ಎನ್.ಆರ್.ಐ ಜೊತೆಯಲ್ಲಿ ತಮನ್ನಾ ಮದುವೆ.!

By Bharath Kumar

ಸೌತ್ ಸಿನಿ ದುನಿಯಾದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ತಮನ್ನಾ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ವೊಂದು ಸಂಚಲನ ಸೃಷ್ಟಿಸಿದೆ.

'ಬಾಹುಬಲಿ' ಚಿತ್ರದಲ್ಲಿ ನಟಿಸಿದ್ದ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಅವರ ಮದುವೆ ಸುದ್ದಿಯೇ ದಕ್ಷಿಣ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಹೀಗಿರುವಾಗ ಅದೇ 'ಬಾಹುಬಲಿ' ಚಿತ್ರದಲ್ಲಿ ನಟಿಸಿದ್ದ ಮತ್ತೋರ್ವ ಹೀರೋಯಿನ್ ತಮನ್ನಾ ಅವರ ಮದುವೆ ವಿಷ್ಯ ಈಗ ಟಾಕ್ ಆಫ್ ದಿ ಟೌನ್ ಆಗಿದೆ.

ಯಾವುದೇ ಲವ್ವು, ಗಾಸಿಪ್ ಇಲ್ಲದೇ ಸಿನಿಮಾದಲ್ಲಿ ನಟಿಸುತ್ತಿದ್ದ ತಮನ್ನಾ ಇದೇ ಮೊದಲ ಬಾರಿಗೆ ವೈಯಕ್ತಿಕ ಜೀವನದಲ್ಲಿ ಹೆಡ್ ಲೈನ್ ಆಗಿದ್ದಾಳೆ. ಎನ್.ಆರ್.ಐ ಡಾಕ್ಟರ್ ಜೊತೆ ವಿವಾಹವಾಗಲಿದ್ದಾರೆ ಎಂಬ ವರದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಇದು ನಿಜಾನ.? ಯಾರು ಆ ಎನ್.ಆರ್.ಐ ಡಾಕ್ಟರ್.? ಮುಂದೆ ಓದಿ....

ತೆಲುಗು 'ಕ್ವೀನ್'ಗೆ ಕಂಕಣ ಭಾಗ್ಯ

ತೆಲುಗು 'ಕ್ವೀನ್'ಗೆ ಕಂಕಣ ಭಾಗ್ಯ

ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸದ್ಯ, ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಹಿಂದಿ 'ಕ್ವೀನ್' ಚಿತ್ರದ ತೆಲುಗು ರೀಮೇಕ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗಿರುವಾಗ ತಮನ್ನಾ ಮದುವೆಯಾಗಲು ಸಿದ್ಧವಾಗಿದ್ದಾರೆ ಎಂಬ ಸುದ್ದಿ ಸೌಂಡ್ ಮಾಡ್ತಿದೆ.

ಎನ್.ಆರ್.ಐ ಡಾಕ್ಟರ್.?

ಎನ್.ಆರ್.ಐ ಡಾಕ್ಟರ್.?

ಸದ್ಯದ ಮಾಹಿತಿಯ ಪ್ರಕಾರ ತಮನ್ನಾ ಅವರು ಮದುವೆಯಾಗಲಿರುವ ಹುಡುಗ ಅಮೇರಿಕಾದಲ್ಲಿ ಡಾಕ್ಟರ್ ಅಂತೆ. ಕೇವಲ ವೈದ್ಯ ವೃತ್ತಿ ಮಾತ್ರವಲ್ಲದೇ ಬೇರೆ ವ್ಯವಹಾರಗಳನ್ನ ಕೂಡ ಮಾಡುತ್ತಿದ್ದಾರೆ. ಇವರನ್ನ ಕಂಡರೇ ತಮನ್ನಾಗೂ ಇಷ್ಟವಿದ್ದು, ಆದಷ್ಟೂ ಬೇಗ ಜಂಟಿಯಾಗಲಿದ್ದಾರಂತೆ.

ನಿಶ್ಚಿತಾರ್ಥಕ್ಕೆ ರೆಡಿ.!

ನಿಶ್ಚಿತಾರ್ಥಕ್ಕೆ ರೆಡಿ.!

ಅಂದ್ಹಾಗೆ, ತಮನ್ನಾ ಹಾಗೂ ಡಾಕ್ಟರ್ ಎರಡು ಕುಟುಂಬಗಳಿಗೂ ಇದು ಒಪ್ಪಿಗೆ ಇದ್ದು, ಈಗಾಗಲೇ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ನಿಶ್ಚಿತಾರ್ಥಕ್ಕೂ ಮುಹೂರ್ತ ನಿಗದಿ ಮಾಡುವ ಯೋಚನೆ ಮಾಡಲಾಗಿದೆಯಂತೆ.

ಮದುವೆ ನಂತರ ನಟನೆ.?

ಮದುವೆ ನಂತರ ನಟನೆ.?

ಎಲ್ಲ ಹೀರೋಯಿನ್ ಗಳು ಮದುವೆಯಾದಾಗ ಸಾಮಾನ್ಯವಾಗಿ ಕಾಡುವ ಪ್ರಶ್ನೆ ಇದು. ಮದುವೆ ಆದ್ಮೇಲೆ ಸಿನಿಮಾದಲ್ಲಿ ನಟಿಸ್ತಾರ.? ಈ ಪ್ರಶ್ನೆ ತಮನ್ನಾಗೂ ಕೂಡ ಎದುರಾಗಿದೆ. ಆದ್ರೆ, ಈ ಮದುವೆ ನಿಶ್ಚಿಯವಾಗುತ್ತಿರುವ ಬಗ್ಗೆ ಆಗಲಿ, ಅಮೇರಿಕಾ ಡಾಕ್ಟರ್ ಬಗ್ಗೆಯಾಗಲಿ ತಮನ್ನಾ ಎಲ್ಲಿಯೂ ಮಾತನಾಡಿಲ್ಲ. ಈ ಸುದ್ದಿ ಅದೇಗೆ ಹರಿದಾಡಿದೆ ಎಂಬುದು ಕೂಡ ಗೊತ್ತಿಲ್ಲ, ಆದ್ರೆ, ಫೇಸ್ ವುಕ್, ಟ್ವಿಟ್ಟರ್ ನಲ್ಲಿ ಮಾತ್ರ ಈ ಬಗ್ಗೆ ಚರ್ಚೆ ಜೋರಾಗಿದೆ.

More from Filmibeat

English summary
According to few sources, Tamanna will enter into wedlock with a NRI doctor who is currently in USA. Groom apart from being a doctor is a business tycoon too. Parents from both sides already looked for suitable dates on engagement and official announcement will come soon, says the same buzz.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X