ನಟಿ ಸುರ್ವಿನ್ ರನ್ನು ಮಂಚಕ್ಕೆ ಆಹ್ವಾನಿಸಿದ್ದು ಯಾರು?
ಬಣ್ಣದ ಪ್ರಪಂಚದಲ್ಲಿ ಇದೆಲ್ಲಾ ಕಾಮನ್ ಬಿಡ್ರಿ ಎನ್ನುವರಿಗೆ ಅದೇ ರೀತಿಯ ಮತ್ತೊಂದು ಸುದ್ದಿ ಅಲೆಅಲೆಯಾಗಿ ತೇಲಿ ಬಂದಿದೆ. ಇದೇ ನವೆಂಬರ್ 7ರಂದು ಬಾಲಿವುಡ್ ಬೆಡಗಿ ಸುರ್ವಿನ್ ಚಾವ್ಲಾ ಅಭಿನಯದ ಕನ್ನಡ ಚಿತ್ರ 'ಅಭಿಮನ್ಯು' ಬಿಡುಗಡೆಯಾಗುತ್ತಿದೆ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಸುರ್ವಿನ್ ಅವರದು ಗಮನಾರ್ಹ ಪಾತ್ರ. ಅವರು ಇತ್ತೀಚೆಗೆ ಮಾತನಾಡುತ್ತಾ
ನನ್ನ ಜೀವನದಲ್ಲಿ ಬಹಳಷ್ಟು ಅನುಚಿತ ಘಟನೆಗಳು ಎದುರಾಗಿವೆ. ಅದೃಷ್ಟವಶಾತ್ ಮುಂಬೈನಲ್ಲಿ ಆ ರೀತಿಯ ಘಟನೆಗಳೇನು ನಡೆಯಲಿಲ್ಲ.
ಏಜೆಂಟ್ ಬಂದು ಸಂಬಂಧದ ಬಗ್ಗೆ ಮಾತನಾಡಿದಾಗಲೇ ನನಗೆ ಅರ್ಥವಾಯಿತು. ಇವರು ಮಂಚಕ್ಕೆ ಆಹ್ವಾನಿಸುತ್ತಿದ್ದಾರೆಂದು. ಕೂಡಲೆ ನಾನು ಏಜೆಂಟ್ ರೊಂದಿಗೆ ನನಗೆ ಆ ರೀತಿಯ ಯಾವುದೇ ಸಂಬಂಧ ಬೇಡ. ತಾವು ಬಾಯಿ ಮುಚ್ಚಿಕೊಂಡು ಇಲ್ಲಿಂದ ಹೋಗಿ ಎಂದು ಹೇಳಿದ್ದಾಗಿ ಸರ್ವಿನ್ ತಿಳಿಸಿದ್ದಾರೆ.
'ಹೇಟ್ ಸ್ಟೋರಿ 2' ಚಿತ್ರದ ಮೂಲಕ ಜನಪ್ರಿಯರಾದ ಸುರ್ವಿನ್ ಈ ರೀತಿ ಹೇಳಿರುವುದು ಈಗ ಚರ್ಚಾಸ್ಪದ ವಿಷಯವಾಗಿದೆ. ಯಾರಿರಬಹುದು ಆ ನಿರ್ದೇಶಕ ಎಂದು ಚಿತ್ರೋದ್ಯಮದಲ್ಲಿ ಗುಸುಗುಸು ಶುರುವಾಗಿದೆ.
ಬಳಿಕ ಅವರು 'ಅಭಿಮನ್ಯು' ಚಿತ್ರದ ಬಗ್ಗೆ ಮಾತನಾಡುತ್ತಾ, ಈ ಚಿತ್ರದಲ್ಲಿ ತಾವು ನಾಯಕಿ ಪ್ರಾಧಾನ್ಯತೆಯುಳ್ಳ ಪಾತ್ರದಲ್ಲಿ ಕಾಣಿಸುತ್ತಿದ್ದೇವೆ. ಈ ಚಿತ್ರದ ಮೂಲಕ ತಮ್ಮ ವೃತ್ತಿ ಬದುಕಿನ ಗ್ರಾಫ್ ಬದಲಾಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದಿದ್ದಾರೆ ಸುರ್ವಿನ್.


Click it and Unblock the Notifications












