ಮಗಳು ಶ್ರಾವ್ಯಾಗೆ ಓಂ ಪ್ರಕಾಶ್ ಹಂಗ್ಯಾಕೆ ಮಾಡಿದ್ರೋ
ಅಪ್ಪ ಅಂದ್ರೆ ಹೆಣ್ಣುಮಕ್ಕಳಿಗೆ ತುಂಬಾನೇ ಪ್ರೀತಿ. ತಂದೆ ಕೂಡ ಮಗನಿಗಿಂತ ಮಗಳನ್ನೇ ಇಷ್ಟಪಡೋದು ಜಾಸ್ತಿ. ಇಷ್ಟಕ್ಕೂ ಅದು ಪ್ರಕೃತಿ ನಿಯಮ ಅಲ್ವಾ. ಸಜಾತಿಯ ಧ್ರುವಗಳು ವಿಕರ್ಷಿಸುತ್ತವೆ, ವಿಜಾತೀಯ ಧ್ರುವಗಳು ಆಕರ್ಷಿಸುತ್ತವೆ ಅನ್ನೋದು.
ಇದನ್ನ ನಮ್ಮ ಕನ್ನಡಿಗರಿಗೆ ಅರ್ಥವಾಗೋ ಇಂಗ್ಲೀಷಲ್ಲಿ ಹೇಳೋದಾದ್ರೇ ಅದೇ ಅನ್ ಲೈಕ್ ಪೋಲ್ಸ್ ಅಟ್ರ್ಯಾಕ್ಟ್ಸ್ ಈಚ್ ಅದರ್ ಅಂತ. ಆದರೆ ಇಷ್ಟೆಲ್ಲಾ ಹೇಳಿದ್ದು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಮಾಡಿದ ಎಡವಟ್ಟಿಗೆ. [ಬೆಳ್ಳಿಪರದೆಗೆ ಓಂ ಪ್ರಕಾಶ್ ರಾವ್, ರೇಖಾದಾಸ್ ಕುಡಿ]
ತಮ್ಮ ಮುದ್ದಿನ ಮಗಳಾದ ಶ್ರಾವ್ಯಾ ಅಂದರೆ ಓಂ ಪ್ರಕಾಶ್ ರಾವ್ ಗೆ ಪ್ರೀತೀನೇ. ಆದರೆ ಇತ್ತೀಚೆಗೆ 'ರೋಸ್' ಸಿನಿಮಾದ ಸಾಂಗ್ ಶೂಟಿಂಗ್ ಗೆ ಅಜಯ್ ರಾವ್, ಶ್ರಾವ್ಯಾ ಮತ್ತು ಚಿತ್ರತಂಡ ಬ್ಯಾಂಕಾಕ್ ಮತ್ತು ಕೆಲವು ಕಡೆ ಶೂಟಿಂಗ್ ಪ್ಲಾನ್ ಮಾಡಿತ್ತು. ಆದರೆ ಆಗಿದ್ದೇ ಬೇರೆ.ಶ್ರಾವ್ಯಾರಿಗೆ ಪಾಸ್ ಪೋರ್ಟ್ ಮಾಡಿಸೋಕೆ ಎಸ್ಎಸ್ಎಲ್ ಸಿ ಮಾರ್ಕ್ಸ್ ಕಾರ್ಡ್ ಬೇಕಾಗಿತ್ತು. ಮಾರ್ಕ್ಸ್ ಕಾರ್ಡ್ ಓಂ ಪ್ರಕಾಶ್ ರಾವ್ ಕೈಯ್ಯಲ್ಲಿತ್ತು. ಅದೆಷ್ಟು ಸಾರಿ ಕೇಳಿದ್ರೂ ಮಾರ್ಕ್ಸ್ ಕಾರ್ಡನ್ನು ಓಂಪ್ರಕಾಶ್ ರಾವ್ ಕೊಡ್ಲೇ ಇಲ್ಲ.
ಇನ್ನು ಯಾರಾದ್ರೂ ಏನಾದ್ರೂ ಕೇಳಿದ್ರೆ 'ಎಕೆ 47' ತರಹ ಫೈರಾಗೋ ಓಂ ಪ್ರಕಾಶ್ ಅವರ ಹತ್ತಿರ ಯಾಕಪ್ಪ ಕೇಳೋದು ಅಂತ ಬೇರೆಯವರೂ ಅದನ್ನ ಕೇಳೋಕೆ ಹೋಗಿಲ್ಲ. ಪಾಪ ಸಿನಿಮಾ ತಂಡದವರೇ ಕಾಂಪ್ರಮೈಸ್ ಮಾಡ್ಕೊಂಡು ಭಾರತದಲ್ಲೇ ಒಳ್ಳೇ ಲೊಕೇಷನ್ ಹುಡುಕಿ ಶೂಟ್ ಮಾಡಿದರಂತೆ.
ಪಾಪ ಸ್ವಂತ ಮಗಳು ಶ್ರಾವ್ಯಾ ಬಗ್ಗೆ ಹೀಗ್ಯಾಕೆ ಮಾಡಿದರೋ ಗೊತಿಲ್ಲ. ಆದರೆ ಶ್ರಾವ್ಯಾಗೆ ಅಪ್ಪನ ಬಗ್ಗೆ ಅದೇ ಪ್ರೀತಿ ಇದೆ. ಅಪ್ಪ ಯಾವತ್ತೂ ನಂಗೆ ಕೆಟ್ಟದ್ದನ್ನು ಬಯಸಲ್ಲ. ಆದರೆ ಯಾಕೆ ಹೀಗೆ ಮಾಡಿದ್ರೋ ಗೊತ್ತಿಲ್ಲ ಅಂತ ಕಣ್ಣಲ್ಲಿ ನೀರು ತುಂಬಿಕೊಳ್ತಾರೆ.


Click it and Unblock the Notifications












