For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್‌ ಸಿನಿಮಾದಿಂದ ಸ್ಟಾರ್ ನಟಿಯನ್ನು ಹೊರಗಿಟ್ಟ ರಾಜಮೌಳಿ

  |

  ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದಲ್ಲಿ ಹಲವಾರು ಸ್ಟಾರ್ ನಟ-ನಟಿಯರು ಬಣ್ಣ ಹಚ್ಚಿದ್ದಾರೆ.

  ಜೂ.ಎನ್‌ಟಿಆರ್, ರಾಮ್ ಚರಣ್ ತೇಜ, ಅಜಯ್ ದೇವಗನ್, ಶ್ರಿಯಾ ಶರಣ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ಸಮುದ್ರಕಿಣಿ, ರಾಹುಲ್ ರಾಮಕೃಷ್ಣ ಇನ್ನೂ ಹಲವಾರು ನಟರು ಸಿನಿಮಾದಲ್ಲಿದ್ದಾರೆ.

  ಸಿನಿಮಾದಲ್ಲಿ ನಟಿಸಬೇಕಿದ್ದ ಒಬ್ಬ ಸ್ಟಾರ್ ನಟಿಯ ಪಾತ್ರವನ್ನು ಕತ್ತರಿಸಿದ್ದಾರಂತೆ ರಾಜಮೌಳಿ. ಸಿನಿಮಾದ ಉದ್ದ ಹೆಚ್ಚಾಗುತ್ತಿರುವ ಕಾರಣದಿಂದ ಕೆಲವು ಪಾತ್ರಗಳನ್ನು ಕತ್ತರಿಸಲಾಗಿದ್ದು, ಅದರಲ್ಲಿ ಸ್ಟಾರ್ ನಟಿಯ ಪಾತ್ರವೂ ಸೇರಿದೆ. ಅವರೇ ಶ್ರಿಯಾ ಶರಣ್.

  ನಟಿ ಶ್ರಿಯಾ ಶರಣ್ ಆರ್‌ಆರ್‌ಆರ್‌ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಬೇಕಿತ್ತು. ಮುಂದಿನ ತಿಂಗಳಿನಿಂದ ಶ್ರಿಯಾ ಚಿತ್ರೀಕರಣದಲ್ಲಿ ಸಹ ಪಾಲ್ಗೊಳ್ಳಬೇಕಿತ್ತು. ಆದರೆ ಸಿನಿಮಾದ ಉದ್ದ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಶ್ರಿಯಾ ಪಾತ್ರವನ್ನು ಚಿತ್ರಕತೆಯಿಂದ ತೆಗೆದಿದ್ದಾರೆ ರಾಜಮೌಳಿ.

  ಮೊದಲು ಚಿತ್ರಕತೆ ಬರೆದಾಗ ಸೀತೆ ಪಾತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರಲಿಲ್ಲ. ಆದರೆ ಸೀತೆ ಪಾತ್ರವನ್ನು ಹೆಚ್ಚು ಬೆಳೆಸುವ ಉದ್ದೇಶದಿಂದ ಚಿತ್ರಕತೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದೇ ಕಾರಣಕ್ಕೆ ಸಿನಿಮಾ ಉದ್ದವಾಗುತ್ತಿದೆ. ಹಾಗಾಗಿ ಶ್ರಿಯಾ ಶರಣ್ ಪಾತ್ರವನ್ನು ತುಂಡರಿಸಿದ್ದಾರೆ ರಾಜಮೌಳಿ.

  ಶ್ರಿಯಾ ಶರಣ್ ನಿರ್ವಹಿಸಬೇಕಾಗಿದ್ದ ಪಾತ್ರಕ್ಕಿಂತಲೂ ಸೀತೆ ಪಾತ್ರವೇ ಹೆಚ್ಚು ಗಟ್ಟಿ ಹಾಗೂ ಆಕರ್ಷಕವಾಗಿದ್ದ ಕಾರಣ ಅದೇ ಪಾತ್ರವನ್ನು ಬೆಳಸಿ ಶ್ರಿಯಾ ಶರಣ್ ಪಾತ್ರವನ್ನು ಕೈಬಿಟ್ಟಿದ್ದಾರೆ ರಾಜಮೌಳಿ. ಶ್ರಿಯಾ ಶರಣ್ ಮುಂದಿನ ತಿಂಗಳಿನಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನಲಾಗಿತ್ತು ಆದರೆ ಈಗ ನಿರಾಸೆ ಅನುಭವಿಸಿರುತ್ತಾರೆ.

  English summary
  Rajamouli erased Shreya Saran's character from RRR movie script. Rajamouli decides to enlarge Sita character so Shreya's character is out of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X