ಬಾಯ್‌ಫ್ರೆಂಡ್ ಜತೆ ಬೆಡ್ ಮೇಲೆ ನಗ್ನವಾಗಿರುವ ಫೋಟೊ ಹಂಚಿಕೊಂಡ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್!
ನಟಿ ಶೃತಿ ಹಾಸನ್ ಸೌತ್ ಇಂಡಸ್ಟ್ರಿಯ ಸಕ್ಸಸ್‌ಫುಲ್ ಹಿರೋಯಿನ್ ಆಗಿದ್ದರೂ ಸಹ ಈಕೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಿನಿಮಾಗಳಿಗಿಂತ ವಿವಾದಗಳ ಮೂಲಕ ಸದ್ದು ಮಾಡಿದ್ದೇ ಹೆಚ್ಚು. ಹೌದು, ಬೋಲ್ಡ್ ಫೋಟೊಗಳು ಹಾಗೂ ಬೋಲ್ಡ್ ಹೇಳಿಕೆಗಳಿಗೆ ಹೆಚ್ಚು ಹೆಸರುವಾಗಿಯಾಗಿರುವ ನಟಿ ಶೃತಿ ಹಾಸನ್ ಹಲವಾರು ಬಾರಿ ಅತಿಯಾಯಿತು ಎನ್ನುವಂತಹ ಫೋಟೊಗಳನ್ನು ಹಂಚಿಕೊಂಡು ನೆಟ್ಟಿಗರು ಆಶ್ಚರ್ಯಕ್ಕೆ ಒಳಗಾಗುವಂತೆ ಮಾಡಿದ್ದಾರೆ.
ಇದೀಗ ಅದೇ ರೀತಿಯ ಫೋಟೊವನ್ನು ಮತ್ತೆ ಹಂಚಿಕೊಂಡಿದ್ದಾರೆ ನಟಿ ಶೃತಿ ಹಾಸನ್. ಹೌದು, ಶೃತಿ ಹಾಸನ್ ತನ್ನ ಬಾಯ್‌ಫ್ರೆಂಡ್ ಶಾಂತನು ಜತೆ ಬೆಡ್ ಮೇಲಿನ ಖಾಸಗಿ ಕ್ಷಣಗಳ ಸೆಲ್ಫಿ ಫೋಟೊವನ್ನು ಕ್ಲಿಕ್ಕಿಸಿಕೊಂಡು ಆ ಫೋಟೊವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊದಲ್ಲಿ ಶೃತಿ ಹಾಸನ್ ಹಾಗೂ ಶಾಂತನು ಅರೆನಗ್ನ ಸ್ಥಿತಿಯಲ್ಲಿ ಇರುವಂತೆ ಕಂಡುಬರುತ್ತಿದೆ.

ಈ ಫೋಟೊ ಹಂಚಿಕೊಂಡ ಕೂಡಲೇ ಅದನ್ನು ನೆಟ್ಟಿಗರು ವೈರಲ್ ಮಾಡಿದ್ದು, ಭಿನ್ನ ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಇನ್ನು ಶೃತಿ ಹಾಸನ್ ಈ ಫೋಟೊ ಮೇಲೆ ತನ್ನ ಪ್ರಿಯಕರ ಶಾಂತನು ಬಗ್ಗೆ "ಶಾಂತನು ನೀನು ನನ್ನ ಬೆಸ್ಟ್ ಫ್ರೆಂಡ್. ನನ್ನ ಬೆಸ್ಟ್ ಲವ್. ನೀನು ನನಗೆ ಸಿಕ್ಕಿರುವ ವಜ್ರ. ನೀನು ನನ್ನ ಸೂರ್ಯ. ನೀನು ನನ್ನ ನಕ್ಷತ್ರ. ನಿನ್ನ ಜತೆ ನಾನು ಎಷ್ಟು ದಿನ ಬೇಕಾದರೂ ಇರುತ್ತೇನೆ. ಅದು ಒಳ್ಳೆ ದಿನಗಳಾದರೂ ಅಷ್ಟೇ ಹಾಗೂ ಕೆಟ್ಟ ದಿನಗಳಾದರೂ ಅಷ್ಟೇ" ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ತನ್ನ ಪ್ರೀತಿಯನ್ನು ತನ್ನ ಪ್ರಿಯಕರ ಶಾಂತನುಗೆ ಭಾವನಾತ್ಮಕವಾಗಿ ನಟಿ ಶೃತಿ ಹಾಸನ್ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಶೃತಿ ಹಾಸನ್ ಹಾಗೂ ಶಾಂತನು ಕೇವಲ ಲವ್ ಬರ್ಡ್ಸ್ ಅಷ್ಟೇ. ಇಬ್ಬರೂ ಸಹ ಪರಸ್ಪರ ಹೊಂದಾಣಿಕೆಯಿಂದ ಜತೆಗಿದ್ದು, ಲಿವ್ ಇನ್ ರಿಲೇಷನ್‌ಷಿಪ್ ಜೀವನ ನಡೆಸುತ್ತಿದ್ದಾರೆ. ಇಬ್ಬರ ಲಿವ್ ಇನ್ ರಿಲೇಷನ್‌ಷಿಪ್ ಜೀವನಕ್ಕೆ ಇಬ್ಬರ ಮನೆ ಕಡೆಯಿಂದ ಒಪ್ಪಿಗೆಯೂ ಸಹ ಇದೆ. ಶಾಂತನು ಖ್ಯಾತ ಪಾಪ್ ಗಾಯಕನಾಗಿದ್ದು, ಇಬ್ಬರೂ ಸಹ ಮುಂಬೈನಲ್ಲಿ ವಾಸವಿದ್ದಾರೆ.
ಇನ್ನು ಕೆಲ ನೆಟ್ಟಿಗರು ಈ ಫೋಟೊ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂತಹ ಫೋಟೊ ಹಂಚಿಕೊಂಡು ನಿಮ್ಮನ್ನು ಫಾಲೋ ಮಾಡುವವರಿಗೆ ಏನು ಸಂದೇಶ ಕೊಡ್ತೀರ ಎಂದು ವಿರೋಧ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಇಬ್ಬರೂ ಪರಸ್ಪರ ಒಪ್ಪಿಗೆಯಿಂದ, ಮನೆಯವರ ಸಮ್ಮತಿ ಮೇರೆಗೆ ಲಿವ್ ಇನ್ ರಿಲೇಷನ್‌ಶಿಪ್ ಜೀವನ ನಡೆಸುತ್ತಿದ್ದಾರೆ. ಇದು ಅವರ ವೈಯಕ್ತಿಕ ವಿಚಾರವಾಗಿದ್ದು, ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಸಹ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೇವಲ ಈ ವಿಚಾರವಾಗಿ ಮಾತ್ರವಲ್ಲದೇ ಶೃತಿ ಹಾಸನ್ ತಮ್ಮ ನೇರ ಉತ್ತರಗಳಿಂದಲೂ ಸಹ ಸುದ್ದಿ ಮಾಡಿದ್ದರು. ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಶೃತಿ ಹಾಸನ್ ನೇರ ಉತ್ತರ ನೀಡಿದ್ದರು. ನಿಮ್ಮ ಜತೆ ಡೇಟ್ ಮಾಡಲು ಅವಕಾಶ ಸಿಗಬಹುದಾ ಎಂದು ಪ್ರಶ್ನೆಯನ್ನು ಕೇಳಿದ್ದ ನೆಟ್ಟಿಗನಿಗೆ ಉತ್ತರ ನೀಡಿದ್ದ ಶೃತಿ ಹಾಸನ್ 'ನೋ' ಎಂದು ನೇರವಾಗಿ ಉತ್ತರಿಸಿದ್ದರು. ಜತೆಗೆ ಮತ್ತೋರ್ವ ನೆಟ್ಟಿಗ ನೀವು 'ವರ್ಜಿನ್ನಾ' ಎಂದು ಪ್ರಶ್ನೆಯನ್ನು ಕೇಳಿದ್ದ. ಆದರೆ ಆತ ಈ ಪದಕ್ಕೆ ತಪ್ಪಾದ ಸ್ಪೆಲ್ಲಿಂಗ್ ಬರೆದಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಶೃತಿ ಹಾಸನ್ ನೀವು ಮೊದಲು ವರ್ಜಿನ್ ಪದಕ್ಕೆ ಸರಿಯಾದ ಸ್ಪೆಲ್ಲಿಂಗ್ ಕಲಿಯಿರಿ ಎಂದು ರಿಪ್ಲೈ ನೀಡಿದ್ದಾರೆ.


Click it and Unblock the Notifications











