ನಟಿ ಶ್ರೀಲೀಲಾಗೆ ಬೇಡಿಕೆಯ ಜೊತೆಗೆ ಹೆಚ್ಚಿತು ಸಂಭಾವನೆ!

ಕನ್ನಡದ ನಟಿ ಶ್ರೀಲೀಲಾ ಸದ್ಯ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗದ್ದಾರೆ. ಕನ್ನಡದಲ್ಲಿ ಕಿಸ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಎಂಟ್ರಿ ಕೊಟ್ಟ ಶ್ರೀಲೀಲಾ ಅವರು ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಜೊತೆಗೆ ಈ ಮುದ್ದು ಮೊಗದ ಚೆಲುವೆಗೆ ಸಾಕಷ್ಟು ಅಭಿಮಾನಿಗಳು ಕೂಡ ಇದ್ದಾರೆ.

ಕನ್ನಡದಲ್ಲಿ ಬ್ಯುಸಿ ಇರುವ ಶ್ರೀಲೀಲಾ ಅತ್ತ ತೆಲುಗು ಸಿನಿಮಾ ರಂಗದಲ್ಲೂ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶ್ರೀಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜೊತೆಗೆ ಅಲ್ಲೂ ಕೂಡ ಶ್ರೀಲೀಲಾ ಅವರಿಗೆ ಅಭಿಮಾನಿ ಬಳಗ ಹುಟ್ಟುಕೊಂಡಿದೆ.

ಸದ್ಯ ಶ್ರೀಲೀಲಾ ಅವರ ಬಗ್ಗೆ ಮಾತನಾಡಲು ಕಾರಣ ಅವರಿಗೆ ಹೆಚ್ಚಾಗಿರುವ ಬೇಡಿಕೆ. ಶ್ರೀಲೀಲಾ ಅವರಿಗೆ ಕನ್ನಡ ಮತ್ತು ತೆಲುಗು ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಸಾಲು ಸಾಲು ಸಿನಿಮಾಗಳು ಆಕೆಯನ್ನು ಅರಸಿ ಬರುತ್ತಿವೆ. ಅಷ್ಟೆ ಅಲ್ಲ ಬೇಡಿಕೆಯ ಜೊತೆಗೆ ಶ್ರೀಲೀಲಾ ಅವರ ಸಂಭಾವನೆ ಕೂಡ ಹೆಚ್ಚಾಗಿದೆ.

ತೆಲುಗಿನಲ್ಲಿ ಹೆಚ್ಚಾಯ್ತು ಶ್ರೀಲೀಲಾ ಬೇಡಿಕೆ!

ತೆಲುಗಿನಲ್ಲಿ ಹೆಚ್ಚಾಯ್ತು ಶ್ರೀಲೀಲಾ ಬೇಡಿಕೆ!

ನಟಿ ಶ್ರೀಲೀಲಾ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಒಂದು ರೇಂಜಿಗ್ ಹಿಟ್‌ ನಟಿ ಎನಿಸಿಕೊಂಡಿದ್ದಾರೆ. ಶ್ರೀಲೀಲಾ ಅಭಿನಯದ 'ಪೆಳ್ಳಿ ಸಂದಡಿ' ಸಿನಿಮಾ ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. ಜೊತೆಗೆ ಬಾಕ್ಸಾಫೀಸ್‌ನಲ್ಲೂ ಕೂಡ ಈ ಚಿತ್ರ ಉತ್ತಮ ಗಳಿಕೆ ಮಾಡಿತ್ತು. ಹಾಗಾಗಿ ಶ್ರೀಲೀಲಾ ಟಾಲಿವುಡ್ ಮಂದಿಯ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿದೆ. ಸದ್ಯ ಒಂದೇ ನಿರ್ಮಾಣ ಸಂಸ್ಥೆಯಿಂದ ಶ್ರೀಲೀಲಾಗೆ ಒಟ್ಟಿಗೆ ಎರಡು ಸಿನಿಮಾಗಳ ಅವಕಾಶ ಬಂದಿದೆ.

ನವೀನ್ ಪೊಲಿಶೆಟ್ಟಿ ಮತ್ತು ವೈಷ್ಣವ್ ತೇಜ್ ಜೊತೆಗೆ ಶ್ರೀಲೀಲಾ!

ನವೀನ್ ಪೊಲಿಶೆಟ್ಟಿ ಮತ್ತು ವೈಷ್ಣವ್ ತೇಜ್ ಜೊತೆಗೆ ಶ್ರೀಲೀಲಾ!

ನಟಿ ಶ್ರೀಲೀಲಾ ಅವರಿಗೆ ತೆಲುಗಿನ ನವೀನ್‌ ಪೊಲಿಶೆಟ್ಟಿ ಮತ್ತು ನಟ ವೈಷ್ಣವ್‌ ತೇಜ್‌ ಜೊತೆಗೆ ನಟಿ ಶ್ರೀಲೀಲಾ ತೆರೆ ಹಂಚಿಕೊಳ್ಳಲಿದ್ದಾರಂತೆ. ಒಂದು ಚಿತ್ರದ ಬಳಿಕ ನಟಿ ಶ್ರೀಲೀಲಾಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ. ಸದ್ಯ ಎರಡು ಸಿನಿಮಾಗಳನ್ನು ಒಂದೇ ನಿರ್ಮಾಣ ಸಂಸ್ಥೆ ಆಫರ್ ಮಾಡಿದೆ ಎಂದು ಹೇಳಲಾಗುತ್ತಿದೆ. ತೆಲುಗಿನ ಹೆಸರಾಂತ ಸಿನಿಮಾ ನಿರ್ಮಾಣ ಸಂಸ್ಥೆ ಆದ 'ಸಿತಾರ ಎಂಟರ್ಟೈನ್‌ಮೆಂಟ್ಸ್' ನಿರ್ಮಾಣ ಸಂಸ್ಥೆಯಿಂದ ನಟಿ ಶ್ರೀಲೀಲಾಗೆ ಎರಡು ಸಿನಿಮಾಗಳ ಅವಕಾಶ ಬಂದಿವೆ.

ಶ್ರೀಲೀಲಾ ಸಂಭಾವನೆ 75 ಲಕ್ಷ ದಿಂದ 1 ಕೋಟಿ ರೂ.ಗೆ!

ಶ್ರೀಲೀಲಾ ಸಂಭಾವನೆ 75 ಲಕ್ಷ ದಿಂದ 1 ಕೋಟಿ ರೂ.ಗೆ!

ನಟಿ ಶ್ರೀಲೀಲಾ ಸಿನಿಮಾರಂಗದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಸದ್ಯ ಆಕೆ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇಲ್ಲಿ ತನಕ 75 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರಂತೆ ಶ್ರೀಲೀಲಾ. ಆದರೆ ಈಗ ಈ ಬೆಡಗಿಯ ಸಂಭಾವನೆ 1 ಕೋಟಿಗೆ ಏರಿಕೆ ಆಗಿದೆ. ಕನ್ನಡದಲ್ಲಿ ಶ್ರೀಲೀಲಾ ಅವರು 'ಕಿಸ್', 'ಭರಾಟೆ' ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ' ಬೈ ಟು ಲವ್' ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಈ ನಡುವೆ ತೆಲುಗಿನ 'ಪೆಳ್ಳಿ ಸಂದಡಿ' ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ. ಈಗ ಮುಂದಿನ ಚಿತ್ರಗಳಿಗೆ 1 ಕೊಟಿ ಸಂಭಾವನೆ ಪಡೆಯಲಿದ್ದಾರೆ ಎನ್ನುವ ವಿಚಾರ ಸದ್ದು ಮಾಡುತ್ತಿದೆ.

ತಂದೆಯ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿದ್ದ ಶ್ರೀಲೀಲಾ ಹೆಸರು!

ತಂದೆಯ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿದ್ದ ಶ್ರೀಲೀಲಾ ಹೆಸರು!

ಇನ್ನು ತೆಲುಗು ಚಿತ್ರರಂಗಕ್ಕೆ ನಟಿ ಶ್ರೀಲೀಲಾ ಅವರು ಕಾಲಿಡುತ್ತಿದ್ದ ಹಾಗೆಯೇ, ಅವರ ವೈಯಕ್ತಿಕ ವಿಚಾರ ಹೆಚ್ಚು ಸದ್ದು ಮಾಡಿತು. ಶ್ರೀಲೀಲಾ ಅವರು ತಮ್ಮ ತಂದೆಯ ವಿಚಾರದಲ್ಲಿ ಹೆಚ್ಚಾಗಿ ವಿವಾದಕ್ಕೆ ಒಳಗಾಗಿದ್ದರು. ಉದ್ಯಮಿ ಸುರಪನೇನಿ ಸುಭಾಕರ ರಾವ್‌ ಅವರು ಶ್ರೀಲೀಲಾ ತಮ್ಮ ಮಗಳು ಅಲ್ಲವೇ ಅಲ್ಲ ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯನ್ನು ನಡೆಸಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಶ್ರೀಲೀಲಾ ಅವರ ತಂದೆ ಉದ್ಯಮಿ ಸುರಪನೇನಿ ಸುಭಾಕರ ರಾವ್‌ ಎಂದು ವರದಿ ಆಗಿದ್ದ ಕಾರಣ ಅವರು ಸುದ್ದಿಗೋಷ್ಠಿ ನಡೆಸಿ ಶ್ರೀಲೀಲಾ ತನ್ನ ಮಗಳಲ್ಲ ಎಂದಿದ್ದರು.

More from Filmibeat

English summary
Actress Sreeleela Is In High Demand She Increased Her Remuneration,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X