For Quick Alerts
  ALLOW NOTIFICATIONS  
  For Daily Alerts

  ಡೈರೆಕ್ಟರ್ ಜೊತೆ ಕಾರಲ್ಲೇ ಉದಯ ಭಾನು ಲವ್ವಿ ಡವ್ವಿ

  By ರವಿಕಿಶೋರ್
  |

  ದಕ್ಷಿಣ ಭಾರತದ ತಾರೆ ಉದಯ ಭಾನು ನೆನಪಿರಬೇಕಲ್ಲ. ಅದೇ ರೀ ನಮ್ಮ ನವರಸ ನಾಯಕ ಜಗ್ಗೇಶ್ ಜೊತೆ 'ಅಳಿಯ ಅಲ್ಲ ಮಗಳ ಗಂಡ' (1997) ಚಿತ್ರದಲ್ಲಿ ತಮ್ಮ ಸಪೂರ ದೇಹವನ್ನು "ತೈಲ ತೈಲ ಹುಯ್ ಲಾ..." ಎಂದು ಹಾಡುತ್ತಾ ಚಿತ್ರರಸಿಕರ ಮೈಮನಗಳನ್ನು ಪುಳಕಗೊಳಿಸಿದ್ದ ತಾರೆ. ಈಗ್ಯಾಕೆ ಈಕೆಯ ವಿಚಾರ ಅಂತೀರಾ?

  ಜಗ್ಗೇಶ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಪಡ್ಡೆಗಳ ಮನಸ್ಸಿನ ಮೇಲೆ ಅಚ್ಚಳಿಯದ ಮುದ್ರೆಯೊತ್ತಿದ ಈಯಮ್ಮನ ಲವ್ವಿ ಡವ್ವಿ ಪುರಾಣವೊಂದು ಬಯಲಾಗಿದೆ. ಈಗಾಗಲೆ ತೆಲುಗಿನಲ್ಲಿ ಐಟಂ ಗರ್ಲ್ ಆಗಿಯೂ ಗುರುತಿಸಿಕೊಂಡಿರುವ ಈಕೆ, ಇತ್ತೀಚೆಗೆ ನಿರ್ದೇಶಕನೊಬ್ಬನ ಜೊತೆ ಕಾರಲ್ಲಿ ಲವ್ವಿ ಡವ್ವಿ ಮಾಡುತ್ತಾ ಸಿಕ್ಕಿಬಿದ್ದಿದ್ದಾರೆ.

  ತೆಲುಗಿನ 'ಪೂಲ ರಂಗುಡು' ಎಂಬ ಚಿತ್ರದ ನಿರ್ದೇಶಕ ವೀರಭದ್ರಂ ಜೊತೆ ಈಕೆ ಗುಟ್ಟಾಗಿ ಕಾರಿನಲ್ಲಿ ಓಡಾಡುತ್ತಿದ್ದರಂತೆ. ಆದರೆ ಇವರ ಟೈಮು ಸರಿಯಿರಲಿಲ್ಲ ಅನ್ನಿಸುತ್ತದೆ, ಕಾರು ಅರ್ಧ ದಾರಿಯಲ್ಲೇ ಕೈಕೊಟ್ಟಿದೆ. ವಿಧಿ ಇಲ್ಲದೆ ಆತ ಕಾರನ್ನು ಸೈಡಿಗೆ ಹಾಕಿ ಲಿಫ್ಟ್ ಗಾಗಿ ಕೆಳಗಿಳಿದಿದ್ದಾನೆ.

  ಕಡೆಗೆ ಈತನ ಪಡಿಪಾಟಲು ಕಂಡು ಅದೇ ದಾರಿಯಲ್ಲಿ ಸಾಗುತ್ತಿದ್ದ ಸಿನೆಮಾ ಯುನಿಟ್ ವಾಹನವೊಂದು ನಿಲ್ಲಿಸಿದೆ. ಈತ ಕಾರ್ ಡೋರ್ ತೆಗೆದು ಉದಯ ಭಾನು ಸಮೇತ ಲಿಫ್ಟ್ ಕೊಟ್ಟ ವಾಹನ ಹತ್ತಿದ್ದಾನೆ. ಇವರಿಬ್ಬರನ್ನೂ ಕಂಡವರು ಗಪ್ ಚಿಪ್ ಆಗಿದ್ದಾರೆ.

  ಈತ ಉದಯ ಭಾನು ಜೊತೆ ಯಾವ ಚಿತ್ರವನ್ನೂ ಮಾಡುತ್ತಿಲ್ಲವಂತೆ. ಆದರೂ ಕಾರಿನಲ್ಲಿ ಈಕೆಯೊಂದಿಗೆ ಯಾಕೆ ಓಡಾಡುತ್ತಿದ್ದ. ಅದರಲ್ಲೂ ಇವರಿಬ್ಬರೂ ಹೈದರಾಬಾದಿನ ಔಟರ್ ರಿಂಗ್ ರೋಡಲ್ಲಿ ಇವರಿಬ್ಬರೂ ಸುತ್ತುತ್ತಿದ್ದದ್ದು ಕತ್ತಲು ಕವಿದ ಸಮಯದಲ್ಲಂತೆ. ಈ ಬಗ್ಗೆ ಟಾಲಿವುಡ್ ನಲ್ಲಿ ತಲೆಗೊಂದು ಮಾತನಾಡುತ್ತಿದ್ದಾರೆ.

  English summary
  South Indian hot beauty Udaya Bhanu was caught with Poola Rangadu Director Veera Bhadram at Hyderabad Ring Road. There was no other information available about this catch. The actress acted in kannada film Aliya Alla Magala Ganda (1997) with Jaggesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X