»   » ಸಂಜನಾ, ಭರತ್ ಮೇಲೆ ಮತ್ತೆ ಗಾಸಿಪ್ ಗೂಬೆ!

ಸಂಜನಾ, ಭರತ್ ಮೇಲೆ ಮತ್ತೆ ಗಾಸಿಪ್ ಗೂಬೆ!

Posted By:
Subscribe to Filmibeat Kannada
ಗಂಡ ಹೆಂಡತಿ ಚಿತ್ರದ ಖ್ಯಾತಿಯ ನಟಿ ಸಂಜನಾ ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಬೇರೆ ಬೇರೆ ವಿಷಯಕ್ಕೆ ಸುದ್ದಿಯಾಗಿದ್ದ ಸಂಜನಾ, ಈಗ ಮತ್ತೆ ಸುದ್ದಿಯಾಗಿರುವುದು ಈ ಮೊದಲೊಮ್ಮೆ ಸುದ್ದಿಯಾಗಿದ್ದ ತಮಿಳು ನಟ ಭರತ್ ಅವರೊಂದಿಗೆ ಇರುವ ತಮ್ಮ ಸಂಬಂಧಕ್ಕೆ. ಸಿಕ್ಕ ಸುದ್ದಿ ಪ್ರಕಾರ, ಸಂಜನಾ ಮತ್ತು ಭರತ್ ಈಗ 'ಲಿವ್ ಇನ್ ರಿಲೇಶನ್ ಶಿಪ್' ಸಂಬಂಧದಲ್ಲಿದ್ದಾರೆ. ಇಬ್ಬರೂ 'ಲಿವಿಂಗ್ ಟುಗೆದರ್' ಎನ್ನಲಾಗುತ್ತಿದೆ.

ತಮಿಳು ನಟ ಭರತ್ ಹಾಗೂ ನಟಿ ಸಂಜನಾ ಮಧ್ಯೆ ಇರುವ ಅತೀ ಆತ್ಮೀಯತೆ 'ಸೆಲೆಬ್ರಿಟಿ ಕ್ರಿಕೆಟ್ ಲೀಗ್' ನಡೆಯುತ್ತಿದ್ದ ವೇಳೆ ಈ ಮೊದಲು ಸುದ್ದಿಯಾಗಿತ್ತು. ಸಿಸಿಎಲ್‌ ರಾಯಭಾರಿಯಂತೆ ಪ್ರತಿ ಪಂದ್ಯಗಳಿಗೂ ತಪ್ಪದೇ ಹಾಜರಾಗುತ್ತಿದ್ದ ಸಂಜನಾ, ಭರ್ತ ಜೊತೆಯಲ್ಲಿ 'ನೈಟ್ ಪಾರ್ಟಿ'ಗಳಲ್ಲೂ ಸಾಕಷ್ಟು ಬಾರಿ ಕಾಣಿಸಿಕೊಂಡಿರುವ ಸುದ್ದಿಯಿದೆ. ಅಷ್ಟೇ ಅಲ್ಲ, 'ವ್ಯಾಲೆಂಟೇನ್ಸ್ ಡೇ' ದಿನ ಬೆಂಗಳೂರಿನ ರೋಡುಗಳಲ್ಲಿ ಈ ಜೋಡಿ ಕೈಕೈ ಹಿಡಿದು ಸುತ್ತಿದ್ದೂ ಸಾಕಷ್ಟು ಸುದ್ದಿಯಾಗಿತ್ತು.

ಆಗ ತಣ್ಣಗಾಗಿದ್ದ ಸುದ್ದಿಯೀಗ ಮತ್ತೆ ಎಲ್ಲಡೆ ಸರಿದಾಡುತ್ತಿದೆ. ತಮ್ಮಿಬ್ಬರ ಬಗ್ಗೆ ಇದೀಗ ಹಬ್ಬಿರುವ 'ಲಿವ್ ಇನ್' ಸಂಬಂಧವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ನಟ ಭರತ್, "ನಮ್ಮಿಬ್ಬರಲ್ಲಿ ಅಂತಹ ಯಾವ ಸಂಬಂಧವೂ ಇಲ್ಲ. ಅದ್ಯಾಕೆ ಹಾಗೆ ಸುದ್ದಿಯಾಗಿದೆಯೋ...! ಎಲ್ಲವೂ ಬರೀ ಸುಳ್ಳು ಸುದ್ದಿಗಳು" ಎಂದಿದ್ದಾರೆ. ಮಾತ್ರ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಅಂತಹ ಯಾವ ಸಂಬಂಧವೂ ನನಗಿಲ್ಲ, ಎಲ್ಲಾ ಸುಳ್ಳು ಎಂದು ಹೇಳಿದ್ದಾರೆ.

"ಹಲವು ಹುಡುಗಿಯರ ಜತೆ ಪರಿಚಯ ಹಾಗೂ ಗೆಳೆತನ ನನಗಿದೆ. ಹಾಗೆಂದು ಕೆಲವರ ಜೊತೆ ನನ್ನನ್ನು ಲಿಂಕ್ ಮಾಡುವುದು ಎಷ್ಟು ಸರಿ? ಸಂಜನಾ ಜೊತೆ ನಾನೇನೂ ಡೇಟಿಂಗ್ ಮಾಡುತ್ತಿಲ್ಲ. ಇನ್ನು ಲಿವಿಂಗ್ ಟುಗೆದರ್ ಅಮತೂ ದೂರದ ಮಾತು. ನನ್ನ ಪೋಷಕರು ನನಗೆ ಹುಡುಗಿ ನೋಡುತ್ತಿದ್ದಾರೆ, ಮುಂದಿನ ವರ್ಷ ಮದುವೆ ಆಗಲಿದ್ದೇನೆ" ಎಂದು ಭರತ್ ಹೇಳಿದ್ದಾರೆ.

ಇತ್ತ ಈ ಬಗ್ಗೆ ನಟಿ ಸಂಜನಾ ಕೇಳಿದರೆ "ನನ್ನ ಪರ್ಸನಲ್ ಜೀವನದ ಬಗ್ಗೆ ಯಾರೇ ಕೇಳಿದರೂ ನಾನೇನೂ ಹೇಳುವುದಿಲ್ಲ. ಅವಕ್ಕೆಲ್ಲಾ ನನ್ನಿಂದ 'ನೋ ಕಾಮೆಂಟ್ಸ್' ಎಂದಷ್ಟೇ ಉತ್ತರ ಬರುತ್ತದೆ. ಈ ಮೊದಲು ಭರತ್ ನನ್ನ ಬೆಸ್ಟ್ ಫ್ರೆಂಡ್ ಹೇಳಿದ್ದ ಸಂಜನಾ, ಈಗ ಅದನ್ನೂ ಕೂಡ ರಿಪೀಟ್ ಮಾಡುತ್ತಿಲ್ಲ. ಹೀಗಾಗಿ ಮತ್ತೆ ಸುದ್ದಿಯಾದರೂ ಅದು ಗಾಸಿಪ್ ಹಂತ ಮೀರಿ ಹೋಗಲಾರದು ಎನಿಸುತ್ತಿದೆ. ಮುಂದೇನೋ...! (ಏಜೆನ್ಸೀಸ್)

English summary
There is news buzz that there is 'Live in Relation' with Kannada Actress Sanjana and Telugu Actor Bharath. According to the rumor, they are living together with Live in Relationship. But, actor Bharath totally rejected the news and Sanjana kept quiet. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada