ಬಾಲಯ್ಯನ ಮಗಳಂತೆ ಶ್ರೀಲೀಲಾ: ಸುದ್ದಿ ಹಬ್ಬಲು ನಿರ್ದೇಶಕನೇ ಕಾರಣ!
ಕನ್ನಡದ ಬಹುತೇಕ ನಟಿಯರು ಈಗ ತೆಲುಗು, ತಮಿಳು ಸಿನಿಮಾರಂಗದಲ್ಲಿ ಸಿನೆಮಾಗಳನ್ನು ಮಾಡುತ್ತಾ ಇದ್ದಾರೆ. ಅದರಲ್ಲೆ ತೆಲುಗಿಗೆ ಹೆಚ್ಚಿನ ನಟಿಯರು ಎಂಟ್ರಿ ಕೊಡ್ತಿದ್ದಾರೆ.
ಈ ನಟಿಯರ ಪೈಕಿ ನಟಿ ಶ್ರೀ ಲೀಲಾ ಕೂಡ ಒಬ್ಬರು. ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿಸಿರುವ ಈ ನಟಿ ಶ್ರೀಲೀಲಾ ಸದ್ಯ ತೆಲುಗು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಈಗಾಗಲೇ ಹಲವು ಸಿನಿಮಾಗಳನ್ನು ಸಹಿ ಮಾಡಿದ್ದಾರೆ ಎನ್ನುವ ಸುದ್ದಿದೆ.
ಕನ್ನಡದಲ್ಲಿ ಬ್ಯೂಸಿ ಇರುವ ಶ್ರೀಲೀಲಾ ಅತ್ತ ತೆಲುಗು ಸಿನಿಮಾ ರಂಗದಲ್ಲೂ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶ್ರೀಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈಗ ಶ್ರೀಲೀಲಾ ಟಾಲಿವುಡ್ ಸ್ಟಾರ್ ಬಾಲಯ್ಯನ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ.

ಬಾಲಯ್ಯನ ಜೊತೆಗೆ ನಟಿ ಶ್ರೀಲೀಲಾ ಸಿನಿಮಾ!
ನಟಿ ಶ್ರೀಲೀಲಾ ಸಾಲು, ಸಾಲು ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಇದ್ದಾರೆ. ಮೊದಲ ಸಿನಿಮಾ ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರ ಮಗ ಗೆದ್ದ ಶ್ರೀಲೀಲಾಗೆ ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಈಗ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ಶ್ರೀಲೀಲಾ ಹೆಸರು ಕೇಳಿ ಬಂದಿದೆ. ಹೌದು ಶ್ರೀಲೀಲಾ ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.

ಬಾಲಕೃಷ್ಣನಿಗೆ ಮಗಳಾದ ಶ್ರೀಲೀಲಾ!
ನಟಿ ಶ್ರೀಲೀಲಾ ಬಾಲಕೃಷ್ಣ ಜೊತೆಗೆ ತೆರೆಹಂಚಿಕೊಳ್ಳುತ್ತಿದ್ದಾರೆ ಅಂದಾಕ್ಷಣ, ಇವರ ಜೋಡಿ ಹೇಗೆ ಇರಲಿದೆ ಎಂದು ಕಲ್ಪನೆ ಮಾಡಿಕೊಳ್ಳಬೇಕಾಗಿಲ್ಲ. ಯಾಕೆಂದರೆ ಶ್ರೀಲೀಲಾ ಬಾಲಕೃಷ್ಣಗೆ ನಾಯಕಿಯಾಗಿ ಅಭಿನಯಿಸುತ್ತಿಲ್ಲ. ಬದಲಿಗೆ ಬಾಲಯ್ಯನ ಮಗಳ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಈ ವಿಚಾರವನ್ನು ನಿರ್ದೇಶಕ ಅನಿಲ್ ರವಿಪುಡಿ ದೃಢ ಪಡಿಸಿದ್ದಾರೆ. ಸಿನಿಮಾದಲ್ಲಿ ಬಾಲಯ್ಯನಿಗೆ 20 ವರ್ಷದ ಮಗಳು ಇರುತ್ತಾಳೆ. ಆ ಮಗಳ ಪಾತ್ರದಲ್ಲಿ ಶ್ರೀಲೀಲಾ ಅಭಿನಯಿಸಲಿದ್ದಾರೆ.

ಮಹೇಶ್ ಬಾಬು, ಪ್ರಭಾಸ್ ಜೊತೆಗೆ ಶ್ರೀಲೀಲಾ ಹೆಸರು!
ಇನ್ನು ನಟಿ ಶ್ರೀಲೀಲಾ ಹೆಸರು ತೆಲುಗಿನ ಬಿಗ್ ಸ್ಟಾರ್‌ಗಳ ಜೊತೆಗೆ ಕೇಳಿ ಬರ್ತಿದೆ. ಮಹೇಶ್ ಬಾಬು, ಪ್ರಭಾಸ್ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಜೊತೆಗೆ ನವೀನ್ ಪೊಲಿಶೆಟ್ಟಿ ಮತ್ತು ನಟ ವೈಷ್ಣವ್ ತೇಜ್ ಜೊತೆಗೆ ನಟಿ ಶ್ರೀಲೀಲಾ ತೆರೆ ಹಂಚಿಕೊಳ್ಳಲಿದ್ದಾರಂತೆ. ಸದ್ಯ ಶ್ರೀಲೀಲಾಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ.

ಕನ್ನಡದಲ್ಲಿ ನಾಯಕಿಯಾಕಿ ಎಂಟ್ರಿ!
ಕನ್ನಡದ 'ಕಿಸ್' ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ಶ್ರೀಲೀಲಾ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. 'ಕಿಸ್' ಸಿನಿಮಾದ ಬಳಿಕ ಶ್ರೀಮುರಳಿ ಜೊತೆಗೆ ಭರಾಟೆ ಸಿನಿಮಾದಲ್ಲಿ ಶ್ರೀಲೀಲಾ ಅಭಿನಯಿಸಿದ್ದಾರೆ. ನಂತರ ಕೊನೆದಾಗಿ ಕಾಣಿಸಿಕೊಂಡ ಕನ್ನಡ ಸಿನಿಮಾ 'ಬೈ ಟು ಲವ್'. ಇನ್ನು ತೆಲುಗಿನಲ್ಲಿ 'ಧಮಾಕ', 'ಅನಗನಗ ಒಕ ರೋಜು' ಮತ್ತು ಕಿರೀಟಿ ರೆಡ್ಡಿ ಅಭಿನಯದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











