ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸಲು ಟಬು ಪಡೆದ ಸಂಭಾವನೆ ಅಬ್ಬಬ್ಬಾ ಇಷ್ಟೊಂದಾ.?!

ಸಂಕ್ರಾಂತಿ ಹಬ್ಬದ ಪ್ರಯುಕ್ತ ಟಾಲಿವುಡ್ ನಲ್ಲಿ ತೆರೆಗೆ ಬಂದ ಸಿನಿಮಾ 'ಅಲಾ ವೈಕುಂಠಪುರಮುಲೋ'. ಅಲ್ಲು ಅರ್ಜುನ್ ಅಭಿನಯದ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಅಲಾ ವೈಕುಂಠಪುರಮುಲೋ' ಬಾಕ್ಸ್ ಆಫೀಸ್ ನಲ್ಲಿ ಅಕ್ಷರಶಃ ಲೂಟಿ ಹೊಡೆಯುತ್ತಿದೆ.

ಬಿಡುಗಡೆ ಆದ ಹತ್ತು ದಿನಗಳಲ್ಲಿ 220 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಚಿತ್ರ ಮುನ್ನುಗುತ್ತಿದೆ. ಇಂತಿಪ್ಪ 'ಅಲಾ ವೈಕುಂಠಪುರಮುಲೋ' ಚಿತ್ರದಲ್ಲಿ ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಜೊತೆಗೆ ಬಾಲಿವುಡ್ ನಟಿ ಟಬು ಕೂಡ ಅಭಿನಯಿಸಿದ್ದರು.

'ಅಲಾ ವೈಕುಂಠಪುರಮುಲೋ' ಚಿತ್ರದಲ್ಲಿ ನಟಿ ಟಬು ಅಬ್ಬಬ್ಬಾ ಅಂದ್ರೆ ತೆರೆಮೇಲೆ 15 ನಿಮಿಷ ಕಾಣಿಸಿಕೊಳ್ಳಬಹುದು ಅಷ್ಟೇ. ಹೀಗಿದ್ದರೂ, ಈ ಚಿತ್ರದಲ್ಲಿ ನಟಿಸಲು ಟಬು ಚಾರ್ಜ್ ಮಾಡಿರುವ ಮೊತ್ತ ಎಷ್ಟು ಗೊತ್ತಾ.?

ಟಬು ಸಂಭಾವನೆ

ಟಬು ಸಂಭಾವನೆ

ವರದಿಗಳ ಪ್ರಕಾರ, 'ಅಲಾ ವೈಕುಂಠಪುರಮುಲೋ' ಚಿತ್ರದಲ್ಲಿ ನಟಿಸಲು ಬಾಲಿವುಡ್ ನಟಿ ಟಬು ಪಡೆದುಕೊಂಡಿರುವ ಸಂಭಾವನೆ ಬರೋಬ್ಬರಿ 3 ಕೋಟಿ.! ಚಿಕ್ಕದಾದರೂ, ಸಿನಿಮಾದಲ್ಲಿ ಟಬುಗೆ ಬಹುಮುಖ್ಯ ಪಾತ್ರ ಇರುವುದರಿಂದ ನಿರ್ಮಾಪಕರು ಕೂಡ ಹಿಂದು ಮುಂದು ನೋಡದೆ, ಟಬು ದುಬಾರಿ ಸಂಭಾವನೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಹಿಂದಿ ಚಿತ್ರಗಳಿಗೂ ಇಷ್ಟೊಂದು ತೆಗೆದುಕೊಳ್ಳಲ್ಲ.!

ಹಿಂದಿ ಚಿತ್ರಗಳಿಗೂ ಇಷ್ಟೊಂದು ತೆಗೆದುಕೊಳ್ಳಲ್ಲ.!

ಹಿಂದಿ ಚಿತ್ರಗಳಲ್ಲಿ ನಟಿಸಲು ನಟಿ ಟಬುಗೆ ಇಷ್ಟೊಂದು ಸಂಭಾವನೆಯನ್ನ ಇಲ್ಲಿಯವರೆಗೂ ಯಾರೂ ಕೊಟ್ಟಿರಲಿಲ್ಲ. ತೆಲುಗಿನ 'ಅಲಾ ವೈಕುಂಠಪುರಮುಲೋ' ಚಿತ್ರದಲ್ಲಿ ಅಭಿನಯಿಸಿ ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ನಟಿ ಟಬು.

ಹೈದರಾಬಾದ್ ಹುಡುಗಿ ಟಬು.!

ಹೈದರಾಬಾದ್ ಹುಡುಗಿ ಟಬು.!

ನಟಿ ಟಬು ಬಾಲಿವುಡ್ ನಲ್ಲಿ ಖ್ಯಾತಿ ಪಡೆದಿರಬಹುದು. ಆದ್ರೆ, ಆಕೆ ಹುಟ್ಟಿ ಬೆಳೆದಿದ್ದೆಲ್ಲ ಹೈದರಾಬಾದ್ ನಲ್ಲಿ. ಬಣ್ಣದ ಬದುಕಿಗೆ ಕಾಲಿಟ್ಟ ಟಬು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಎರಡು ಚಿತ್ರರಂಗಗಳಲ್ಲೂ ಬೇಡಿಕೆ ಕಂಡುಕೊಂಡಿದ್ದಾರೆ.

ಒಂದು ದಶಕದ ಬಳಿಕ ಟಾಲಿವುಡ್ ಗೆ ಕಮ್ ಬ್ಯಾಕ್

ಒಂದು ದಶಕದ ಬಳಿಕ ಟಾಲಿವುಡ್ ಗೆ ಕಮ್ ಬ್ಯಾಕ್

2008 ರಲ್ಲಿ ತೆರೆಗೆ ಬಂದ 'ಪಾಂಡುರಂಗಾಡು' ಚಿತ್ರದ ಬಳಿಕ ಟಾಲಿವುಡ್ ಕಡೆ ಟಬು ಮುಖ ಮಾಡಿರಲಿಲ್ಲ. ಹನ್ನೊಂದು ವರ್ಷಗಳ ಲಾಂಗ್ ಗ್ಯಾಪ್ ಬಳಿಕ ತೆಲುಗು ಸಿನಿ ಅಂಗಳಕ್ಕೆ ಟಬು ವಾಪಸ್ ಆಗಿದ್ದು ಇದೇ 'ಅಲಾ ವೈಕುಂಠಪುರಮುಲೋ' ಚಿತ್ರದಿಂದ. ಹೀಗಾಗಿ, ಹೆಚ್ಚು ಸಂಭಾವನೆಯನ್ನೇ ಕೇಳಿ ಪಡೆದಿದ್ದಾರೆ ಟಬು.

More from Filmibeat

English summary
According to the latest Grapevine, Actress Tabu gets Rs.3 crore remuneration for Ala Vaikunthapurramuloo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X