For Quick Alerts
  ALLOW NOTIFICATIONS  
  For Daily Alerts

  ಜಯಮಾಲ ಪುತ್ರಿ ಸೌಂದರ್ಯ ಎಲ್ಲೂ ಕಾಣ್ತಿಲ್ಲ ಯಾಕೆ?

  By ಹರಾ
  |

  ನಟಿ ಸೌಂದರ್ಯ ಜಯಮಾಲ ಗೊತ್ತಲ್ವಾ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಗಾಡ್ ಫಾದರ್', ದುನಿಯಾ ವಿಜಯ್ ನಟಿಸಿದ 'ಸಿಂಹಾದ್ರಿ' ಮತ್ತು ಶ್ರೀನಗರ ಕಿಟ್ಟಿ ಜೊತೆ 'ಪಾರು ವೈಫ್ ಆಫ್ ದೇವದಾಸ್' ಚಿತ್ರಗಳಲ್ಲಿ ಮಿಂಚಿದ್ದ ಸೌಂದರ್ಯ ಜಯಮಾಲ ಇತ್ತೀಚೆಗೆ ಗಾಂಧಿನಗರದ ಕಡೆ ಮುಖ ಮಾಡಿಲ್ಲ.

  ಈ ಮೂರು ಚಿತ್ರಗಳನ್ನ ಬಿಟ್ಟರೆ, ಕನ್ನಡದಲ್ಲಿ ಸೌಂದರ್ಯ ಜಯಮಾಲ ಬೇರೆ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಅವಕಾಶ ಸಿಕ್ತೋ, ಇಲ್ವೋ ಅನ್ನೋದು ಬೇರೆ ಮಾತು.

  ಕನ್ನಡ ಬಿಟ್ಟು ಸೌಂದರ್ಯ ಜಯಮಾಲ ಬೇರೆ ಭಾಷೆಗೆ ಹಾರಿದ್ದಾರಾ ಅಂದ್ರೆ ಅದೂ ಇಲ್ಲ. ತೆಲುಗಿನಲ್ಲಿ 'ಮಿಸ್ಟರ್ ಪ್ರೇಮಿಕುಡು' ಚಿತ್ರದ ಬಳಿಕ ಸೌಂದರ್ಯ ಟಾಲಿವುಡ್ ನಲ್ಲೂ ಮಿಸ್ಸಿಂಗ್. [ಚಿತ್ರರಂಗಕ್ಕೆ ಸೌಂದರ್ಯಾ ಜಯಮಾಲಾ ಗುಡ್ ಬೈ!?]

  ಮೂಲಗಳ ಪ್ರಕಾರ, ಸೌಂದರ್ಯಗೆ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಇಲ್ಲವಂತೆ. ತಾಯಿ ಜಯಮಾಲ ಅವರಿಗೂ ಮಗಳು ಬಣ್ಣದ ಪ್ರಪಂಚದಲ್ಲಿದ್ದದ್ದು ಸಾಕಾಗಿದೆ. ಹೀಗಾಗಿ ಮಗಳಿಗೆ ಮದುವೆ ಮಾಡುವ ತಯಾರಿಯಲ್ಲಿದ್ದಾರಂತೆ. ಯಾವುದಕ್ಕೂ ಒಮ್ಮೆ ಕನ್ಫರ್ಮ್ ಮಾಡಿಕೊಳ್ಳೋಣ ಅಂದ್ರೆ ಸೌಂದರ್ಯ ನಂಬರ್ ಸ್ವಿಚ್ ಆಫ್.

  English summary
  Kannada Actress Soundarya Jayamala of 'God Father' fame is not seen in Sandalwood. Has the Actress planned to bid Good Bye to the Film Industry.? Read the article to know.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X