ಮಾಜಿ ಬಾಯ್‌ಫ್ರೆಂಡ್ ಜೊತೆ ಪ್ಯಾಚಪ್ ಮಾಡಿಕೊಂಡ್ರಾ ನಟಿ ಸುಶ್ಮಿತಾ ಸೇನ್?: ಮುಂಬೈನಲ್ಲಿ ಕೈ ಕೈ ಹಿಡಿದು ಸುತ್ತಾಟ!
ನಟಿ ಸುಶ್ಮಿತಾ ಸೇನ್ ಮತ್ತೆ ತಮ್ಮ ರಿಲೇಷನ್‌ಶಿಪ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಹಿಂದೆ ತಮ್ಮ ಬಹುಕಾಲದ ಗೆಳೆಯ ರೋಹ್ಮಾನ್ ಶಾಲ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದ ಅವರು, ಉದ್ಯಮಿ ಲಲಿತ್ ಮೋದಿ ಜೊತೆಗೆ ಸುತ್ತಾಟ ಆರಂಭಿಸಿದ್ದರು. ಆದರೆ, ಈಗ ಮತ್ತೆ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿ ಹರಡಿದೆ.
ಹೌದು... 2021ರ ಡಿಸೆಂಬರ್‌ನಲ್ಲಿ ತಾವು ರೋಹ್ಮಾನ್ ಶಾಲ್ ಜೊತೆಗೆ ಸಂಬಂಧ ಮುರಿದುಕೊಂಡಿರುವುದಾಗಿಯೂ, ಕೇವಲ ಸ್ನೇಹಿತರಾಗಿ ಇರುತ್ತೇವೆ ಎಂದೂ ಸಾಮಾಜಿಕ ಮಾಧ್ಯಮಗಳಲ್ಲಿಲ್ಲಿ ಅಧಿಕೃತವಾಗಿ ಸುಶ್ಮಿತಾ ಸೇನ್ ಘೋಷಿಸಿದ್ದರು. ಆದಾದ ಬಳಿಕವೂ ಇಬ್ಬರು ಮುಂಬೈನಲ್ಲಿ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಮತ್ತೆ ಪ್ರೀತಿಯಲ್ಲಿ ಬಿದ್ದ ನಟಿ ಸುಶ್ಮಿತಾ ಸೇನ್?
ಸದ್ಯ ಬೀಟೌನ್‌ನಲ್ಲಿ ಸುಶ್ಮಿತಾ ಸೇನ್ ಮತ್ತು ಅವರ ಮಾಜಿ ಗೆಳೆಯ ರೋಹ್ಮಾನ್ ಶಾಲ್ ಅವರದ್ದೇ ಸುದ್ದಿ. ಮುಂಬೈನಲ್ಲಿ ದೀಪಾವಳಿ ಪಾರ್ಟಿಯಲ್ಲಿ ಭಾಗವಹಿಸಿದ್ದ ಇಬ್ಬರ ನಡುವಿನ ಕೆಮಿಸ್ಟ್ರಿ ನೋಡಿ ಪಾಪರಾಜಿಗಳು ಮತ್ತು ಅಭಿಮಾನಿಗಳು ಇವರಿಬ್ಬರು ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಜೋಡಿ ಬೇಗ ಮದುವೆಯಾಗಲಿ ಎಂದು ಹಾರೈಸುತ್ತಿದ್ದಾರೆ.
ಮಾಜಿ ಗೆಳೆಯನ ಕೈ ಹಿಡಿದುಕೊಂಡು ಬಂದ ಸುಶ್ಮಿತಾ ಸೇನ್
ದೀಪಾವಳಿ ಪಾರ್ಟಿಯ ಪಾಪರಾಜಿ ವಿಡಿಯೋಗಳಲ್ಲಿ ಸುಶ್ಮಿತಾಸೇನ್ ಮತ್ತು ರೋಹ್ಮಾನ್ ಶಾಲ್ ಕ್ಯಾಮರಾಗಳಿಗೆ ಸಕತ್ ಹ್ಯಾಪಿಯಾಗಿ ಪೋಸ್ ನೀಡುತ್ತಿರುವುದು ಕಾಣಿಸುತ್ತಿದೆ. ಸುಶ್ಮಿತಾ ಕಪ್ಪು ಸೀರೆ ಧರಿಸಿ ಕೆಲವೇ ಕೆಲವು ಆಭರಣ ಧಸಿದಿದ್ದರು. ರೋಹ್ಮನ್ ಶಾಲ್ ಹಸಿರು ಬ್ಲೇಜರ್ ಜೊತೆಗೆ ಬಿಳಿ ಕುರ್ತಾ ಪೈಜಾಮಾ ಧರಿಸಿದ್ದರು.
ಇನ್ನು, ನಟಿ ಸುಶ್ಮಿತಾ ಸೇನ್ ಮೆಟ್ಟಿಲು ಇಳಿದು ನಡೆಯಬೇಕಾದರೇ, ರೋಹ್ಮಾನ್ ಶಾಲ್ ಆಕೆಯ ಕೈಗಳನ್ನು ಹಿಡಿದು ಸೀರೆಯಲ್ಲಿ ನಡೆಯಲು ಸಹಾಯ ಮಾಡುತ್ತಿದ್ದಾರೆ. ಜೊತೆಗೆ ಇಬ್ಬರು ಖುಷಿಯಿಂದ ಜೋಡಿಗಳಂತೆಯೇ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಇಬ್ಬರು ಒಂದಾಗಿದ್ದಾರೆ ಎಂಬ ಆಶಾಭಾವನೆ ಮೂಡಿಸಿದೆ.

ಇಬ್ಬರನ್ನು ನೋಡಿ ನೆಟ್ಟಿಗರು ಫೂಲ್ ಖುಷ್ ಆಗಿದ್ದು, 'ಓಹೋ ಅಧಿಕೃತವಾಗಿ ಮತ್ತೆ ಒಂದಾಗಿದ್ದಾರೆ', 'ಅವರಿಬ್ಬರೂ ಬೇರೆಯಾಗಿದ್ದಾರೆ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಒಂದಾಗಿದ್ದಾರೇಯೇ ಅಥವಾ ಸ್ನೇಹಿತರೇ?' ಎಂದು ಹಲವು ಮಂದಿ ತಮ್ಮ ಕುತೂಹಲವನ್ನು ಹೊರಹಾಕಿದ್ದಾರೆ.
ನಟಿಗಿಂತ 15 ವರ್ಷ ಚಿಕ್ಕವರು ರೋಹ್ಮಾನ್ ಶಾಲ್!
ನಟಿ ಸುಶ್ಮಿತಾ ಸೇನ್ ಮತ್ತು ರೋಹ್ಮಾನ್ ಶಾಲ್ 2018ರಲ್ಲಿ ಭೇಟಿಯಾಗಿದ್ದರು. ಸ್ನೇಹಿತರಾಗಿದ್ದ ಇವರು ಬಳಿಕ ಪ್ರೀತಿಯಲ್ಲಿ ಬಿದ್ದಿದ್ದರು. ತುಂಬಾ ಕಾಲ ಖುಷಿಯಾಗಿಯೇ ಇದ್ದ ಈ ಜೋಡಿ 2021ರ ಡಿಸೆಂಬರ್‌ನಲ್ಲಿ ತಾವು ಬೇರೆಯಾಗುತ್ತಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಆದರೆ, ತಮ್ಮ ಸ್ನೇಹ ಹಾಗೆ ಇರುತ್ತದೆ ಎಂದಿದ್ದರು. ಈಗ ಮತ್ತೆ ಒಂದಾಗಿರುವಂತೆ ಕಾಣಿಸುತ್ತಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಟಿ ಸುಶ್ಮಿತಾ ಸೇನ್‌ಗೆ ಈಗ 47 ವರ್ಷ ವಯಸ್ಸು. ಆದರೆ, ಅವರ ಬಾಯ್‌ಫ್ರೆಂಡ್ರ ರೋಹ್ಮಾನ್ ಶಾಲ್ ಅವರಿಗೆ 32 ವರ್ಷ. ಹೀಗಾಗಿ ಇಬ್ಬರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 15 ವರ್ಷ. ಹೌದು, ನಟಿ ತಮಗಿಂತ 15 ವರ್ಷ ಕಿರಿಯ ವ್ಯಕ್ತಿಯನ್ನು ಗೆಳೆಯನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಬ್ಗಗೆ ಇಬ್ಬರು ಅಧೀಕೃತವಾಗಿ ಮಾತನಾಡಿಲ್ಲ. ಸದ್ಯಕ್ಕೆ ಸುಶ್ಮಿತಾ ಸೇನ್ ಅಭಿನಯದ ಆರ್ಯ 3 ವೆಬ್ ಸೀರಿಸ್ ಬಿಡುಗಡೆಯಾಗಿದ್ದು, ಅವರು ಅದರ ಖುಷಿಯಲ್ಲಿದ್ದಾರೆ.


Click it and Unblock the Notifications











