ಮುಂಬೈನಲ್ಲಿ ಐಶಾರಾಮಿ ಮನೆ ಖರೀದಿಸಿದ ಸಮಂತಾ, ಬೆಲೆ ಎಷ್ಟು ಗೊತ್ತೆ?

By ಫಿಲ್ಮಿಬೀಟ್ ಡೆಸ್ಕ್

ವಿಚ್ಛೇದನದ ಬಳಿಕ ನಟಿ ಸಮಂತಾರ ಬೇಡಿಕೆ ಹೆಚ್ಚುತ್ತಲೇ ಸಾಗುತ್ತಿದೆ. ಸಮಂತಾ ಸಹ, ಅನಾರೋಗ್ಯದ ಜೊತೆಗೆ ಹೋರಾಡುತ್ತಲೇ ಒಂದರ ಹಿಂದೊಂದು ಪ್ರಾಜೆಕ್ಟ್‌ಗಳನ್ನು ಬಾಚಿಕೊಂಡು ನಟಿಸುತ್ತಲೇ ಇದ್ದಾರೆ.

ತೆಲುಗು, ತಮಿಳಿಗೆ ಸೀಮಿತವಾಗಿದ್ದ ನಟಿ ಸಮಂತಾ, 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ಮೂಲಕ ಹಿಂದಿ ಪ್ರೇಕ್ಷಕರಿಗೂ ಹತ್ತಿರವಾಗಿದ್ದು, ಇದೀಗ ಬಾಲಿವುಡ್‌ನಿಂದ ಹಲವು ಆಫರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಭವಿಷ್ಯದಲ್ಲಿ ಬಾಲಿವುಡ್‌ನಲ್ಲೇ ನೆಲೆಯೂರಲು ನಿರ್ಧರಿಸಿದಂತಿರುವ ನಟಿ ಸಮಂತಾ, ಇದಕ್ಕಾಗಿಯೋ ಏನೋ ಮುಂಬೈನಲ್ಲಿ ಐಶಾರಾಮಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದಾರೆ.

Actress Samantha Purchased A Flat In Mumbai Spent 15 Crore

ಮುಂಬೈನ ಐಶಾರಾಮಿ ಪ್ರದೇಶದಲ್ಲಿ ಮೂರು ಬೆಡ್‌ರೂಮ್‌ನ ಅಪರಾರ್ಟ್‌ಮೆಂಟ್ ಫ್ಲ್ಯಾಟ್‌ ಒಂದನ್ನು ಸಮಂತಾ ಖರೀದಿಸಿದ್ದು, ಇದಕ್ಕಾಗಿ ಅವರು 15 ಕೋಟಿ ವೆಚ್ಚ ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಸಮಂತಾ ಸೂರ್ಯ ಮುಳುಗುತ್ತಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಆ ಚಿತ್ರ ತಮ್ಮದೇ ಮುಂಬೈನ ಹೊಸ ಫ್ಲ್ಯಾಟ್‌ನ ತಾರಸಿಯ ಮೇಲೆ ತೆಗೆದಿದ್ದು ಎನ್ನಲಾಗುತ್ತಿದೆ.

ಸಮಂತಾ ರಿಯಲ್‌ ಎಸ್ಟೇಟ್‌ನಲ್ಲಿ ಸಾಕಷ್ಟು ಇನ್‌ವೆಸ್ಟ್‌ ಮಾಡಿದ್ದಾರೆ. ಹೈದರಾಬಾದ್‌ನಲ್ಲಿಯೂ ಸಹ ಸಮಂತಾರಿಗೆ ಐಶಾರಾಮಿ ಮನೆಯೊಂದಿದೆ. ಮಾಜಿ ಪತಿ ನಾಗ್ ಅಶ್ವಿನ್ ಜೊತೆ ಸಮಂತಾ ವಾಸವಿದ್ದ ಮನೆಯನ್ನು ವಿಚ್ಛೇದನದ ಬಳಿಕ ಮಾರಲಾಗಿತ್ತು, ಆ ಬಳಿಕ ಮತ್ತೆ ಅದೇ ಮನೆಯನ್ನು ಹೆಚ್ಚು ಹಣ ಕೊಟ್ಟು ಸಮಂತಾ ಖರೀದಿಸಿ ಅದರಲ್ಲಿಯೇ ವಾಸವಿದ್ದಾರೆ.

ಸಮಂತಾ ಇದೀಗ 'ಸಿಟಾಡೆಲ್' ಹೆಸರಿನ ಹಿಂದಿ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ. ಇದರಲ್ಲಿ ವರುಣ್ ಧವನ್, ಸಮಂತಾಗೆ ಜೊತೆಯಾಗಿದ್ದಾರೆ. ಇದರ ಜೊತೆಗೆ ತಾಪ್ಸಿ ಪನ್ನು ನಿರ್ಮಿಸುತ್ತಿರುವ ಹಿಂದಿ ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಹಿಂದಿ ಪ್ರಾಜೆಕ್ಟ್‌ಗಳಿಗಾಗಿ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ 'ಖುಷಿ' ಸಿನಿಮಾವನ್ನು ಹೋಲ್ಡ್‌ನಲ್ಲಿಟ್ಟಿದ್ದಾರೆ. ಈ ಕಾರಣಕ್ಕೆ ಸಮಂತಾ, ವಿಜಯ್‌ ದೇವರಕೊಂಡ ಅಭಿಮಾನಿಗಳಲ್ಲಿ ಕ್ಷಮೆ ಸಹ ಕೇಳಿದ್ದಾರೆ. ಮತ್ತೊಂದೆಡೆ ಸಮಂತಾ ನಟಿಸಿರುವ 'ಶಾಕುಂತಲಂ' ಸಿನಿಮಾ ಈ ವೇಳೆಗಾಗಲೆ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದೂ ಸಹ ಮುಂದಕ್ಕೆ ಹೋಗಿದೆ. ಪ್ರಚಾರಕ್ಕೆ ಸಮಂತಾ ಬಳಿ ಸಮಯವಿಲ್ಲದ್ದರಿಂದಲೇ ಈ ಸಿನಿಮಾದ ಬಿಡುಗಡೆ ಮುಂದೂಡಲಾಗುತ್ತಿದೆ ಎನ್ನಲಾಗುತ್ತಿದೆ.

ಇನ್ನು ಇವುಗಳು ಮಾತ್ರವೇ ಅಲ್ಲದೆ ಇಂಗ್ಲೀಷ್ ಸಿನಿಮಾ ಒಂದರಲ್ಲಿ ಸಹ ಸಮಂತಾ ನಟಿಸಲಿದ್ದು, 'ಅರೇಂಜ್‌ಮೆಂಟ್ಸ್ ಆಫ್ ಲವ್' ಸಿನಿಮಾದಲ್ಲಿ ದ್ವಿಲಿಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Actress Samantha purchased a flat in Mumbai spent 15 crore rs for the flat. She already have a big house in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X