ಕಿಸ್ ಬೆಡಗಿ ಶ್ರೀಲೀಲಾಗೆ ಬಂಪರ್ ಆಫರ್: ಸಿಕ್ತು ಮಹೇಶ್ ಬಾಬು ಸಿನಿಮಾ!

ಕನ್ನಡದ ನಟಿ ಶ್ರೀಲೀಲಾ ಸದ್ಯ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡದಲ್ಲಿ ಕಿಸ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಎಂಟ್ರಿ ಕೊಟ್ಟ ಶ್ರೀಲೀಲಾ ಅವರು ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಜೊತೆಗೆ ಈ ಮುದ್ದು ಮೊಗದ ಚೆಲುವೆಗೆ ಸಾಕಷ್ಟು ಅಭಿಮಾನಿಗಳು ಕೂಡ ಇದ್ದಾರೆ.

Recommended Video

ಮಹೇಶ್ ಬಾಬು ಜೊತೆ ಶ್ರೀ ಲೀಲಾ ಅದೃಷ್ಟ ಪರೀಕ್ಷೆ!

ಕನ್ನಡದಲ್ಲಿ ಬ್ಯುಸಿ ಇರುವ ಶ್ರೀಲೀಲಾ ಅಭಿನಯದ 'ಬೈ ಟು ಲವ್' ಸಿನಿಮಾ ಸದ್ಯ ರಿಲೀಸ್‌ಗೆ ರೆಡಿ ಆಗಿದೆ. ಕನ್ನಡದಲ್ಲೂ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಶ್ರೀಲೀಲಾಗೆ ಅತ್ತ ತೆಲುಗು ಸಿನಿಮಾ ರಂಗದಲ್ಲೂ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶ್ರೀಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜೊತೆಗೆ ಅಲ್ಲೂ ಕೂಡ ಶ್ರೀಲೀಲಾ ಅವರಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿದೆ.

ಸದ್ಯ ಶ್ರೀಲೀಲಾ ಅವರ ಬಗ್ಗೆ ಮಾತನಾಡಲು ಕಾರಣ ಅವರಿಗೆ ಹೆಚ್ಚಾಗಿರುವ ಬೇಡಿಕೆ. ಶ್ರೀಲೀಲಾ ಅವರಿಗೆ ಕನ್ನಡ ಮತ್ತು ತೆಲುಗು ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ತೆಲುಗಿನ ಬಿಗ್ ಸ್ಟಾರ್‌ಗಳ ಸಿನಿಮಾಗಳು ಶ್ರೀಲೀಲಾ ಅವರನ್ನು ಅರಸಿ ಬರುತ್ತಿವೆ. ಶ್ರೀಲೀಲಾ ನಟ ಮಹೇಶ್ ಬಾಬು ಜೊತೆಗೆ ಅಭಿನಯಿಸಲಿದ್ದಾರಂತೆ.

ಮಹೇಶ್ ಬಾಬು ಜೊತೆಗೆ ಶ್ರೀಲೀಲಾ ಹೆಸರು!

ಮಹೇಶ್ ಬಾಬು ಜೊತೆಗೆ ಶ್ರೀಲೀಲಾ ಹೆಸರು!

ನಟಿ ಶ್ರೀಲೀಲಾಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಶ್ರೀಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾ 'ಪೆಳ್ಳಿ ಸಂದಡಿ' ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿನ ಶ್ರೀಲೀಲಾ ಹೋಮ್ಲಿ ಲುಕ್, ಅಭಿನಯ, ಡಾನ್ಸ್‌ಗೆ ಟಾಲಿವುಡ್ ಫಿದಾ ಆಗಿದೆ. ಜೊತೆಗೆ ಶ್ರೀಲೀಲಾ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಾಗಾಗಿ ಕನ್ನಡದ ಕಿಸ್ ಬೆಡಗಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಶ್ರೀಲೀಲಾಗೆ ಮಹೇಶ್ ಬಾಬು ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ ಅಂತೆ.

ಮಹೇಶ್‌ ಬಾಬು 28ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿ!

ಮಹೇಶ್‌ ಬಾಬು 28ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿ!

ನಟ ಮಹೇಶ್‌ ಬಾಬು ಸದ್ಯ 'ಸರ್ಕಾರು ವಾರಿ ಪಾಠ' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಇತ್ತೀಚೆಗಷ್ಟೆ 27ನೇ ಸಿನಿಮಾದ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ನಿರ್ದೇಶಕ ತ್ರಿವಿಕ್ರಮ ಶ್ರೀನಿವಾಸ್ ನಿರ್ದೇಶನ ಇರಲಿದೆ. ಈ ಚಿತ್ರದಲ್ಲಿ ಮಹೇಶ್ ಬಾಬುಗೆ ಇಬ್ಬರು ನಾಯಕಿಯರು. ಅದರಲ್ಲಿ ಶ್ರೀಲೀಲಾ ಎರಡನೆ ನಾಯಕಿ ಆಗಿ ಅಭಿನಯಿಸಿದ್ದಾರಂತೆ. ಈ ಬಗ್ಗೆ ಚಿತ್ರತಂಡ ಅದಾಗಲೇ ಶ್ರೀಲೀಲಾ ಜೊತೆಗೆ ಮಾತು ಕತೆ ನಡೆಸಿದೆ ಎನ್ನಲಾಗಿದೆ.

ಪೂಜಾ ಹೆಗ್ಡೆ ಜೊತೆಗೆ ಶ್ರೀಲೀಲಾ ಅಭಿನಯ!

ಪೂಜಾ ಹೆಗ್ಡೆ ಜೊತೆಗೆ ಶ್ರೀಲೀಲಾ ಅಭಿನಯ!

ಇನ್ನು ಈ ಚಿತ್ರ ನಾಯಕಿ ಆಗಿ ಈಗಾಗಲೇ ಪೂಜಾ ಹೆಗ್ಡೆ ಆಯ್ಕೆ ಆಗಿದ್ದಾರೆ. ಚಿತ್ರದ ಮುಹೂರ್ತ ಸಂದರ್ಭದಲ್ಲಿ ಪೂಜಾ ಹೆಗ್ಡೆ ಹಾಜರಾಗಿದ್ದರು. ಆದರೆ ಇದೇ ಚಿತ್ರದಲ್ಲಿ ಎರಡನೇ ನಾಯಕಿ ಆಗಿ ಶ್ರೀಲೀಲಾ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಒಂದೇ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಶ್ರೀಲೀಲಾ ಅಭಿನಯಿಸಲಿದ್ದಾರೆ. ವಿಶೇಷ ಎಂದರೆ ಇಬ್ಬರೂ ಕರ್ನಾಟಕ ಮೂಲದವರು. ಹಾಗಾಗಿ ಸದ್ಯ ಶ್ರೀಲೀಲಾ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ನವೀನ್ ಪೊಲಿಶೆಟ್ಟಿ ಮತ್ತು ವೈಷ್ಣವ್ ತೇಜ್ ಜೊತೆಗೆ ಶ್ರೀಲೀಲಾ!

ನವೀನ್ ಪೊಲಿಶೆಟ್ಟಿ ಮತ್ತು ವೈಷ್ಣವ್ ತೇಜ್ ಜೊತೆಗೆ ಶ್ರೀಲೀಲಾ!

ನಟಿ ಶ್ರೀಲೀಲಾ ಅವರಿಗೆ ತೆಲುಗಿನ ನವೀನ್‌ ಪೊಲಿಶೆಟ್ಟಿ ಮತ್ತು ನಟ ವೈಷ್ಣವ್ ತೇಜ್ ಜೊತೆಗೆ ನಟಿ ಶ್ರೀಲೀಲಾ ತೆರೆ ಹಂಚಿಕೊಳ್ಳಲಿದ್ದಾರಂತೆ. ಒಂದು ಚಿತ್ರದ ಬಳಿಕ ನಟಿ ಶ್ರೀಲೀಲಾಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ. ಸದ್ಯ ಎರಡು ಸಿನಿಮಾಗಳನ್ನು ಒಂದೇ ನಿರ್ಮಾಣ ಸಂಸ್ಥೆ ಆಫರ್ ಮಾಡಿದೆ ಎಂದು ಹೇಳಲಾಗುತ್ತಿದೆ. ತೆಲುಗಿನ ಹೆಸರಾಂತ ಸಿನಿಮಾ ನಿರ್ಮಾಣ ಸಂಸ್ಥೆ ಆದ 'ಸಿತಾರ ಎಂಟರ್ಟೈನ್‌ಮೆಂಟ್ಸ್' ನಿರ್ಮಾಣ ಸಂಸ್ಥೆ ಇಂದ ನಟಿ ಶ್ರೀಲೀಲಾಗೆ ಎರಡು ಸಿನಿಮಾಗಳ ಅವಕಾಶ ಬಂದಿವೆ.

ಶ್ರೀಲೀಲಾ ಸಂಭಾವನೆ 75 ಲಕ್ಷ ದಿಂದ 1 ಕೋಟಿ ರೂ.ಗೆ!

ಶ್ರೀಲೀಲಾ ಸಂಭಾವನೆ 75 ಲಕ್ಷ ದಿಂದ 1 ಕೋಟಿ ರೂ.ಗೆ!

ನಟಿ ಶ್ರೀಲೀಲಾ ಸಿನಿಮಾರಂಗದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಸದ್ಯ ಆಕೆ ತನ್ನ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇಲ್ಲಿ ತನಕ 75 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರಂತೆ ಶ್ರೀಲೀಲಾ. ಆದರೆ ಈಗ ಈ ಬೆಡಗಿಯ ಸಂಭಾವನೆ 1 ಕೋಟಿಗೆ ಏರಿಕೆ ಆಗಿದೆ. ಕನ್ನಡದಲ್ಲಿ ಶ್ರೀಲೀಲಾ ಅವರು 'ಕಿಸ್', 'ಭರಾಟೆ' ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ' ಬೈ ಟು ಲವ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಇದೇ ಫೆಬ್ರವರಿ 18ಕ್ಕೆ ಚಿತ್ರ ರಿಲೀಸ್ ಆಗಲಿದೆ.

More from Filmibeat

English summary
Actress Sreeleela Got Big Offer, Her Next Movie With Mahesh Babu,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X