»   » ಗಪ್ ಚುಪ್ ಆಗಿ ಮದುವೆಯಾದರೇ ತ್ರಿಷಾ ಕೃಷ್ಣನ್?

ಗಪ್ ಚುಪ್ ಆಗಿ ಮದುವೆಯಾದರೇ ತ್ರಿಷಾ ಕೃಷ್ಣನ್?

By: ಉದಯರವಿ
Subscribe to Filmibeat Kannada

'ಪವರ್ ***' ಚಿತ್ರದ ಮೋಹಕ ಬೆಡಗಿ ತ್ರಿಷಾ ಕೃಷ್ಣನ್ ನಿಶ್ಚಿತಾರ್ಥವಾಗಿ ಮೂರು ತಿಂಗಳು ಕಳೆಯುತ್ತಿದೆ. ಆದರೆ ಮದುವೆ ಯಾವಾಗ, ತನ್ನ ಭಾವಿ ಪತಿ ಜೊತೆಗೆ ಯಾವಾಗ ಹಾರ ಬದಲಾಯಿಸಿಕೊಳ್ಳುತ್ತಾರೆ, ಈ ಕ್ಯೂಟ್ ಜೋಡಿಗೆ ಅಕ್ಷತೆ ಕಾಳು ಹಾಕೋದು ಯಾವಾಗ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಆದರೆ ಅವರ ಮದುವೆ ಗೆಟಪ್ ನಲ್ಲಿರುವ ಫೋಟೋ ಒಂದು ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಫೋಟೋ ನೋಡಿದವರು ಗಪ್ ಚುಪ್ ಆಗಿ ಅವರ ಮದುವೆ ನಡೆದುಹೋಯಿತೇ ಎಂದು ಮಾತನಾಡಿಕೊಳ್ಳುವಂತಾಗಿದೆ. ಆದರೆ ನಿಜಕ್ಕೂ ತ್ರಿಷಾ ಮದುವೆ ನಡೆದುಹೋಯಿತಾ? [ಉಂಗುರ ಬದಲಾಯಿಸಿಕೊಂಡ ತ್ರಿಷಾ ಮತ್ತು ವರುಣ್]

Actress Trisha Krishnan marriage rumours

ನಿಜಕ್ಕೂ ಹಾಗೇನಿಲ್ಲವಂತೆ. ಇತ್ತೀಚೆಗೆ ಅವರು ಚಿತ್ರವೊಂದರ ಶೂಟಿಂಗ್ ನಲ್ಲಿ ಈ ರೀತಿ ಕಾಣಿಸಿಕೊಂಡು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡವರು ಮದುವೆ ಮಾಡಿಕೊಳ್ಳದಿರಲು ಸಾಧ್ಯವೇ? ಸ್ವಲ್ಪ ದಿನ ಕಾದರೆ ಮದುವೆ ದಿನಾಂಕ ಗೊತ್ತಾಗುತ್ತದೆ ಎನ್ನುತ್ತಿದೆ ಕೋಲಿವುಡ್.

ಆರಂಭದಲ್ಲಿ ತ್ರಿಷಾ ಮದುವೆ ಸುದ್ದಿ ಲೀಕ್ ಆದಾಗ, ಹಾಗೇನು ಇಲ್ಲ, ಅದೆಲ್ಲಾ ಅಂತೆಕಂತೆ ಎಂದು ಹೇಳಿದ್ದರು. ಆದರೆ ಕಡೆಗೆ ಆಗಿದ್ದೇ ಬೇರೆ. ಉದ್ಯಮಿ ವರುಣ್ ಮಣಿಯನ್ ಅವರ ಜೊತೆ ಮದುವೆ ನಿಶ್ಚಯವಾಯಿತು. ಈಗ ನಿಶ್ಚಿತಾರ್ಥವಾಗಿದೆ. ಇನ್ನು ಮದುವೆ ಮಾತ್ರ ಬಾಕಿ ಇದೆ. ಆದರೆ ಗಾಸಿಪ್ ಗಳು ಮಾತ್ರ ಹರಿದಾಡುತ್ತಲೇ ಇವೆ.

English summary
Sandalwood 'Power ***' heroine Trisha Krishnan recently uploaded working stills from the movie on her Twitter page, in which she is dressed in traditional garb. However the picture made many wonder if the pretty actress had already tied the knot with fiance Varun Manian.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada