ರಾಜಕೀಯರಂಗಕ್ಕೆ ತ್ರಿಶಾ? ಬೆಂಬಲಕ್ಕೆ ನಿಂತಿರುವ ನಟ ಯಾರು?

ತಮಿಳು ನಟಿ ತ್ರಿಶಾ ರಾಜಕೀಯರಂಗಕ್ಕೆ ಎಂಟ್ರಿ ಕೊಡುತ್ತಾರೆ ಅನ್ನುವ ಸುದ್ದಿ ಈಗ ಕಾಲಿವುಡ್ ಗಲ್ಲಿಗಳಲ್ಲಿ ಚಕ್ಕರ್ ಹೊಡೀತಿದೆ. ಸ್ಟಾರ್ ನಟನೊಬ್ಬನ ಬೆಂಬಲದೊಂದಿಗೆ ಚೆನ್ನೈ ಚೆಲುವೆ ಈ ಸಾಹಸಕ್ಕೆ ಕೈ ಹಾಕಿದ್ದಾರೆ ಅನ್ನಲಾಗ್ತಿದೆ. ಈ ಬಗ್ಗೆ ಕಾಲಿವುಡ್‌ನಲ್ಲೀಗ ಬಿಸಿಬಿಸಿ ಚರ್ಚೆ ಶುರುವಾಗಿದೆ. ಜಯಲಲಿತಾ ಹಾದಿಯಲ್ಲಿ ತ್ರಿಶಾ ತಮಿಳುನಾಡು ಪಾಲಿಟಿಕ್ಸ್‌ನಲ್ಲಿ ಮೆರೆಯುವ ಕನಸು ಕಾಣುತ್ತಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿದೆ.

ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಈಗಾಗಲೇ ಸಾಕಷ್ಟು ನಟ-ನಟಿಯರು ರಾಜಕೀಯರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಕೆಲವರು ಸಿಎಂ ಪಟ್ಟಕ್ಕೂ ಏರಿದ್ದಾರೆ. ಬಣ್ಣದಲೋಕದಲ್ಲಿ ಮೆರೆದ ಸ್ಟಾರ್ಸ್ ಪಾಲಿಟಿಕ್ಸ್‌ನಲ್ಲಿ ಸೋತು ಸುಣ್ಣವಾಗಿರುವ ಉದಾಹರಣೆ ಕೂಡ ಕಣ್ಣ ಮುಂದೆ ಇದೆ. ಹಾಗಾಗಿ ಬಹುಭಾಷಾ ನಟಿ ತ್ರಿಶಾ ನಡೆ ತೀವ್ರ ಕುತೂಹಲ ಕೆರಳಿಸಿದೆ.

ತಮಿಳುನಾಡಿನಲ್ಲಿ ಸಿನಿಮಾ ಸೆಲೆಬ್ರೆಟಿಗಳು ರಾಜಕೀಯರಂಗಕ್ಕೆ ಬರುವುದು ಹೊಸದೇನು ಅಲ್ಲ. ಎಂಜಿಆರ್‌, ಕರುಣಾನಿಧಿ, ಜಯಲಲಿತಾ, ಕಮಲ್ ಹಾಸನ್ ಸೇರಿದಂತೆ ಹಲವು ಈ ಪ್ರಯತ್ನ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ರಾಜಕೀಯರಂಗಕ್ಕೆ ಧುಮುಕಿ ಜನಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ತಮ್ಮ ನಿರ್ಣಯದಿಂದ ಹಿಂದೆ ಸರಿದಿದ್ದರು. ಆಂಧ್ರದಲ್ಲಿ ಎನ್‌ಟಿಆರ್ 'ತೆಲುಗು ದೇಶಂ' ಪಕ್ಷ ಕಟ್ಟಿ ಸಿಎಂಗಾದಿಗೆ ಏರಿದ್ದರು. ಮೆಗಾಸ್ಟಾರ್ ಚಿರಂಜೀವಿ ಪ್ರಜಾರಾಜ್ಯಂ ಪಕ್ಷ ಕಟ್ಟಿ ಸೋಲುಂಡರು. ಪವನ್ ಕಲ್ಯಾಣ್ ಕೂಡ 'ಜನಸೇನಾ' ಪಕ್ಷ ಒಮ್ಮೆ ಚುನಾವಣೆಯಲ್ಲಿ ಸೋತರೂ ಛಲ ಬಿಡದೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

 ಕಾಂಗ್ರೆಸ್ ಪಕ್ಷಕ್ಕೆ ತ್ರಿಶಾ?

ಕಾಂಗ್ರೆಸ್ ಪಕ್ಷಕ್ಕೆ ತ್ರಿಶಾ?

ಸದ್ಯ ಕಾಲಿವುಡ್ ಗುಸುಗುಸು ಪ್ರಕಾರ ತ್ರಿಶಾ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎನ್ನಲಾಗುತ್ತಿದೆ. ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ದೊಡ್ಡ ಅಭಿಮಾನಿ ತ್ರಿಶಾ. ಕೆಲ ವರ್ಷಗಳ ಹಿಂದೆ ಜಯಲಲಿತಾ ಬಯೋಪಿಕ್‌ನಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ತಮಿಳುನಾಡು ರಾಜಕೀಯರಂಗದಲ್ಲಿ ಗುರ್ತಿಸಿಕೊಳ್ಳಲು ಆಕೆ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.

 ತ್ರಿಶಾಗೆ ಇಳಯ ದಳಪತಿ ಬೆಂಬಲ?

ತ್ರಿಶಾಗೆ ಇಳಯ ದಳಪತಿ ಬೆಂಬಲ?

ನಟಿ ತ್ರಿಶಾ ರಾಜಕೀಯರಂಗ ಪ್ರವೇಶದ ಹಿಂದೆ ನಟ ವಿಜಯ್ ಇದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತದೆ. ಇಳಯ ದಳಪತಿ ವಿಜಯ್‌ಗೆ ಬಹಳ ವರ್ಷಗಳಿಂದ ಪಾಲಿಟಿಕ್ಸ್ ಬಗ್ಗೆ ಆಸಕ್ತಿ ಇದೆ. ಕೆಲ ವರ್ಷಗಳ ಹಿಂದೆ ಹೊಸ ಪಕ್ಷ ಕಟ್ಟುತ್ತಾರೆ ಅನ್ನುವ ಚರ್ಚೆ ಕೂಡ ನಡೆದಿತ್ತು. ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ವಿಜಯ್ ಮುಂದೊಂದು ದಿನ ಜನಸೇವೆಗಾಗಿ ಪಾಲಿಟಿಕ್ಸ್‌ಗೆ ಬಂದೇ ಬರ್ತಾರೆ ಅನ್ನುವ ಲೆಕ್ಕಾಚಾರವೂ ಇದೆ. ವಿಜಯ್- ತ್ರಿಶಾ ಒಂದಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ವಿಜಯ್ ಮಾರ್ಗದರ್ಶನದಂತೆ ತ್ರಿಶಾ ರಾಜಕೀಯರಂಗ ಪ್ರವೇಶ ಆಗುತ್ತಿದೆ ಎನ್ನುವ ವಾದವೂ ಇದೆ.

 ಪಂಚಭಾಷೆ ತಾರೆಯಾಗಿ ತ್ರಿಶಾ

ಪಂಚಭಾಷೆ ತಾರೆಯಾಗಿ ತ್ರಿಶಾ

ಒಂದ್ಕಾಲಲ್ಲಿ ತ್ರಿಶಾಗೆ ಸಿಕ್ಕಾಪಟ್ಟೆ ಕ್ರೇಜ್ ಇತ್ತು. ತೆಲುಗಿನ 'ವರ್ಷಂ' ಸಿನಿಮಾ ಭಾರೀ ಹೆಸರು ತಂದುಕೊಟ್ಟಿತ್ತು. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಸಿನಿಮಾಗಳಲ್ಲೂ ಈ ಚೆನ್ನೈ ಚೆಲುವೆ ನಟಿಸಿ ಗೆದ್ದಿದ್ದಾರೆ. ಸೌತ್ ಸೂಪರ್ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡಿದ್ದಾರೆ. 'ಪವರ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ಮಿಂಚಿದ್ದರು.

 ಸಾಲು ಸಾಲು ಚಿತ್ರಗಳಲ್ಲಿ ತ್ರಿಶಾ ಬ್ಯುಸಿ

ಸಾಲು ಸಾಲು ಚಿತ್ರಗಳಲ್ಲಿ ತ್ರಿಶಾ ಬ್ಯುಸಿ

ಮಣಿರತ್ನಂ ನಿರ್ದೇಶನದ ಐತಿಹಾಸಿಕ ಸಿನಿಮಾ 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ತ್ರಿಶಾ ಬಣ್ಣ ಹಚ್ಚಿದ್ದಾರೆ. ತಮಿಳು, ಮಲಯಾಳಂ ಮತ್ತೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಉದ್ಯಮಿ ವರುಣ್ ಮಣಿಯನ್ ಜತೆ ತ್ರಿಶಾ ಮದುವೆ ನಿಶ್ಚಿತಾರ್ಥ ನೆರವೇರಿತ್ತು. ಕಾರಣಾಂತರಗಳಿಂದ ಈ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. 39 ವರ್ಷ ವಯಸ್ಸಿನ ತ್ರಿಶಾ ಸಿನಿಮಾಗಳಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದಾರೆ.

More from Filmibeat

English summary
Actress Trisha Set For Political Entry With Actor Vijay Support.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X