ಮದುವೆ ಸುದ್ದಿ ಬಗ್ಗೆ ಮೌನ ಮುರಿದ ತ್ರಿಷಾ ಕೃಷ್ಣನ್

By Rajendra

ಇನ್ನೇನು ತೆಲುಗಿನ ಆರಡಿ ಎತ್ತರದ ನಟ ರಾಣಾ ದಗ್ಗುಬಾಟಿ ಅವರನ್ನು ಮೋಹಕ ತಾರೆ ತ್ರಿಷಾ ಕೃಷ್ಣನ್ ಕೈಹಿಡಿಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ತ್ರಿಷಾ ಪ್ರತಿಕ್ರಿಯಿಸಿದ್ದು, ತಾವಿಬ್ಬರೂ ಮದುವೆಯಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.

"ರಾಣಾ ನನಗೆ ಆತ್ಮೀಯ ಗೆಳೆಯ. ನಮ್ಮಿಬ್ಬರ ಗೆಳೆತನ ಹತ್ತು ವರ್ಷಗಳಷ್ಟು ಹಳೆಯದು. ಈಗದು ಪಕ್ವವಾಗಿದೆ. ನಮ್ಮದು ಮಾಗಿದ ಗೆಳೆತನ" ಎಂದಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ನಮ್ಮಿಬ್ಬರಿಗೆ ಮದುವೆ ಬಂಧ ಕಟ್ಟಬೇಡಿ ಎಂದು ತ್ರಿಷಾರ ವಿನಂತಿಸಿಕೊಂಡಿದ್ದಾರೆ.

"ನಾವಿಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದೇವೆ ಎಂಬುದು ಅಟಮಟ ಅಬದ್ಧ. ನಮ್ಮಿಬ್ಬರ ನಡುವೆ ಗೆಳೆತನವಿದೆಯಷ್ಟೆ ಮದುವೆಯಾಗುವ ಯೋಜನೆ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ.

ಆದರೆ ಇದುವರೆಗೂ ನನಗೆ ಮದುವೆಯಾಗಲು ಮನಮೆಚ್ಚಿದ ಹುಡುಗ ಸಿಕ್ಕಿಲ್ಲ. ಸದ್ಯಕ್ಕೆ ಮದುವೆಯಾಗುವ ಆಲೋಚನೆಯೂ ಇಲ್ಲ. ಇನ್ನೊಂದಷ್ಟು ಅರ್ಥಗರ್ಭಿತ ಚಿತ್ರಗಳಲ್ಲಿ ಅಭಿನಯಿಸಬೇಕು ಎಂದುಕೊಂಡಿದ್ದೇನೆ. ಹಾಗಾಗಿ ಸದ್ಯಕ್ಕೆ ಮದುವೆಯಾಗುವ ಪ್ರಶ್ನೆಯೇ ಇಲ್ಲ.

ಇದೇ ಸಂದರ್ಭದಲ್ಲಿ ತ್ರಿಷಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷಗಳಾಗುತ್ತಿವೆ. ದಶಕ ಕಳೆದರೂ ಇನ್ನೂ ಬೇಡಿಕೆ ಕುಸಿದಿಲ್ಲ. ತೆಲುಗು, ತಮಿಳು ಚಿತ್ರರಂಗಲ್ಲಿ ತ್ರಿಷಾ ಹೆಸರು ಇನ್ನೂ ಚಲಾವಣೆಯಲ್ಲಿದೆ. ಚಿತ್ರರಂಗದಲ್ಲಿ ಸಾಧಿಸಬೇಕಾಗಿರುವುದು ಇನ್ನೂ ಸಾಕಷ್ಟಿದೆ ಎನ್ನುತ್ತಾರೆ ತ್ರಿಷಾ.

ಕಳೆದ ಹತ್ತು ವರ್ಷಗಳಿಂದ ತ್ರಿಷಾ ಹಾಗೂ ರಾಣಾ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂಬ ಸುದ್ದಿ ಇದೆ. ಕಳೆದ ವರ್ಷ ಗೋವಾದಲ್ಲಿ ಇಬ್ಬರೂ ಹೊಸ ವರ್ಷದ ಸಂಭ್ರಮಾಚರಣೆ ಜೊತೆಯಾಗಿ ಆಚರಿಸಿಕೊಂಡಾಗಲೇ ಇವರಿಬ್ಬರ ನಡುವೆ ಏನೋ ಕುಚ್ ಕುಚ್ ವ್ಯವಹಾರ ನಡೆಯುತ್ತಿದೆ ಎಂಬ ಸುದ್ದಿಗಳು ಬಂದಿದ್ದವು. ಈಗ ಸ್ವತಃ ತ್ರಿಷಾ ತಮ್ಮ ಮದುವೆ ಬಗ್ಗೆ ಮೌನ ಮುರಿಯುವ ಮೂಲಕ ಗಾಸಿಪ್ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. (ಏಜೆನ್ಸೀಸ್)

More from Filmibeat

English summary
Actress Trisha Krishnan denies marriage rumours with actor Rana Daggubati. The actress saying that “Rana is a good friend of mine. We have been friends for nearly ten years and it is a matured friendship. There is no truth on the reports which suggested that we are in love”.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X