'ಬಿಗ್ ಬಾಸ್' ಮೂಲಕ ಕಿರುತೆರೆಗೆ ಎಂಟ್ರಿ ಕೊಡ್ತಾರಾ ನಟಿ ಸಮಂತಾ?

ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಹಿಂದಿ ವಾಹಿನಿ ಮೂಲಕ ಭಾರತಕ್ಕೆ ಪರಿಚಯವಾದ ಬಿಗ್ ಬಾಸ್ ನಂತರ ಭಾರತದ ಬಹುತೇಕ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಹಿಂದಿ ಬಿಗ್ ಬಾಸ್ ಹಾಗೆಯೇ ಬೇರೆ ಬೇರೆ ಭಾಷೆಯಲ್ಲಿಯೂ ಬಿಗ್ ಬಾಸ್ ಭಾರಿ ಖ್ಯಾತಿ ಗಳಿಸಿದೆ.

Recommended Video

ಬುಲೆಟ್ ಓಡಿಸಲು ಹೋಗಿ ಬಿದ್ದ ಶ್ರದ್ಧಾ ಶ್ರೀನಾಥ್ | Shraddha Srinath on Royal Enfield | Filmibeat Kannada

ಕನ್ನಡದಲ್ಲಿ ಬಿಗ್ ಬಾಸ್ ಈಗಾಗಲೆ 7 ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದರು. ತಮಿಳಿನಲ್ಲಿ ಕಮಲ್ ಹಾಸನ್ ನಡೆಸಿಕೊಡುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ಈಗಾಗಲೆ ಮೂರು ಆವೃತ್ತಿ ಪೂರ್ಣಗೊಂಡಿದೆ. ಈ ಮೂರು ಆವೃತ್ತಿಗೂ ಮೂವರು ಸ್ಟಾರ್ ನಟರು ನಡೆಸಿಕೊಟ್ಟಿದ್ದಾರೆ. ಬಿಗ್ ಬಾಸ್-4 ಯಾರು ನಡೆಸಿಕೊಡಲಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ನಟಿ ಸಮಂತಾ ಅಕ್ಕಿನೇನಿ ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

3 ಆವೃತ್ತಿಗೆ ಮೂವರು ಸ್ಟಾರ್

3 ಆವೃತ್ತಿಗೆ ಮೂವರು ಸ್ಟಾರ್

ತೆಲುಗಿನಲ್ಲಿ ಈಗಾಗಲೆ ಮೂರು ಆವೃತ್ತಿ ಮುಗಿದಿದೆ. ಈ ಮೂರು ಆವೃತ್ತಿಯಲ್ಲಿಯೂ ಬೇರೆ ಬೇರೆ ಸ್ಟಾರ್ಸ್ ನಡೆಸಿಕೊಟ್ಟಿದ್ದಾರೆ. ಮೊದಲ ಆವೃತ್ತಿಯನ್ನು ನಟ ಜೂ.ಎನ್ ಟಿ ಆರ್ ನಡೆಸಿಕೊಟ್ಟರೆ, ಎರಡನೇ ಆವೃತ್ತಿ ನಡೆಸಿಕೊಡುವ ಜವಾಬ್ದಾರಿ ನಾನಿ ಹೆಗಲಿಗೆ ಬಿದ್ದಿತ್ತು. ಮೂರನೆ ಆವೃತ್ತಿಯನ್ನು ಅಕ್ಕಿನೇನಿ ನಾಗಾರ್ಜುನ್ ನಡೆಸಿಕೊಟ್ಟಿದ್ದರು.

ಯಾರು ನಡೆಸಿಕೊಡಲಿದ್ದಾರೆ ಬಿಗ್ ಬಾಸ್

ಯಾರು ನಡೆಸಿಕೊಡಲಿದ್ದಾರೆ ಬಿಗ್ ಬಾಸ್

ತೆಲುಗು ಬಿಗ್ ಬಾಸ್ ನಾಲ್ಕನೆ ಆವೃತ್ತಿ ಯಾರು ನಡೆಸಿಕೊಡಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದ್ದಾರೆ. 4ನೇ ಆವೃತ್ತಿಯ ಜವಾಬ್ದಾರಿ ಯಾರ ವಹಿಸಿಕೊಳ್ಳಲಿದ್ದಾರೆ ಎಂದು ಸಾಕಷ್ಟು ಸ್ಟಾರ್ ನಟ ಹೆಸರು ಕೇಳಿ ಬರುತ್ತಿದೆ. ಪ್ರತೀ ಬಾರಿ ತೆಲುಗು ಬಿಗ್ ಬಾಸ್ ಹೋಸ್ಟ್ ಬಗ್ಗೆ ಒಂದಿಷ್ಟು ಗೊಂದಲ ಸೃಷ್ಟಿಯಾಗಿರುತ್ತೆ. ಈ ಬಾರಿ ಕೂಡ ಯಾರು ನಡೆಸಿಕೊಡಲಾದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸದ್ಯ ಕೊರೊನಾ ಆತಂಕದ ವಾತಾವರಣ ಇರುವುದರಿಂದ ಬಿಗ್ ಬಾಸ್ ನಡೆಯುತ್ತಾ ಎನ್ನುವ ಅನುಮಾನದ ಜೊತೆಗೆಯೇ, ಒಂದುವೇಳೆ ನಡೆದರೆ ಯಾರು ನಡೆಸಿಕೊಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಿದೆ.

ಸಮಂತಾ ನಡೆಸಿಕೊಡ್ತಾರಾ ಬಿಗ್ ಬಾಸ್

ಸಮಂತಾ ನಡೆಸಿಕೊಡ್ತಾರಾ ಬಿಗ್ ಬಾಸ್

ತೆಲುಗು ಬಿಗ್ ಬಾಸ್-4 ನಿರೂಪಣೆ ಮಾಡುವ ಜವಾಬ್ದಾರಿಯನ್ನು ನಟಿ ಸಮಂತಾ ವಹಿಸಿಕೊಳ್ತಾರಾ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಕಳೆದ ಸೀಸನ್ ಸಮಂತಾ ಮಾವ ನಾಗಾರ್ಜುನ್ ನಡೆಸಿಕೊಟ್ಟಿದ್ದರು. ಈ ಬಾರಿ ಸೊಸೆ ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಸಮಂತಾ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಸಮಂತಾ ಎಲ್ಲಿಯೂ ಮಾತನಾಡಿಲ್ಲ.

ಮಹೇಶ್ ಬಾಬು ಹೆಸರು ಕೇಳಿಬರುತ್ತಿದೆ

ಮಹೇಶ್ ಬಾಬು ಹೆಸರು ಕೇಳಿಬರುತ್ತಿದೆ

ಬಿಗ್ ಬಾಸ್-4 ಹೋಸ್ಟ್ ಮಾಡುವ ಸ್ಟಾರ್ ನಟ ಲಿಸ್ಟ್ ನಲ್ಲಿ ನಟ ಮಹೇಶ್ ಬಾಬು ಹೆಸರು ಕೂಡ ಇದೆ. ಕಳೆದ ಕೆಲವು ದಿನಗಳ ಹಿಂದೆ ಮಹೇಶ್ ಬಾಬು ಹೆಸರು ಜೋರಾಗಿ ಕೇಳಿಬರುತ್ತಿತ್ತು. ಬಿಗ್ ಬಾಸ್ ಮೂಲಕ ಮಹೇಶ್ ಬಾಬು ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಸಮಂತಾ ಹೆಸರು ಕೇಳಿಬರುತ್ತಿದೆ. ಆದರೆ ಯಾರು ಎನ್ನುವುದು ಇನ್ನೂ ಅಧೃತವಾಗಿಲ್ಲ.

More from Filmibeat

English summary
Telugu actress Samantha may host Telugu Bigg Boss season 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X