»   » ರಕ್ಷಿತ್ ಶೆಟ್ಟಿ ಜೊತೆ ನಟಿಸೋ ಲಕ್ಕಿ ಹೀರೋಯಿನ್ ಇವರೇನಾ.?

ರಕ್ಷಿತ್ ಶೆಟ್ಟಿ ಜೊತೆ ನಟಿಸೋ ಲಕ್ಕಿ ಹೀರೋಯಿನ್ ಇವರೇನಾ.?

By: ಸೋನು
Subscribe to Filmibeat Kannada

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಮೂಲಕ ಗಾಂಧಿನಗರದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿದ ನಟ ರಕ್ಷಿತ್ ಶೆಟ್ಟಿ ಅವರು ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಭಂಡಾರಿ ಸಹೋದರರ ಸೂಪರ್ ಹಿಟ್ 'ರಂಗಿತರಂಗ' ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಎಚ್.ಕೆ.ಪ್ರಕಾಶ್ ಅವರ ಜೊತೆ ರಕ್ಷಿತ್ ಶೆಟ್ಟಿ ಕೈ ಜೋಡಿಸಿರುವ ವಿಚಾರವನ್ನು ನಿಮಗೆ ಈ ಮೊದಲೇ ತಿಳಿಸಿದ್ವಿ.['ರಂಗಿತರಂಗ' ನಿರ್ಮಾಪಕರಿಗೆ ರಕ್ಷಿತ್ ಶೆಟ್ಟಿನೇ ಬೇಕಂತೆ.!]

'ಉಳಿದವರು ಕಂಡಂತೆ' ಚಿತ್ರದಲ್ಲಿ ಸಂಕಲನಕಾರರಾಗಿ ಕೆಲಸ ಮಾಡಿದ್ದ ಸಚಿನ್ ಅವರು ಇದೇ ಮೊದಲ ಬಾರಿಗೆ ಡೈರೆಕ್ಟರ್ ಪಟ್ಟ ಹೊತ್ತಿದ್ದು, ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.

ಇದೀಗ ರಕ್ಷಿತ್ ಶೆಟ್ಟಿ ಮತ್ತು ನಿರ್ಮಾಪಕ ಎಚ್.ಕೆ ಪ್ರಕಾಶ್ ಕಾಂಬಿನೇಷನ್ ನ ಚಿತ್ರಕ್ಕೆ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಲೀಡ್ ನಲ್ಲಿರುವ ನಟಿಮಣಿಯನ್ನೇ ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಮುಂದೆ ಓದಿ....

ನಟಿ ಶಾನ್ವಿ ಶ್ರೀವಾಸ್ತವ

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಬಿಜಿ ನಟಿಯಾಗಿರುವ ಶಾನ್ವಿ ಅವರು ಇದೀಗ ನಿರ್ಮಾಪಕ ಎಚ್.ಕೆ ಪ್ರಕಾಶ್ ಮತ್ತು ರಕ್ಷಿತ್ ಶೆಟ್ಟಿ ಜುಗಲ್ ಬಂದಿಯ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.[ಟ್ವಿಟ್ಟರ್ ಜಟಾಪಟಿ: ರಕ್ಷಿತ್ ಶೆಟ್ಟಿ ಬಗ್ಗೆ ಸುದೀಪ್ ಹೊಸ ಕಾಮೆಂಟ್.!]

ರಕ್ಷಿತ್ ಶೆಟ್ಟಿ ಜೊತೆ ಮೊದಲ ಬಾರಿ

ಯಶ್, ಚಿರಂಜೀವಿ ಸರ್ಜಾ ನಂತರ ಇದೀಗ ಇದೇ ಮೊದಲ ಬಾರಿಗೆ ಶಾನ್ವಿ ಅವರು ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಅವರ ಜೊತೆ ಡ್ಯುಯೆಟ್ ಹಾಡಲಿದ್ದಾರಂತೆ.

'ಲವ್ಲಿ' ಮೂಲಕ ಎಂಟ್ರಿ

ಸಾಯಿಕುಮಾರ್ ಅವರ ಮಗ ನಟ ಆದಿ ಅವರ ಜೊತೆ 2012ರಲ್ಲಿ ತೆಲುಗಿನ 'ಲವ್ಲಿ' ಚಿತ್ರದ ಮೂಲಕ ಶಾನ್ವಿ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ನಂತರ ಚಿರಂಜೀವಿ ಸರ್ಜಾ ಅವರ ಜೊತೆ 'ಚಂದ್ರಲೇಖ' ಎಂಬ ಹಾರರ್-ಕಾಮಿಡಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟರು. ತದನಂತರ ಯಶ್ ಅವರ ಜೊತೆ 'ಮಾಸ್ಟರ್ ಪೀಸ್' ಹಾಗೂ ಸುಮಂತ್ ಜೊತೆ 'ಭಲೇ ಜೋಡಿ' ಚಿತ್ರದಲ್ಲಿ ಮೋಡಿ ಮಾಡಿದರು.

ರಿಲೀಸ್ ಗೆ ರೆಡಿಯಾಗಿವೆ 2 ಚಿತ್ರಗಳು

ಈ ನಡುವೆ ರವಿಚಂದ್ರನ್ ಅವರ ಮಗ ಮನೋರಂಜನ್ ಅವರ ಜೊತೆ 'ಸಾಹೇಬ' ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ 'ಗಂಡು ಎಂದರೆ ಗಂಡು' ಎಂಬ ಚಿತ್ರದಲ್ಲೂ ಮಿಂಚಿದ್ದಾರೆ. ಈ ಚಿತ್ರದ ಶೂಟಿಂಗ್ ಸದ್ಯಕ್ಕೆ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ತಯಾರಾಗಿವೆ.

ಶ್ರೀಮುರಳಿ ಜೊತೆ ಡ್ಯುಯೆಟ್

ಮೂಲಗಳ ಪ್ರಕಾರ ಶ್ರೀಮುರಳಿ ಮತ್ತು ಶಿವಣ್ಣ ಕಾಂಬಿನೇಷನ್ ನ ಹೊಸ ಚಿತ್ರದಲ್ಲಿ ಕೂಡ ಶಾನ್ವಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಒಟ್ನಲ್ಲಿ ಕನ್ನಡ ಚಿತ್ರರಂಗ ಶಾನ್ವಿ ಅವರನ್ನು ಕೈ ಹಿಡಿದು ನಡೆಸುತ್ತಿದ್ದು, ಕೈ ತುಂಬಾ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿದ್ದಾರೆ.[ಶ್ರೀಮುರಳಿ ಜೊತೆ ಗ್ಲಾಮರ್ ಬೊಂಬೆ ಶಾನ್ವಿ ಶ್ರೀವಾಸ್ತವ ಡ್ಯುಯೆಟ್]

English summary
After 'Masterpiece', Actress Shanvi Srivastav has wrapped up the shoot for 'Saheba' with Actor Manoranjan. And 'Gandu Endare Gandu' with Ganesh. Now sources have revealed that she is signing on the new film in which she is paired with Actor Rakshit Shetty

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada