರು ಹೀಗೆ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

  ಆದರೆ ಕಾರ್ಯಕ್ರಮಕ್ಕೆ ಪತ್ರಕರ್ತರು ನಿರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಹಾಜರಾಗಿರಲಿಲ್ಲ. ಇದರಿಂದ ಕುಪಿತರಾದ ಸೆಲ್ವಮಣಿ, ಸಿನಿಮಾ ಕಾರ್ಯಕ್ರಮಗಳಾದರೆ ನಾಯಿಗಳ ತರಹ ಬಾಲ ಅಲ್ಲಾಡಿಸಿಕೊಂಡು ಬರ್ತಾರೆ. ಫೋಟೋಗಳ ಸಮೇತ ಕವರೇಜ್ ಕೊಡ್ತಾರೆ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.

  ಸೆಲ್ವಮಣಿ ಹೀಗೆ ಬಾಯಿತಪ್ಪಿ ಹೇಳಿರುವುದು ಈಗ ತಮಿಳುನಾಡಿನಲ್ಲಿ ಭಾರಿ ಚರ್ಚೆಗೆ ಆಸ್ಪದವಾಗಿದೆ. ಸೆಲ್ವಮಣಿ ಅವರು ಭೇಷರತ್ ಆಗಿ ಕ್ಷಮೆಯಾಚಿಸಬೇಕು ಎಂದು ಪತ್ರಕರ್ತರು ನೋಟೀಸ್ ಗಳನ್ನು ಕಳುಹಿಸಿ ಡಿಮ್ಯಾಂಡ್ ಮಾಡಿದ್ದಾರೆ. ವಿಧಿ ಇಲ್ಲದೆ ಕ್ಷಮೆ ಕೋರಲು ಸೆಲ್ವಮಣಿ ಮುಂದಾಗಿದ್ದಾರೆ ಎಂಬ ಸುದ್ದಿ ಇದೆ.

  English summary
  Actress Roja's husband and Tamil director RK Selvamani is in news for all the wrong reasons. In a recent Short Film Function, he abused the journalists by addressing them as dogs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X