ಮೊದಲ ಬಾಲಿವುಡ್ ಸಿನಿಮಾಕ್ಕೆ ಸಹಿ ಮಾಡಿದ ಸಮಂತಾ! ನಾಯಕ ಯಾರು?
ವಯಸ್ಸಾಗುತ್ತಾ ಸಾಗಿದಂತೆ ನಟಿಯರಿಗೆ ಅವಕಾಶ ಕಡಿಮೆಯಾಗುತ್ತದೆ, ತೆರೆ ಮರೆಗೆ ಸರಿಯುತ್ತಾರೆ ಎಂಬುದು ಚಿತ್ರರಂಗದಲ್ಲಿ ಬಹುಸಮಯದಿಂದ ಇರುವ ನಂಬಿಕೆ. ಆದರೆ ಎಲ್ಲ ನಟಿಯರಿಗೂ ಇದು ಅನ್ವಯವಾಗುವುದಿಲ್ಲ. ನಟಿ ಸಮಂತಾಗಂತೂ ಖಂಡಿತ ಅಲ್ಲ.
ನಟಿಯರು ಮದುವೆಯಾದರೆ ಅವಕಾಶ ಕಡಿಮೆಯಾಗುತ್ತದೆ, 30 ದಾಟಿದರೆ ಅವಕಾಶ ಕಡಿಮೆಯಾಗುತ್ತದೆ ಎಂಬ ಮಾತುಗಳನ್ನೆಲ್ಲ ಸುಳ್ಳು ಮಾಡುತ್ತಿದ್ದಾರೆ ನಟಿ ಸಮಂತಾ.
ವೃತ್ತಿ ಜೀವನದಲ್ಲಿ ಭಾರಿ ಸ್ಪೀಡ್‌ನಲ್ಲಿ ಓಡುತ್ತಿರುವ ಸಮಂತಾ ಹೊಸ-ಹೊಸ ಎತ್ತರಗಳನ್ನು ಮುಟ್ಟುತ್ತಿದ್ದಾರೆ. ಬಬ್ಲಿ ಪಾತ್ರಗಳ ಮೂಲಕ ವೃತ್ತಿ ಆರಂಭಿಸಿದ ನಟಿ ಸಮಂತಾ ಈಗ ಬಹು ಗಟ್ಟಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದಕ್ಕಿಂತಲೂ ಒಂದು ಒಳ್ಳೆಯ ಸಿನಿಮಾ ಅವಕಾಶಗಳನ್ನು, ಪಾತ್ರಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮೆರೆದ ಸಮಂತಾ ಇದೀಗ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ.

ಬಾಲಿವುಡ್‌ಗೆ ಕಾಲಿಡುತ್ತಿರುವ ಸಮಂತಾ
'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ವೆಬ್ ಸರಣಿ ಮೂಲಕ ಈಗಾಗಲೇ ಹಿಂದಿ ಭಾಷಿಕ ಸಿನಿಪ್ರಿಯರಿಗೆ ಪರಿಚಯವಾಗಿರುವ ನಟಿ ಸಮಂತಾ ಇದೀಗ ಮೊದಲ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಒಳ್ಳೆಯ ಗಟ್ಟಿ ಪಾತ್ರದ ಮೂಲಕವೇ ಸಮಂತಾ ಬಾಲಿವುಡ್‌ಗೆ ಎಂಟ್ರಿ ನೀಡುವುದು ಬಹುತೇಕ ಖಾತ್ರಿಯಾಗಿದೆ. ಸಮಂತಾ ಎದುರು ನಾಯಕ ನಟನಾಗಿ ನಟಿಸುತ್ತಿರುವವರು ಸಹ ತಮ್ಮ ಅದ್ಭುತ ನಟನೆ, ಉತ್ತಮ ಪಾತ್ರ ಆಯ್ಕೆಯಿಂದಲೇ ಜನಪ್ರಿಯರಾಗಿದ್ದಾರೆ.

ಖುರಾನಾ ಎದುರು ಸಮಂತಾ ನಾಯಕಿ
ಆಯುಷ್ಮಾನ್ ಖುರಾನಾ ಎದುರು ನಟಿ ಸಮಂತಾ ನಾಯಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ದೊಡ್ಡ ಬಜೆಟ್‌ನ ಸಿನಿಮಾ ಆಗಿರಲಿದ್ದು ಕಮರ್ಶಿಯನ್ ಎಂಟರ್ಟೈನರ್ ಆಗಿರಲಿದೆಯಂತೆ. ಈ ಸಿನಿಮಾವನ್ನು ಮಡ್ಡಾಕ್ ಫಿಲಮ್ಸ್‌ನ ದಿನೇಶ್ ವಿಜನ್ ನಿರ್ಮಾಣ ಮಾಡಲಿದ್ದಾರೆ. ಸಿನಿಮಾದ ನಿರ್ದೇಶಕ ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ಹಲವು ಸಿನಿಮಾಗಳ ಆಫರ್ ಬಂದಿತ್ತು
'ದಿ ಫ್ಯಾಮಿಲಿ ಮ್ಯಾನ್' ಸೀಸನ್ ಎರಡು ಬಿಡುಗಡೆ ಆದ ಬಳಿಕ ಸುಮಾರು 8-9 ಬಾಲಿವುಡ್ ಸಿನಿಮಾ ಆಫರ್‌ಗಳು ಸಮಂತಾ ಅನ್ನು ಅರಸಿ ಹೋಗಿದ್ದವಂತೆ. ಆದರೆ ಇತ್ತೀಚೆಗೆ ಪಾತ್ರಗಳ ಆಯ್ಕೆಯ ವಿಚಾರದಲ್ಲಿ ಬಹಳ ಚೂಸಿ ಆಗಿರುವ ಸಮಂತಾ ಬಹಳ ಸಮಯ ತೆಗೆದುಕೊಂಡು ದಿನೇಶ್ ವಿಜನ್ ಅವರ ಕತೆಯನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್ ನಟಿ ತಾಪ್ಸಿ ಪನ್ನು ಸಹ ಸಮಂತಾಗೆ ಸಿನಿಮಾ ಒಂದರ ಆಫರ್ ಮಾಡಿದದ್ದರು. ಆದರೆ ಆ ಸಿನಿಮಾದಲ್ಲಿಯೂ ಸಮಂತಾ ನಟಿಸಿಲ್ಲ!

ಶಾರುಖ್ ಸಿನಿಮಾದ ಅವಕಾಶ ಕಳೆದುಕೊಂಡ ಸಮಂತಾ
ಸಮಂತಾ, ಶಾರುಖ್ ಖಾನ್ ಎದುರು ನಾಯಕಿಯಾಗಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಹಾಗೂ ಇತರ ಕಾರಣದಿಂದ ಆ ಅವಕಾಶವನ್ನು ಸಮಂತಾ ಕಳೆದುಕೊಂಡರು. ಶಾರುಖ್ ಖಾನ್‌ರ ಮುಂದಿನ ಸಿನಿಮಾ 'ಜವಾನ್' ಸಿನಿಮಾಕ್ಕೆ ಸಮಂತಾರನ್ನೇ ಆಯ್ಕೆ ಮಾಡಲಾಗಿತ್ತು. ಆದರೆ ಆ ಅವಕಾಶ ತಪ್ಪಿ ಈಗ ಆ ಸ್ಥಾನಕ್ಕೆ ನಯನತಾರಾ ಬಂದಿದ್ದಾರೆ. ತಮಿಳಿನ ಅಟ್ಟಿಲಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ತಮಿಳು ನಟ-ನಟಿಯರು ನಟಿಸುತ್ತಿದ್ದಾರೆ. ಕನ್ನಡತಿ ಪ್ರಿಯಾಮಣಿ ಸಹ ಇದ್ದಾರೆ.


Click it and Unblock the Notifications











