ತೆಲುಗಿನಲ್ಲಿ ಶ್ರೀಲೀಲಾಗೆ ಬೇಡಿಕೆ: ಇಲ್ಲಿದೆ ಹೊಸ ಅಪ್ಡೇಟ್ !

ಕನ್ನಡದ ನಟಿ ಶ್ರೀಲೀಲಾ ಸದ್ಯ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡದಲ್ಲಿ ಕಿಸ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಎಂಟ್ರಿ ಕೊಟ್ಟ ಶ್ರೀಲೀಲಾ ಅವರು ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಜೊತೆಗೆ ಈ ಮುದ್ದು ಮೊಗದ ಚೆಲುವೆಗೆ ಸಾಕಷ್ಟು ಅಭಿಮಾನಿಗಳು ಕೂಡ ಇದ್ದಾರೆ. ಈಗ ತೆಲುಗಿನಲ್ಲೂ ಶ್ರೀಲೀಲಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಶ್ರೀಲೀಲಾಗೆ ತೆಲುಗು ಸಿನಿಮಾ ರಂಗದಲ್ಲಿ ದಿನೇ, ದಿನೇ ಬೇಡಿಕೆ ಹೆಚ್ಚಾಗುತ್ತಿದೆ. ಈಕೆ ಅಭಿನಯದ ಮೊದಲ ತೆಲುಗು ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜೊತೆಗೆ ಅಲ್ಲೂ ಕೂಡ ಶ್ರೀಲೀಲಾ ಅವರಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಹಾಗಾಗಿ ರವಿತೇಜ, ಮಹೇಶ್ ಬಾಬು ಅಂತಹ ದೊಡ್ಡ ಸ್ಟಾರ್ ನಟರ ಜೊತೆಗೆ ಶ್ರೀಲೀಲಾ ಹೆಸರು ಕೇಳಿ ಬಂದಿದೆ.

ಆದರೆ ಈಗ ಶ್ರೀಲೀಲಾ ವಿಚಾರವಾಗಿ ಟಾಲಿವುಡ್‌ನಲ್ಲಿ ಹರಿದಾಡಿತ್ತು. ಶ್ರೀಲೀಲಾ ಮಹೇಶ್ ಬಾಬು ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಚಿತ್ರದಿಂದ ಕೈ ಬಿಡಲಾಗಿದೆ ಎನ್ನುವ ಸುದ್ದಿಯೂ ಹರಾಡಿದೆ ಅದರೆ ನಿಜ ಅದಲ್ಲಾ. ಅಷ್ಟಕ್ಕೂ ಈ ವಿಚಾರದಲ್ಲಿ ಆಗಿರುವುದು ಏನು ಎನ್ನುವುದನ್ನು ಮುಂದೆ ಓದಿ...

ಹೊಸ ಚಿತ್ರಕ್ಕೆ ಶೀಲೀಲಾ ಸಂಭಾವನೆ ಬಗ್ಗೆ ಚರ್ಚೆ ಆಗಿಲ್ಲ!

ಹೊಸ ಚಿತ್ರಕ್ಕೆ ಶೀಲೀಲಾ ಸಂಭಾವನೆ ಬಗ್ಗೆ ಚರ್ಚೆ ಆಗಿಲ್ಲ!

ನಟಿ ಶ್ರೀಲೀಲಾ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಮುಂದಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಟಾಲಿವುಡ್‌ನಲ್ಲಿ ಇದು ನಿಜ ಎನ್ನುವ ಸುದ್ದಿಗಳು ಕೂಡ ಹರಿದಾಡುತ್ತಿವೆ. ಆದರೆ ಈ ಚಿತ್ರದಲ್ಲಿ ಅಭಿನಯಿಸಲು ನಟಿ ಶ್ರೀಲೀಲಾ ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎನ್ನಲಾಗಿತ್ತು. ಆ ಗಾಳಿ ಸುದ್ದಿಗೆ ಈಗ ಬ್ರೇಕ್ ಬಿದ್ದಿದೆ. ಯಾಕೆಂದರೆ ನಟಿ ಶ್ರೀಲೀಲಾ ಚಿತ್ರತಂಡದ ಜೊತೆಗೆ ಸಂಭಾವನೆ ಬಗ್ಗೆ ಚರ್ಚೆ ಮಾಡೇ ಇಲ್ಲ ಎನ್ನುತ್ತಿದೆ ಶ್ರೀಲೀಲಾ ಬಳಗ.

ಪೂಜಾ ಹೆಗ್ಡೆ, ಶ್ರೀಲೀಲಾ ಇಬ್ಬರು ನಾಯಕಿಯರು?

ಪೂಜಾ ಹೆಗ್ಡೆ, ಶ್ರೀಲೀಲಾ ಇಬ್ಬರು ನಾಯಕಿಯರು?

ಈ ಚಿತ್ರದ ನಾಯಕಿ ಆಗಿ ಈಗಾಗಲೇ ಪೂಜಾ ಹೆಗ್ಡೆ ಆಯ್ಕೆ ಆಗಿದ್ದಾರೆ. ನಟಿ ಶ್ರೀಲೀಲಾ ಅವರನ್ನು ಎರಡನೇ ನಾಯಕಿ ಆಯ್ಕೆ ಮಾಡಲು ಚಿತ್ರ ತಂಡದಲ್ಲಿ ಮಾತು ಕಥೆ ನಡೆದಿದೆಯಂತೆ. ಆದರೆ ಈ ಬಗ್ಗೆ ಇನ್ನೂ ಕೂದ ನೇರವಾಗಿ ಶ್ರೀಲೀಲಾ ಜೊತೆ ಚಿತ್ರ ತಂಡ ಚರ್ಚೆ ಮಾಡಿಲ್ಲ ಎನ್ನಲಾಗುತ್ತಿದೆ. ಈ ಮೂಲಕ ಶ್ರೀಲೀಲಾ ತಮ್ಮ ವೃತ್ತಿ ಬದುಕಿನಲ್ಲಿ ಮತ್ತೊಂದು ಹೆಜ್ಜೆ ಮುಂದೇ ಹೋಗಲಿದ್ದಾರೆ.

ಮಹೇಶ್‌ ಬಾಬು 28ನೇ ಚಿತ್ರಕ್ಕೆ ಶ್ರೀಲೀಲಾ ಹೆಸರು!

ಮಹೇಶ್‌ ಬಾಬು 28ನೇ ಚಿತ್ರಕ್ಕೆ ಶ್ರೀಲೀಲಾ ಹೆಸರು!

ನಟ ಮಹೇಶ್‌ ಬಾಬು ಸದ್ಯ 'ಸರ್ಕಾರು ವಾರಿ ಪಾಠ' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಇತ್ತೀಚೆಗಷ್ಟೆ 28ನೇ ಸಿನಿಮಾದ ಮುಹೂರ್ಥ ನೆರವೇರಿದೆ. ಈ ಚಿತ್ರಕ್ಕೆ ನಿರ್ದೇಶಕ ತ್ರಿವಿಕ್ರಮ ಶ್ರೀನಿವಾಸ್ ನಿರ್ದೇಶನ ಇರಲಿದೆ. ಈ ಚಿತ್ರದಲ್ಲಿ ಮಹೇಶ್ ಬಾಬುಗೆ ಇಬ್ಬರು ನಾಯಕಿಯರು. ಈಗಾಗಲೇ ಪೂಜಾ ಹೆಗ್ಡೆ ಚಿತ್ರಕ್ಕೆ ಆಯ್ಕೆ ಆಗಿದ್ದು, ಎರಡನೇ ನಾಯಕಿ ಆಗಿ ಶ್ರೀಲೀಲಾ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿ ಕೂಡ ಜೋರಾಗಿದೆ

ಶ್ರೀಲೀಲಾ ಸಂಭಾವನೆ ಬಗ್ಗೆ ಹೆಚ್ಚು ಚರ್ಚೆ!

ಶ್ರೀಲೀಲಾ ಸಂಭಾವನೆ ಬಗ್ಗೆ ಹೆಚ್ಚು ಚರ್ಚೆ!

ನಟಿ ಶ್ರೀಲೀಲಾ ಕಡಿಮೆ ಸಮಯದಲ್ಲಿಯೇ ಹೆಚ್ಚಿನ ಖ್ಯಾತಿ ಗಳಿಸಿದ್ದಾರೆ. ಹಾಗಾಗಿ ಅವರ ಸಂಭಾವನೆಯ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿದೆ. ಈ ಬೆಡಗಿಯ ಏರಿಕೆ ಆಗಿದೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಕನ್ನಡದಲ್ಲಿ ಶ್ರೀಲೀಲಾ ಅವರು 'ಕಿಸ್', 'ಭರಾಟೆ' ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ' ಬೈ ಟು ಲವ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಇದೇ ಫೆಬ್ರವರಿ 18ಕ್ಕೆ ಚಿತ್ರ ರಿಲೀಸ್ ಆಗಲಿದೆ.

More from Filmibeat

English summary
Actress Sreeleela Out From Mahesh Babu Movie Becauce She Demand For More Remunaration,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X