»   » ನಾಯಕಿಯರಿಗಾಗಿ 'ಚೆನ್ನೈ ಟು ಬಾಂಬೆ' ಹುಡುಕುತ್ತಿರುವ 'ದಿ ವಿಲನ್'!

ನಾಯಕಿಯರಿಗಾಗಿ 'ಚೆನ್ನೈ ಟು ಬಾಂಬೆ' ಹುಡುಕುತ್ತಿರುವ 'ದಿ ವಿಲನ್'!

Posted By:
Subscribe to Filmibeat Kannada

'ದಿ ವಿಲನ್' ಚಿತ್ರದಲ್ಲಿ ಒಬ್ಬೊಬ್ಬರೇ ಪರಭಾಷಾ ಸ್ಟಾರ್ ಗಳು ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ತೆಲುಗು ನಟ ಶ್ರೀಕಾಂತ್ 'ವಿಲನ್' ಅಡ್ಡಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಬಾಲಿವುಡ್ ಸ್ಟಾರ್ ನಟ ಮಿಥುನ್ ಚಕ್ರವರ್ತಿ ಹೊಸ ಎಂಟ್ರಿ ಆಗಿದ್ದಾರೆ. ಇನ್ನು ಯಾವೆಲ್ಲ ಕಲಾವಿದರು ಈ ಚಿತ್ರಕ್ಕಾಗಿ ಕನ್ನಡಕ್ಕೆ ಬರ್ತಾರೋ ಗೊತ್ತಿಲ್ಲ.

ಆದ್ರೆ, 'ವಿಲನ್'ಗೆ ಹೀರೋಯಿನ್ ಯಾರು ಎನ್ನುವುದು ಪದೇ ಪದೇ ಕೇಳಿ ಬರುತ್ತಿರುವ ದೊಡ್ಡ ಪ್ರಶ್ನೆಯಾಗಿದೆ. ಇಷ್ಟು ದಿನ ಆಮಿ ಜಾಕ್ಸನ್ ಬರ್ತಾರೆ ಎನ್ನಲಾಗುತ್ತಿತ್ತು. ಆದ್ರೀಗ, ಆಮಿ ಜಾಕ್ಸನ್ ಜೊತೆಯಲ್ಲಿ ಬಾಲಿವುಡ್ ಬ್ಯೂಟಿಗಳು ಹೆಸರು ಕೂಡ ಕೇಳಿ ಬರುತ್ತಿದೆ.

ಹಾಗಾದ್ರೆ, ನಿರ್ದೇಶಕರ ಕಣ್ಣು ಯಾವ ಯಾವ ನಟಿಯರ ಮೇಲೆ ಬಿದ್ದಿದೆ ಎಂಬುದನ್ನ ಮುಂದೆ ಓದಿ...

ಆಮಿ ಜಾಕ್ಸನ್ ಖಚಿತವಂತೆ!

ಮೊದಲೇ ಹೇಳಿದಾಗೆ ಆಮಿ ಜಾಕ್ಸನ್ 'ವಿಲನ್' ಚಿತ್ರದಲ್ಲಿ ಅಭಿನಯಿಸುವುದು ಬಹುತೇಕ ಖಚಿತವಂತೆ. ಆದ್ರೆ, ಆಮಿ ಜಾಕ್ಸನ್ ಸದ್ಯ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವುದರಿಂದ ಡೇಟ್ ಹೊಂದಾಣಿಕೆ ಆಗುತ್ತಿಲ್ಲವಂತೆ. ಎಲ್ಲ ಸುಗಮವಾಗಿ ಆದ್ರೆ, ಆದಷ್ಟೂ ಬೇಗ 'ವಿಲನ್' ಜೊತೆ ಆಮಿ ಹೆಜ್ಜೆ ಹಾಕಲಿದ್ದಾಳಂತೆ.

ಸುದೀಪ್ ಜೋಡಿಯಾಗಲಿದ್ದಾರಂತೆ ತಾಪ್ಸಿ!

ಇನ್ನು ಈಗ ಲೇಟೆಸ್ಟ್ ಆಗಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ 'ವಿಲನ್' ಚಿತ್ರದಲ್ಲಿ ಕಿಚ್ಚನಿಗೆ ಜೋಡಿ ತಾಪ್ಸಿ ಪನ್ನು ಬರುವ ಸಾಧ್ಯತೆಯಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ತಾಪ್ಸಿ 'ವಿಲನ್'ಗಾಗಿ ಕನ್ನಡಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ.

ರೇಸ್ ನಲ್ಲಿದ್ದಾಳೆ ಬಾಲಿವುಡ್ ನಟಿ

ಇನ್ನು 'ವಿಲನ್' ಚಿತ್ರದ ನಾಯಕಿಯರ ರೇಸ್ ನಲ್ಲಿ ಬಾಲಿವುಡ್ ನಟಿಯರು ಕೂಡ ಇದ್ದಾರಂತೆ. 'ಮರ್ಡರ್-3', 'ರಾಕ್ ಸ್ಟಾರ್', 'ಫಿತೂರ್' ಅಂತಹ ಚಿತ್ರಗಳಲ್ಲಿ ನಟಿಸಿರುವ ಅಧಿತಿ ರಾವ್ ಹೈದಿರಿ ಅವರನ್ನ ಕೂಡ ಚಿತ್ರತಂಡ ಸಂಪರ್ಕ ಮಾಡಿದೆಯಂತೆ.

ಕಮಲ್ ಪುತ್ರಿಗೂ ಆಫರ್!

ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಹೆಸರು ಕೂಡ 'ದಿ ವಿಲನ್' ಚಿತ್ರದ ನಾಯಕಿಯರ ಪಟ್ಟಿಯಲ್ಲಿದೆ. ಈ ಎಲ್ಲ ನಟಿರಯನ್ನ ಸಂಪರ್ಕ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ. ಆದ್ರೆ, ಅಂತಿಮವಾಗಿ 'ವಿಲನ್'ಗೆ ಯಾರು ಟಿಕೆಟ್ ಪಡೆಯುತ್ತಾರೆ ಎಂಬುದು ಮತ್ತಷ್ಟು ದಿನಗಳು ಕಾದು ನೋಡಬೇಕು.

ಸುದೀಪ್-ಶಿವಣ್ಣನ ಜುಗಲ್ ಬಂದಿ

ಅಂದ್ಹಾಗೆ, 'ದಿ ವಿಲನ್' ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಮೆಗಾಮೂವಿ. ಜೋಗಿ ಪ್ರೇಮ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸಿ.ಆರ್.ಮನೋಹರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಶ್ರುತಿ ಹರಿಹರನ್, ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್.ಪೇಟೆ ವಿಶೇಷ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

English summary
According to Source Taapsee Pannu, Aditi Rao Hydari, Amy Jackson, Shruthi Haasan and a few others Names are come with Female Leads role for The Villain

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada