For Quick Alerts
  ALLOW NOTIFICATIONS  
  For Daily Alerts

  'ಪುಷ್ಪ'- 2 ಚಿತ್ರದಲ್ಲಿ ಸಾಯಿ ಪಲ್ಲವಿ? ಯಾವ ಪಾತ್ರ ಅಂದ್ರೆ?

  |

  ಸುಕುಮಾರ್ ನಿರ್ದೇಶನದ 'ಪುಷ್ಪ'- 2 ಚಿತ್ರಕ್ಕಾಗಿ ಬಾಲಿವುಡ್ ಪ್ರೇಕ್ಷಕರು ಕಾಯ್ತಿದ್ದಾರೆ. ಸ್ಟೈಲಿಶ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿದೆ. ಸೆಕೆಂಡ್ ಪಾರ್ಟ್‌ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರ್ತಿದೆ. ಹೊಸ ಸುದ್ದಿ ಏನಪ್ಪಾ ಅಂದರೆ ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಆಗಮನವಾಗ್ತಿದೆಯಂತೆ.

  ಬಾಕ್ಸಾಫೀಸ್‌ನಲ್ಲಿ 350 ಕೋಟಿ ರೂ. ಕಲೆಕ್ಷನ್ ಮಾಡಿ 'ಪುಷ್ಪ' ಸಿನಿಮಾ ದಾಖಲೆ ಬರೆದಿತ್ತು. ಅದಕ್ಕಿಂತ ದೊಡ್ಡಮಟ್ಟದಲ್ಲಿ ಮುಂದುವರೆದ ಭಾಗವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಸೀಕ್ವೆಲ್‌ನಲ್ಲಿ ಯಾರೆಲ್ಲಾ ಇರ್ತಾರೆ ಅನ್ನುವ ಬಗ್ಗೆಯೂ ಕುತೂಹಲ ಅಭಿಮಾನಿಗಳಲ್ಲಿದೆ. 'ಪುಷ್ಪ'- 2 ಚಿತ್ರದಲ್ಲೂ ಅಲ್ಲು ಅರ್ಜುನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮುಂದುವರೆಯಲಿದ್ದಾರೆ. ರಶ್ಮಿಕಾ ಜೊತೆಗೆ ಮತ್ತೊಬ್ಬ ನಾಯಕಿಯ ಆಗಮನವಾಗುತ್ತಿದೆ ಅನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗಿರಿಕಿ ಹೊಡೆಯುತ್ತಿದೆ.

  ಅಲ್ಲು ಅರ್ಜುನ್, ಸುಕುಮಾರ್‌ ಇಬ್ಬರಿಗೆ ₹200 ಕೋಟಿ ಸಂಭಾವನೆ? ನಿರ್ಮಾಪಕರಿಗೆ ಚಿಪ್ಪೇ ಗತಿ!ಅಲ್ಲು ಅರ್ಜುನ್, ಸುಕುಮಾರ್‌ ಇಬ್ಬರಿಗೆ ₹200 ಕೋಟಿ ಸಂಭಾವನೆ? ನಿರ್ಮಾಪಕರಿಗೆ ಚಿಪ್ಪೇ ಗತಿ!

  ಪ್ರೀಕ್ವೆಲ್ ಬ್ಲಾಕ್ ಬಸ್ಟರ್‌ ಹಿಟ್ ಆಗಿರುವ ಕಾರಣ ಸೀಕ್ವೆಲ್ ವಿಚಾರದಲ್ಲಿ ಚಿತ್ರತಂಡದ ಮೇಲೆ ಸಿಕ್ಕಾಪಟ್ಟೆ ಒತ್ತಡ ಇದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡೋಕೆ ನಿರ್ದೇಶಕ ಸುಕುಮಾರ್ ಪ್ರಯತ್ನಿಸುತ್ತಿದ್ದಾರೆ. ಅದೇ ಕಾರಣಕ್ಕೆ ಸಿನಿಮಾ ಸೆಟ್ಟೇರುವುದು ತಡವಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ಅಥವಾ ಮುಂದಿನ ತಿಂಗಳು ದೇವರಿಗೆ ಕೈಮುಗಿದು ಸಿನಿಮಾ ಚಿತ್ರೀಕರಣಕ್ಕೆ ಚಿತ್ರತಂಡ ಹೊರಡಲಿದೆ. ಈ ನಡುವೆ ಚಿತ್ರದ ಹೊಸ ನಾಯಕಿ ಬಗ್ಗೆ ಗುಸುಗುಸು ಶುರುವಾಗಿದೆ.

  ಸಿನಿಮಾ ಬಿಟ್ಟು ಕ್ಲಿನಿಕ್ ಶುರು ಮಾಡ್ತಾರಾ ನಟಿ ಸಾಯಿ ಪಲ್ಲವಿ?ಸಿನಿಮಾ ಬಿಟ್ಟು ಕ್ಲಿನಿಕ್ ಶುರು ಮಾಡ್ತಾರಾ ನಟಿ ಸಾಯಿ ಪಲ್ಲವಿ?

   'ಪುಷ್ಪ'- 2 ಚಿತ್ರದಲ್ಲಿ ಸಾಯಿ ಪಲ್ಲವಿ

  'ಪುಷ್ಪ'- 2 ಚಿತ್ರದಲ್ಲಿ ಸಾಯಿ ಪಲ್ಲವಿ

  ಹಿಂದಿ ಬೆಲ್ಟ್‌ನಲ್ಲೂ 'ಪುಷ್ಪ' ಸಖತ್ ಸೌಂಡ್ ಮಾಡಿತ್ತು. ಹಾಗಾಗಿ ಬಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸೀಕ್ವೆಲ್ ಕಟ್ಟಿಕೊಡಲಾಗ್ತಿದೆ. ಸುಕುಮಾರ್ ಹೊಸ ಹೊಸ ಪಾತ್ರಗಳನ್ನು ಸೃಷ್ಟಿ ಮಾಡುತ್ತಿದ್ದಾರಂತೆ. ನಟಿ ಸಾಯಿ ಪಲ್ಲವಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸ್ತಾರೆ ಅನ್ನಲಾಗುತ್ತಿದೆ. ಲೇಡಿ ಪವರ್ ಸ್ಟಾರ್ 'ಪುಷ್ಪ' ಸೀಕ್ವೆಲ್‌ನಲ್ಲಿ ನಟಿಸ್ತಾರೆ ಅನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

   ಗಿರಿಜನ ಹುಡುಗಿಯಾಗಿ ರೌಡಿ ಬೇಬಿ

  ಗಿರಿಜನ ಹುಡುಗಿಯಾಗಿ ರೌಡಿ ಬೇಬಿ

  'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತಚಂದನ ಸ್ಮಗ್ಲರ್ 'ಪುಷ್ಪ'ರಾಜ್ ಪಾತ್ರದಲ್ಲಿ ನಟಿಸಿದ್ದರು. ಸೀಕ್ವೆಲ್‌ನಲ್ಲೂ ಅದು ಮುಂದುವರೆಯಲಿದ್ದು, ಆತನಿಗೆ ಸಹಾಯ ಮಾಡುವ ಗಿರಿಜನ ಹುಡುಗಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸ್ತಾರೆ ಅನ್ನುವ ಮಾತುಗಳು ಕೇಳಿಬರ್ತಿದೆ. ನಿಜಕ್ಕೂ ಈ ಪಾತ್ರ ರೌಡಿ ಬೇಬಿಗೆ ಹೇಳಿ ಮಾಡಿಸಿದಂತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಡಿ ಗ್ಲಾಮರಸ್‌ ರೋಲ್ ಅದರಲ್ಲೂ ನಟನೆಯ ಅವಕಾಶ ಇರುವ ಪಾತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ಸದಾ ಮುಂದಿರುತ್ತಾರೆ. ಸುಕ್ಕು ಕೇಳಿದರೆ ನಟಿಸೋಕೆ ಒಪ್ಪುವುದು ಗ್ಯಾರೆಂಟಿ.

   2 ಸೋಲಿನಿಂದ ಕಂಗೆಟ್ಟ ಸಾಯಿ ಪಲ್ಲವಿ

  2 ಸೋಲಿನಿಂದ ಕಂಗೆಟ್ಟ ಸಾಯಿ ಪಲ್ಲವಿ

  ಸಾಯಿ ಪಲ್ಲವಿ ನಟನೆಯ 'ವಿರಾಟ ಪರ್ವಂ' ಹಾಗೂ 'ಗಾರ್ಗಿ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡಿವೆ. ರೌಡಿ ಬೇಡಿ ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ಪ್ರಯೋಗ ಮಾಡುತ್ತಿರುವುದೇ ಇದಕ್ಕೆಲ್ಲಾ ಕಾರಣ ಅನ್ನುವ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. 'ಪುಷ್ಪ'- 2 ಚಿತ್ರದಲ್ಲಿ ನಟಿಸಿದರೆ ಅದೃಷ್ಟ ಖುಲಾಯಿಸಲಿದೆ.

   'ಪುಷ್ಪ'- 2 ಬಜೆಟ್ ಎಷ್ಟು?

  'ಪುಷ್ಪ'- 2 ಬಜೆಟ್ ಎಷ್ಟು?

  'ಪುಷ್ಪ' ಸಿನಿಮಾ 350 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ, ಸೀಕ್ವೆಲ್ ಬಜೆಟ್ಟೇ 300 ಕೋಟಿ ರೂ. ಅನ್ನಲಾಗ್ತಿದೆ. ಬಜೆಟ್‌ಗೆ ತಕ್ಕಂತೆ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಸಂಭಾವನೆಗಾಗಿ ಬೇಡಿಕೆ ಇಟ್ಟಿದ್ದಾರಂತೆ. ಮೊದಲ ಭಾಗದಲ್ಲಿ ಸಮಂತಾ ಕುಣಿದಿದ್ದ 'ಹೂಂ ಅಂಟಾವಾ ಮಾವ' ಸಾಂಗ್ ಸೂಪರ್ ಹಿಟ್ ಆಗಿತ್ತು. ಇನ್ನು ಸೀಕ್ವೆಲ್‌ನಲ್ಲಿ ಐಟಂ ಸಾಂಗ್‌ಗಾಗಿ ಬಾಲಿವುಡ್‌ ಟಾಪ್ ಹೀರೊಯಿನ್‌ನ ಕರೆದುಕೊಂಡು ಬರುವ ಪ್ರಯತ್ನ ನಡೀತಿದೆಯಂತೆ.

  English summary
  Actress Sai Pallvi to Play Important Role in Allu Arjun's Pushpa Sequel. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X