ಶ್ರೀನಿಧಿ ಶೆಟ್ಟಿ ಸಂಭಾವನೆ ಬೇಡಿಕೆ: ರಶ್ಮಿಕಾ, ಪೂಜಾ ಹೆಗ್ಡೆಗಿಂತಲೂ ಹೆಚ್ಚು!

'ಕೆಜಿಎಫ್' ಸಿನಿಮಾದ ಮೂಲಕ ಬಣ್ಣದ ಬದುಕಿನ ಪಯಣ ಆರಂಭಿಸಿದ ಶ್ರೀನಿಧಿ ಶೆಟ್ಟಿ ಇಂದು ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. 'ಕೆಜಿಎಫ್' ಸೂಪರ್ ಡೂಪರ್ ಹಿಟ್ ಆಗುತ್ತಲೇ, ನಟಿ ಶ್ರೀನಿಧಿ ಶೆಟ್ಟಿಯ ಬೇಡಿಕೆ ಹೆಚ್ಚಿದೆ. ಅಂದರೆ ಶ್ರೀನಿಧಿ ಶೆಟ್ಟಿ ಸ್ಟಾರ್ ನಟಿಯರ ಸಾಲಿಗೆ ಸೇರಿಬಿಟ್ಟಿದ್ದಾರೆ.

ಶ್ರೀನಿಧಿ ಶೆಟ್ಟಿಯ ಮೊದಲ ಸಿನಿಮಾ 'ಕೆಜಿಎಫ್'. ಎರಡನೇ ಸಿನಿಮಾ 'ಕೆಜಿಎಫ್ 2'. 'ಕೆಜಿಎಫ್' ಮೂಲಕವೇ ತಮ್ಮ ಸಿನಿಮಾ ಪಯಣವನ್ನು ಆರಂಭಿಸಿದ ಶ್ರೀನಿಧಿ ಶೆಟ್ಟಿ ಅಭಿನಯಿಸಿರುವುದು 3 ಸಿನಿಮಾಗಳಲ್ಲಿ ಅದು 'ಕೆಜಿಎಫ್ 1' 'ಕೆಜಿಎಫ್ 2' ಮತ್ತು 'ಕೋಬ್ರಾ'.

ಈ ಸಿನಿಮಾದ ಬಳಿಕ ಶ್ರೀನಿಧಿ ಶೆಟ್ಟಿಯ ಬೇಡಿಕೆ ಹೆಚ್ಚಾಗಿದೆ. ಅದಾಗಲೇ ತಮಿಳಿನಲ್ಲಿ 'ಕೋಬ್ರಾ' ಸಿನಿಮಾದಲ್ಲಿ ಶ್ರೀನಿಧಿ ಅಭಿನಯಿಸಿದ್ದಾರೆ. ಹಾಗಾಗಿ ಶ್ರೀನಿಧಿ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರಂತೆ. ಇದರಿಂದ ಟಾಲಿವುಡ್ ನಿರ್ಮಾಪಕರು ಶಾಕ್ ಆಗಿದ್ದಾರೆ.

ಹೆಚ್ಚಿನ ಸಂಭಾವನೆಗೆ ಶ್ರೀನಿಧಿ ಬೇಡಿಕೆ!

ಹೆಚ್ಚಿನ ಸಂಭಾವನೆಗೆ ಶ್ರೀನಿಧಿ ಬೇಡಿಕೆ!

ಸದ್ಯ ಟಾಲಿವುಡ್‌ನಲ್ಲಿ ನಟಿ ಶ್ರೀನಿಧಿ ಶೆಟ್ಟಿಯ ಬಗ್ಗೆ ಇದೇ ಮಾತು. ನಟಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಶ್ರೀನಿಧಿ ಮೂರು ಸಿನಿಮಾಗಳನ್ನು ಮಾಡಿರುವ ಕಾರಣ ಅವರ ಅಧಿಕೃತ ಸಂಭಾವನೆ ಎಷ್ಟು ಎನ್ನುವುದು ಹೊರಬಂದಿಲ್ಲ. ಆದರೆ ಇದೀಗ ಶ್ರೀನಿಧಿ ತೆಲುಗು ನಟಿಯರ ಪೈಕಿ ಅತಿ ಹೆಚ್ಚು ಸಂಭಾವನೆಯನ್ನು ಕೇಳುತ್ತಿದ್ದಾರೆ ಎನ್ನುವ ಸುದ್ದಿ ಮಾತ್ರ ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ.

ಶ್ರೀನಿಧಿ ಸಂಭಾವನೆಗೆ ನಿರ್ಮಾಪಕರು ಶಾಕ್!

ಶ್ರೀನಿಧಿ ಸಂಭಾವನೆಗೆ ನಿರ್ಮಾಪಕರು ಶಾಕ್!

ಶ್ರೀನಿಧಿ ಶೆಟ್ಟಿ ಕಾಲ್ ಶೀಟನ್ನು ಹಲವು ತೆಲುಗು ನಿರ್ಮಾಪಕರು ಕೇಳಿದ್ದಾರಂತೆ. ಆದರೆ ಶ್ರೀನಿಧಿ ಕೇಳಿದ ಸಂಭಾವನೆಯ ಮೊತ್ತ ಅವರನ್ನ ಬೆಚ್ಚಿಬೀಳಿಸಿದೆ. ಶ್ರೀನಿಧಿ ಕೇಳುತ್ತಿರುವ ಸಂಭಾವನೆಯ ಮೊತ್ತ ಕೇಳಿ ಕೆಲವು ನಿರ್ಮಾಪಕರು ಶಾಕ್ ಆಗುದ್ದಾರಂತೆ. ಹಾಗಾಗಿ ಶ್ರೀನಿಧಿ ಜೊತೆಗೆ ಸಿನಿಮಾ ಮಾಡುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣಗಿಂತ ಅಧಿಕ ಸಂಭಾವನೆಯನ್ನು ಅಪೇಕ್ಷೆ ಪಡುತ್ತಿದ್ದಾರಂತೆ ಶ್ರೀನಿಧಿ.

ಶ್ರೀನಿಧಿ ಸಂಭಾವನೆ ರಶ್ಮಿಕಾ, ಪೂಜಾ ಹೆಗ್ಡೆಗಿಂತ ಅಧಿಕ?

ಶ್ರೀನಿಧಿ ಸಂಭಾವನೆ ರಶ್ಮಿಕಾ, ಪೂಜಾ ಹೆಗ್ಡೆಗಿಂತ ಅಧಿಕ?

ಸದ್ಯ ಸೌತ್ ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ರಶ್ಮಿಕಾ ಮತ್ತು ಪೂಜಾ ಹೆಗ್ಡೆ ಮುಂಚೂಣಿಯಲ್ಲಿ ಇದ್ದಾರೆ. ಮೂಲಗಳ ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಒಂದು ಸಿನಿಮಾಗೆ 4 ಕೋಟಿ ಸಂಭಾವನೆಯನ್ನು ಪಡೆದರೆ, ಪೂಜಾ ಹೆಗ್ಡೆ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಆದರೆ ಇವರಿಬ್ಬರನ್ನು ಬೀಟ್ ಮಾಡಲು ನಟಿ ಶ್ರೀನಿಧಿ ಶೆಟ್ಟಿ ಸಿದ್ಧವಾಗಿದ್ದಾರೆ. ಈ ಇಬ್ಬರಿಗಿಂತಲೂ ಹೆಚ್ಚಿನ ಸಂಭಾವನೆಯ ಬೇಡಿಕೆಯನ್ನು ಶ್ರೀನಿಧಿ ನಿರ್ಮಾಪಕರ ಮುಂದೆ ಇಡುತಿದ್ದಾರಂತೆ.

Recommended Video

MR ಸಿನಿಮಾ ಆಗದೆ ಡೆಡ್ಲಿ 3 ಶುರುವಾಗಿದ್ದು ಹೇಗೆ? | Ravi Srivatsa | Deadly 3 | Filmibeat Kannada
ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾ ಯಾವಾಗ?

ಶ್ರೀನಿಧಿ ಶೆಟ್ಟಿ ಮುಂದಿನ ಸಿನಿಮಾ ಯಾವಾಗ?

ಶ್ರೀನಿಧಿ ಶೆಟ್ಟಿ ಕೆಜಿಎಫ್ 2 ಬಳಿಕ, ತಮಿಳಿನ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ನಟ ವಿಕ್ರಮ್ ಜೊತೆಗೆ 'ಕೋಬ್ರಾ' ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ನಟಿ ಶ್ರೀನಿಧಿ ಶೆಟ್ಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದು ಬಿಟ್ಟರೆ ಶ್ರೀನಿಧಿಯ ಮತ್ಯಾವ ಸಿನಿಮಾ ಕೂಡ ಪ್ರಕಟಗೊಂಡಿಲ್ಲ. ಇನ್ನು ತೆಲುಗು ತಮಿಳಿನಲ್ಲೂ ಕೂಡ ಶ್ರೀನಿಧಿಗೆ ಬೇಡಿಕೆ ಇದ್ದು ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿದೆ.

More from Filmibeat

English summary
Actress Srinidhi Shetty Demand High Remuneration more than Pooja Hegde and Rashmika Mandanna, Tollywood producers in shock, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X