ಎರಡು ಗಂಟೆಗೆ...ರು.20 ಲಕ್ಷ ಕೇಳುತ್ತಿರುವ ತಾರೆ
ನೋಡಲು ಹಾಲಿನಷ್ಟೇ ಬೆಳ್ಳಗಿರುವ ಈ ತಾರೆಗೆ ಚಿತ್ರೋದ್ಯಮ ಕೊಟ್ಟ ಬಿರುದು ಮಿಲ್ಕಿ ಬ್ಯೂಟಿ. ಆದರೆ ಹಣದ ವಿಚಾರಕ್ಕೆ ಬಂದರೆ ಈಕೆಯ ಮನಸ್ಸು ಮಾತ್ರ ಹಾಲಿನಂತಲ್ಲಾ ಕಲ್ಲಿನಂತಾಗುತ್ತದೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.
ಸದ್ಯಕ್ಕೆ ತೆಲುಗು, ತಮಿಳು ಜೊತೆಗೆ ಬಾಲಿವುಡ್ ನಲ್ಲೂ ಬಿಜಿಯಾಗಿರುವ ತಮನ್ನಾ ಭಾಟಿಯಾ ಸಂಭಾವನೆ ವಿಚಾರದಲ್ಲಿ ಬಲು ಕಟ್ಟುನಿಟ್ಟಂತೆ. ತಾನು ಡಿಮ್ಯಾಂಡ್ ಮಾಡಿದಷ್ಟು ಅಮೌಂಟ್ ಕೊಡಲೇಬೇಕಂತೆ. ಇಲ್ಲ ಅಂದ್ರೆ ನಿಮ್ಮ ಪ್ರಾಜೆಕ್ಟೂ ಬೇಡ ಏನೂ ಬೇಡ ಎಂದು ನಿರ್ಮಾಪಕರ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ ಎಂಬುದು ಲೇಟೇಸ್ಟ್ ಸಮಾಚಾರ. [ಹಾಟ್ ಬ್ಯೂಟಿ ತಮನ್ನಾ ಲಕ ಲಕ ಫೋಟೋಗಳು]
ಇತ್ತೀಚೆಗೆ ತಮಿಳು ನಿರ್ಮಾಪಕರೊಬ್ಬರು ತಮ್ಮ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡುವಂತೆ ತಮನ್ನಾರನ್ನು ಸಂಪರ್ಕಿಸಿದರಂತೆ. ಕೇವಲ ಎರಡೇ ಎರಡು ಗಂಟೆ ಕಾಲ್ ಶೀಟ್ ಕೇಳಿದರಂತೆ. ಅದಕ್ಕೆ ತಮನ್ನಾ ಕೇಳಿದ್ದು ಕೇವಲ ರು.20 ಲಕ್ಷ. ಬಿಲ್ ಕುಲ್ ಎಂದರೂ ಒಂದೇ ಒಂದು ರುಪಾಯಿ ಕಡಿಮೆ ಕೊಟ್ಟರೂ ಆಗಲ್ಲ ಎಂದರಂತೆ.ತಮಿಳು ಚಿತ್ರರಂಗದ ನಿರ್ಮಾಪಕ, ನಟ ಉದಯನಿಧಿ ಹೀರೋ ಆಗಿರುವ 'ನಾನ್ ಬೆಂಡ' ಎಂಬ ಚಿತ್ರದಲ್ಲಿ ತಮನ್ನಾ ಅವರದು ಗೆಸ್ಟ್ ಅಪಿಯರೆನ್ಸ್. ಅತಿಥಿ ಪಾತ್ರವಾದರೂ ಬಹಳ ಪ್ರಾಮುಖ್ಯತೆಯುಳ್ಳದ್ದಂತೆ. ಹಾಗಾಗಿ ತಮನ್ನಾ ಕೇಳಿದಷ್ಟು ಸಂಭಾವನೆಯನ್ನು ನಿರ್ಮಾಪಕರು ಕೊಟ್ಟಿದ್ದಾರೆ.
ಸದ್ಯಕ್ಕೆ ತಮನ್ನಾ ಅವರು ತೆಲುಗಿನಲ್ಲಿ ರಾಜಮೌಳಿ ಆಕ್ಷನ್ ಕಟ್ ಹೇಳುತ್ತಿರುವ 'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಿಂದಿಯಲ್ಲಿ ಹಮ್ ಷಕಲ್ಸ್ ಎಂಬ ಚಿತ್ರದಲ್ಲಿ ಹಾಗೂ ತಮಿಳಿನಲ್ಲಿ ಬಾಸ್ ಎಂಗಿರಾ ಭಾಸ್ಕರನ್ 2 ಎಂಬ ಚಿತ್ರದಲ್ಲಿ ಬಿಜಿಯಾಗಿದ್ದಾರೆ.


Click it and Unblock the Notifications












