ಹಾಲುಗೆನ್ನೆ ಸುಂದರಿ ಹಿಂದೆ ಕ್ರಿಕೆಟಿಗ ವಿರಾಟ್ ಕೊಹ್ಲಿ

By Rajendra

ಆಕೆ ಹಾಲುಗೆನ್ನೆ ಚೆಲುವೆ. ಈತ ಇನ್ನೂ ಚಿಗುರು ಮೀಸೆ ಹುಡುಗ. ಇವರಿಬ್ಬರ ನಡುವೆ ಈಗ ಕಣ್ಣಾಮುಚ್ಚಾಲೆ ಶುರುವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ನಲ್ಲಿ ಈ ರೀತಿಯ ಗಾಸಿಪ್ ಸುದ್ದಿಗಳು ಹರಿದಾಡುವುದು ಸರ್ವೇ ಸಾಮಾನ್ಯ. ಆದರೆ ಇತ್ತೀಚೆಗೆ ಕ್ರಿಕೆಟ್ ತಾರೆಗಳು ಈ ರೀತಿಯ ಸುದ್ದಿಗಳಲ್ಲಿ ಸಿಕ್ಕಿಬೀಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಹಾಗೂ ಲಕ್ಷ್ಮಿ ರೈ ನಡುವೆ ಏನೋ ಒಂಥರಾ ಸುದ್ದಿ ಹರಿದಾಡಿತ್ತು. ಈಗ ಚಿಗುರು ಮೀಸೆ ಹುಡುಗ ವಿರಾಟ್ ಕೊಹ್ಲಿ ಹಾಗೂ ಹಾಲುಗೆನ್ನೆ ಸುಂದರಿ ತಮನ್ನಾ ಭಾಟಿಯಾ ನಡುವೆ ಅಂತಹದ್ದೇ ಒಂದು ಸುದ್ದಿ ಹರಿದಾಡುತ್ತಿದೆ.

ಸದ್ಯಕ್ಕೆ ದಕ್ಷಿಣದಲ್ಲಿ ಮಿಂಚುತ್ತಿರುವ ಈ ಬೆಡಗಿ ಬಾಲಿವುಡ್ ನಲ್ಲೂ ಒಂದು ಪಾದ ಊರಿದ್ದಾರೆ. 'ಹಿಮ್ಮತ್ ವಾಲಾ' ಎಂಬ ಚಿತ್ರದ ಮೂಲಕ ತಮನ್ನಾ ಬಾಲಿವುಡ್ ಅಂಗಳಕ್ಕೂ ಅಡಿಯಿಡುತ್ತಿದ್ದಾರೆ. ಆದರೆ ಎತ್ತಣ ಮಾಮರ ಎತ್ತಣ ಕೋಗಿಲೆಯಂತಿದ್ದ ಇಬರಿಬ್ಬರೂ ಒಂದಾಗುವಂತಹ ಸುವರ್ಣಾವಕಾಶವೊಂದು ಸುನಾಯಾಸವಾಗಿ ಕೂಡಿಬಂತು.

ಇಬ್ಬರೂ ಸೆಲ್ ಫೋನ್ ಒಂದರ ಜಾಹೀರಾತಿಗೆ ಆಯ್ಕೆಯಾದರು. ಸೆಲ್ಕಾನ್ ಮೊಬೈನ್ ಬ್ರ್ಯಾಂಡ್ ರಾಯಭಾರಿಗಳಾದರು. ಇವರಿಬ್ಬರೂ ಮೊಟ್ಟಮೊದಲ ಬಾರಿಗೆ ಒಂದೇ ಜಾಹೀರಾತಿನಲ್ಲಿ ಅಭಿನಯಿಸುತ್ತಿರುವುದು. ಈಗ ಕ್ಲೈಮ್ಯಾಕ್ಸ್ ಸುದ್ದಿ ಏನೆಂದರೆ, ಜಾಹೀರಾತು ಚಿತ್ರೀಕರಣ ಎಲ್ಲಾ ಮುಗಿದಿದ್ದರೂ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದಾರಂತೆ.

ಮೊದ ಮೊದಲು ಮಾತಿಗಷ್ಟೇ ಸೀಮಿತವಾಗಿದ್ದ ಇವರಿಬ್ಬರ ನಡುವೆ ಈಗ ಪ್ರೀತಿ ಪ್ರೇಮ ಅನುರಾಗ ಅಲೆಅಲೆಯಾಗಿ ತೇಲಿಬರುತ್ತಿದೆಯಂತೆ. ಈಗಾಗಲೆ ವಿರಾಟ್ ಕೊಹ್ಲಿ ಮತ್ತೊಬ್ಬ ಬೆಡಗಿ ಸರಾ ಜೇನ್ ಜೊತೆ ಜೂಟಾಟ ಆಡುತ್ತಿರುವ ಸುದ್ದಿಯೂ ಇದೆ. ಈಗ ಈತನ ತೆಕ್ಕೆಗೆ ಹೊಸ ಬೆಡಗಿ ತಮನ್ನಾ ಸಿಕ್ಕಿದ್ದಾರೆ. ಮುಂದೇನಾಗುತ್ತದೋ ಏನೋ... (ನಾನಾ ಮೂಲಗಳಿಂದ)

More from Filmibeat

English summary
The rumors about cricketer Virat Kohli and Tamanna Bhatia going rounds in bollywood. Now the actress is pairing with run machine Virat Kohli for a cell phone ad. Both have been promoting the mobile brand Celkon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X